ಜಾನಪದ ಕಲಾ ಪೋಷಕ ಕೆ. ನಾಗರಾಜ್‌ಗೆ ‘ಕನ್ನಡ ಪಯಸ್ವಿನಿ ಕಲಾ ರತ್ನ’ ಅಂತರ್‌ರಾಜ್ಯ ಪ್ರಶಸ್ತಿ–2026

ಕಾಸರಗೋಡು: ಜಾನಪದ ಕಲೆಯ ಪೋಷಕ ಹಾಗೂ ಸಂಘಟಕರಾದ ಕೆ. ನಾಗರಾಜ್ ಅವರಿಗೆ ‘ಕನ್ನಡ ಪಯಸ್ವಿನಿ ಕಲಾ ರತ್ನ’ ಅಂತರ್‌ರಾಜ್ಯ ಪ್ರಶಸ್ತಿ–2026 ಪ್ರದಾನ ಮಾಡಲಾಗುತ್ತಿದೆ. ಜುಲೈ 26ರಂದು ಕನ್ನಡ ಭವನದಲ್ಲಿ ನಡೆಯಲಿರುವ ರಜತ ಸಂಭ್ರಮ ಸಮಾರೋಪ ಸಮಾರಂಭ ಹಾಗೂ ‘ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ’ದ ಅಂಗವಾಗಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಕೆ. ನಾಗರಾಜ್ ಅವರಿಗೆ ಪ್ರದಾನಿಸಲಾಗುವುದು. ಈ ಕುರಿತು ಸಮ್ಮೇಳನ ಸಮಿತಿ ಅಧ್ಯಕ್ಷರಾದ ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾದ ಡಾ….

Read More

ತೂಗುಸೇತುವೆಗಳ ಸರದಾರ’ ಡಾ. ಗಿರೀಶ್ ಭಾರದ್ವಾಜ್ ನಿಧನ: ವಿಜಯೇಂದ್ರ ಸಂತಾಪ

ಬೆಂಗಳೂರು: ‘ತೂಗುಸೇತುವೆಗಳ ಸರದಾರ’ ಎಂದೇ ಖ್ಯಾತರಾಗಿದ್ದ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಅವರ ನಿಧನಕ್ಕೆ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಡಾ. ಗಿರೀಶ್ ಭಾರದ್ವಾಜ್ ಅವರ ನಿಧನದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ತಮ್ಮ ಅಪಾರ ತಾಂತ್ರಿಕ ಜ್ಞಾನ ಮತ್ತು ಜನಪರ ಕಾಳಜಿಯಿಂದ ನೂರಾರು ತೂಗುಸೇತುವೆಗಳನ್ನು ನಿರ್ಮಿಸಿ, ಗ್ರಾಮೀಣ ಪ್ರದೇಶದ ಲಕ್ಷಾಂತರ ಜನರ ಬದುಕಿಗೆ ಆಸರೆಯಾಗಿದ್ದರು. ಅವರ ಸಾಧನೆ, ಸೇವಾ ಮನೋಭಾವ ಹಾಗೂ ಸರಳ ವ್ಯಕ್ತಿತ್ವ ಸದಾ…

Read More

ತೂಗುಸೇತುವೆಗಳ ಸರದಾರ’ ಪದ್ಮಶ್ರೀ ಡಾ. ಗಿರೀಶ್ ಭಾರದ್ವಾಜ್ ನಿಧನಕ್ಕೆ ಸಂಸದ ಕ್ಯಾ. ಚೌಟ ತೀವ್ರ ಸಂತಾಪ

ಮಂಗಳೂರು: ವಿಶಿಷ್ಟ ತಂತ್ರಜ್ಞಾನದ ಮೂಲಕ ಪರಿಸರ ಸ್ನೇಹಿ ತೂಗುಸೇತುವೆಗಳನ್ನು ನಿರ್ಮಿಸಿ ದೇಶದ ಗ್ರಾಮೀಣ ಭಾಗಗಳಲ್ಲಿ ಸಂಪರ್ಕ ಕ್ರಾಂತಿಗೆ ಕಾರಣರಾಗಿದ್ದ, ‘ತೂಗುಸೇತುವೆಗಳ ಸರದಾರ’ ಎಂದೇ ಖ್ಯಾತರಾಗಿದ್ದ ತುಳುನಾಡಿನ ಮಹಾನ್ ಸಾಧಕ, ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಅವರ ನಿಧನಕ್ಕೆ ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ದ. ಕ. ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ತಮ್ಮ ಶೋಕ ಸಂದೇಶದಲ್ಲಿ , “ಸಾಮಾನ್ಯ ಹಳ್ಳಿಗಳ ಜನಸಾಮಾನ್ಯರ ಹಾಗೂ ಶಾಲಾ ಮಕ್ಕಳ ಕಷ್ಟಗಳಿಗೆ ಸ್ಪಂದಿಸಿ, ತಮ್ಮ…

Read More

ಮಂಜೇಶ್ವರ: ಗ್ರಾಹಕರಿಂದ ಅಧಿಕ ದರ ವಸೂಲಿ : ವ್ಯಾಪಾರಿಗಳ ವಿರುದ್ಧ ಕ್ರಮಕ್ಕೆ ಗ್ರಾಹಕರ ವೇದಿಕೆ ಆಗ್ರಹ

ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಲವೊಂದು ಅಂಗಡಿಗಳಲ್ಲಿ ಬೆಲೆ ಪಟ್ಟಿಯನ್ನು ಪ್ರದರ್ಶಿಸದೆ, ಗ್ರಾಹಕರಿಂದ ನಿಗದಿತ ದರಕ್ಕಿಂತ ಅಧಿಕ ಹಣವನ್ನು ವಸೂಲಿ ಮಾಡುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬರುತ್ತಿವೆ.ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಮಂಜೇಶ್ವರ ಗ್ರಾಹಕರ ವೇದಿಕೆಯು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳನ್ನು ಒತ್ತಾಯಿಸಿದೆ. ​ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಗ್ರಾಹಕರ ವೇದಿಕೆಯ ಅಧ್ಯಕ್ಷ ಮುರಳಿಧರ್ ಭಟ್ ಮತ್ತು ಉಪಾಧ್ಯಕ್ಷ ಸಂಜೀವ ಶೆಟ್ಟಿ, ನಿಯಮಗಳನ್ನು ಉಲ್ಲಂಘಿಸಿ ಗ್ರಾಹಕರನ್ನು ಸುಲಿಗೆ ಮಾಡುತ್ತಿರುವ ವ್ಯಾಪಾರಿಗಳನ್ನು ತಕ್ಷಣವೇ ಗುರುತಿಸಿ ಸೂಕ್ತ…

Read More

ವಯನಾಡಿನಲ್ಲಿ ಮತ್ತೆ ಭಾರೀ ಭೂಕುಸಿತ: ಕಾರ್ಮಿಕರು ಸಿಲುಕಿದ ಶಂಕೆ, ರಕ್ಷಣಾ ಕಾರ್ಯಾಚರಣೆ ತೀವ್ರ

ವಯನಾಡ್: ಕೇರಳದ ವಯನಾಡ್ ಜಿಲ್ಲೆಯ ಮೇಪಾಡಿ ಸಮೀಪ ನಿರಂತರ ಮಳೆಯ ನಡುವೆ ಮತ್ತೆ ಭಾರೀ ಭೂಕುಸಿತ ಸಂಭವಿಸಿದ್ದು, ನಿರ್ಮಾಣ ಹಂತದ ಸುರಂಗ ಮಾರ್ಗ ಕಾಮಗಾರಿ ಪ್ರದೇಶದಲ್ಲಿ ಹಲವು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಭೂಕುಸಿತದಿಂದ ಒಂದು ಮನೆ ಹಾಗೂ ಚರ್ಚ್ ಸಂಪೂರ್ಣ ಕುಸಿದಿದ್ದು, ಬಸ್ ನಿಲ್ದಾಣ, ಸೇತುವೆ ಮತ್ತು ಎರಡು ಬಸ್‌ಗಳು ಮಣ್ಣಿನಡಿ ಹೂತುಹೋಗಿವೆ. ಸುರಂಗ ಕಾಮಗಾರಿಯಲ್ಲಿ ತೊಡಗಿದ್ದ ಸುಮಾರು 15 ಕಾರ್ಮಿಕರು ಕ್ಯಾಬಿನ್‌ನಲ್ಲಿ ಇದ್ದರೆಂದು ವರದಿಯಾಗಿದ್ದು, ಸ್ಥಳೀಯ ಕುಟುಂಬವೊಂದು ಸಹ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ….

Read More

ಇಂದು ವಿಶ್ವ ಚಾಕೊಲೇಟ್ ದಿನ; ನಿಮ್ಮ ನೆಚ್ಚಿನ ಸಿಹಿತಿಂಡಿಯ ಬಗ್ಗೆ ಈ 7 ಕುತೂಹಲಕಾರಿ ಸಂಗತಿಗಳು ನಿಮಗೆ ಗೊತ್ತೇ?*

ಚಾಕೊಲೇಟ್ ಎಂದರೆ ಮಕ್ಕಳಿಗೆ ಮಾತ್ರವಲ್ಲ, ದೊಡ್ಡವರಿಗೂ ಅಚ್ಚುಮೆಚ್ಚಿನ ಸಿಹಿತಿಂಡಿ. ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿಸಿದಾಗ ಅನೇಕ ಮಂದಿಗೆ ಮೊದಲಿಗೆ ನೆನಪಾಗುವುದು ಚಾಕೊಲೇಟ್. ಚಾಕೊಲೇಟ್ ಕೇಕ್, ಚಾಕೊಲೇಟ್ ಐಸ್‌ಕ್ರೀಮ್, ಹಾಟ್ ಚಾಕೊಲೇಟ್, ಡೆತ್ ಬೈ ಚಾಕೊಲೇಟ್, ಚಾಕೊಲೇಟ್ ಫ್ಲೇವರ್ ಪಾನೀಯಗಳು, ಚಾಕೊಲೇಟ್ ಟೀ, ಚಾಕೊಲೇಟ್ ಆರ್ಟ್ ಹೀಗೆ ಚಾಕೊಲೇಟ್ ರುಚಿ ಎಲ್ಲರ ಮನಸನ್ನೂ ಗೆದ್ದಿದೆ. ವಿಶ್ವ ಚಾಕೊಲೇಟ್ ದಿನದ ಅಂಗವಾಗಿ, ನಿಮ್ಮ ನೆಚ್ಚಿನ ಸಿಹಿತಿಂಡಿಯ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳು ಇಲ್ಲಿವೆ: 1. ಒಂದು ಕಾಲದಲ್ಲಿ ಚಾಕೊಲೇಟ್ ಹಣದಂತೆ…

Read More

ಇಂಡೋನೇಷ್ಯಾಗೆ ಬ್ರಹ್ಮೋಸ್, ಅಸ್ತ್ರ ಕ್ಷಿಪಣಿಗಳ ಪೂರೈಕೆಗೆ ಭಾರತ ನಿರ್ಧಾರ

ನವದೆಹಲಿ, ಜು. 7: ಪ್ರಧಾನಿ ನರೇಂದ್ರ ಮೋದಿ ಅವರ ಇಂಡೋನೇಷ್ಯಾ ಭೇಟಿಯ ಸಂದರ್ಭದಲ್ಲಿ ಭಾರತವು ಇಂಡೋನೇಷ್ಯಾಗೆ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ ಹಾಗೂ ಅಸ್ತ್ರ ಗಾಳಿಯಿಂದ-ಗಾಳಿಗೆ ಹೊಡೆಯುವ ಕ್ಷಿಪಣಿಗಳ ಪೂರೈಕೆಗೆ ಮುಂದಾಗಿರುವುದಾಗಿ ಕೇಂದ್ರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಆಪರೇಷನ್ ‘ಸಿಂದೂರ್’ ವೇಳೆ ಅಸ್ತ್ರ ಕ್ಷಿಪಣಿಯ ಕಾರ್ಯಕ್ಷಮತೆಯಿಂದ ಪ್ರಭಾವಿತವಾಗಿರುವ ಇಂಡೋನೇಷ್ಯಾ ಈ ಕ್ಷಿಪಣಿಗಳನ್ನು ಖರೀದಿಸಲು ಆಸಕ್ತಿ ತೋರಿದೆ. ಜೊತೆಗೆ, ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆಯ ಹೆಚ್ಚುವರಿ ಬ್ಯಾಟರಿಗಳನ್ನೂ ಭಾರತ ಪೂರೈಸಲಿದೆ. ರಕ್ಷಣಾ ಸಹಕಾರದ ಜೊತೆಗೆ ಇಂಡೋನೇಷ್ಯಾದ ಅಗತ್ಯಗಳಿಗೆ ತಕ್ಕಂತೆ…

Read More

ಪದ್ಮಶ್ರೀ ಪುರಸ್ಕೃತ ‘ಬ್ರಿಡ್ಜ್‌ಮ್ಯಾನ್ ಆಫ್ ಇಂಡಿಯಾ’ ಡಾ. ಗಿರೀಶ್ ಭಾರದ್ವಾಜ್ ನಿಧನ …. !

ಸುಳ್ಯ: ಭಾರತದಾದ್ಯಂತ 125ಕ್ಕೂ ಹೆಚ್ಚು ತೂಗುಸೇತುವೆಗಳನ್ನು ನಿರ್ಮಿಸಿ ‘ಬ್ರಿಡ್ಜ್‌ಮ್ಯಾನ್ ಆಫ್ ಇಂಡಿಯಾ’ ಹಾಗೂ ‘ಸೇತುಬಂಧು’ ಎಂದೇ ಖ್ಯಾತಿ ಪಡೆದಿದ್ದ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಅವರು ಮಂಗಳವಾರ ಮುಂಜಾನೆ ಸುಳ್ಯದ ಕೆ.ವಿ.ಜಿ. ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು. ಹೃದಯ ಸಂಬಂಧಿ ಸಮಸ್ಯೆಯಿಂದಾಗಿ ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. 1989ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅರಂಬೂರಿನಲ್ಲಿ ಪಯಸ್ವಿನಿ ನದಿಗೆ ಅಡ್ಡಲಾಗಿ ತಮ್ಮ ಮೊದಲ ತೂಗುಸೇತುವೆಯನ್ನು ನಿರ್ಮಿಸುವ…

Read More

42 ವರ್ಷದ ನಿಗೂಢತೆ ಮತ್ತೆ ಚರ್ಚೆಗೆ; ಸುಕುಮಾರ ಕುರುಪ್ ನಾಪತ್ತೆ ಪ್ರಕರಣದ ಧಾಕಲೆಗಳನ್ನು ಪರಿಶೀಲಿಸಿದ ಕ್ರೈಂ ಬ್ರಾಂಚ್

ತಿರುವನಂತಪುರಂ: ನಾಲ್ಕು ದಶಕಗಳಿಂದ ನಿಗೂಢವಾಗಿರುವ ಸುಕುಮಾರ ಕುರುಪ್ ನಾಪತ್ತೆ ಪ್ರಕರಣ ಮತ್ತೆ ಸುದ್ದಿಯಲ್ಲಿದೆ. ಈ ಪ್ರಕರಣದ ಧಾಕಲೆಗಳನ್ನು ಕ್ರೈಂ ಬ್ರಾಂಚ್ ಪರಿಶೀಲಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ.ಆದರೆ, ಪ್ರಕರಣವನ್ನು ಮರು ತನಿಖೆ ನಡೆಸುವ ಉದ್ದೇಶದಿಂದ ಧಾಕಲೆಗಳನ್ನು ಪರಿಶೀಲಿಸಲಾಗಿಲ್ಲ ಎಂದು ಕ್ರೈಂ ಬ್ರಾಂಚ್ ಸ್ಪಷ್ಟಪಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೊಲ್ಕತ್ತಾದಲ್ಲಿ ತಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ಸುಕುಮಾರ ಕುರುಪ್ ಅವರನ್ನು ನೋಡಿದ್ದೇನೆ ಎಂದು ಹೇಳಿರುವ ಒಬ್ಬ ನರ್ಸ್ ಅವರ ಹೇಳಿಕೆಯನ್ನು ಕ್ರೈಂ ಬ್ರಾಂಚ್ ದಾಖಲಿಸಿದೆ. ಹಲವು ವರ್ಷಗಳ ಹಿಂದೆ ಪೊಲೀಸರಿಗೆ…

Read More

ತುಳು ಕಥಾಸಂಕಲನ ‘ನಾಕೂರು’ ತೆಲುಗು ಅನುವಾದ ಕೃತಿ ಬಿಡುಗಡೆ

ಮಂಗಳೂರು: ಹಿರಿಯ ಕವಿ–ಸಾಹಿತಿ ಡಾ. ವಸಂತಕುಮಾರ ಪೆರ್ಲ ಅವರ ತುಳು ಭಾಷೆಯ ಹತ್ತು ಆಯ್ದ ಸಣ್ಣಕಥೆಗಳನ್ನು ಹೈದರಾಬಾದ್‌ನ ರಂಗನಾಥ ರಾವ್ ಅವರು ತೆಲುಗಿಗೆ ಅನುವಾದಿಸಿರುವ ‘ನಾಕೂರು’ ಕೃತಿಯನ್ನು ನಗರದ ಪತ್ರಿಕಾಭವನದಲ್ಲಿ ಇಂದು ಬಿಡುಗಡೆಗೊಳಿಸಲಾಯಿತು. ತುಳುನಾಡಿನ ಬದುಕು, ಸಂಸ್ಕೃತಿ, ಜಾನಪದ ಹಾಗೂ ಪ್ರಾದೇಶಿಕ ವೈಶಿಷ್ಟ್ಯಗಳನ್ನು ಪ್ರತಿಬಿಂಬಿಸುವ ಈ ಕಥೆಗಳು ಮೊದಲ ಬಾರಿಗೆ ತುಳುವಿನಿಂದ ತೆಲುಗಿಗೆ ಅನುವಾದಗೊಂಡು ಪುಸ್ತಕ ರೂಪದಲ್ಲಿ ಪ್ರಕಟವಾಗಿದ್ದು, ತೆಲುಗು ಓದುಗರಿಗೆ ತುಳುನಾಡಿನ ಜೀವನಶೈಲಿ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಮಹತ್ವದ ಕೃತಿಯಾಗಿದೆ. ಕಾರ್ಯಕ್ರಮದಲ್ಲಿ ಖ್ಯಾತ ಲೇಖಕ ಡಾ….

Read More
error: Content is protected !!