ಹೆಬ್ರಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ

ಮಂಗಳೂರು: ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ International Women’s Day ಪ್ರಯುಕ್ತ ಅಲಯನ್ಸ್ ಕ್ಲಬ್ ಹೆಬ್ರಿ ಮತ್ತು ಲೇಡೀಸ್ ಅಲಯನ್ಸ್ ಕ್ಲಬ್ ಹೆಬ್ರಿ ಸಿಟಿ ವತಿಯಿಂದ ಕಬ್ಬಿನಾಲೆ ಗ್ರಾಮದ ಮೆದಿಪು ನಿವಾಸಿ ನಾಟಿ ವೈದ್ಯೆ ಹಾಗೂ 2025ನೇ ಸಾಲಿನ ಕರ್ನಾಟಕ ಜಾನಪದ ಅಕಾಡಮಿಯ ವಾರ್ಷಿಕ ಜಾನಪದ ಗೌರವ ಪ್ರಶಸ್ತಿ ಪುರಸ್ಕೃತ Gulabi Gowdthi ಅವರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು.

ಅಲಯನ್ಸ್ ಕ್ಲಬ್ ಹೆಬ್ರಿಯ ಅಧ್ಯಕ್ಷ ಕೆ. ರಾಮಚಂದ್ರ ಭಟ್, ಕಾರ್ಯದರ್ಶಿ ಬಾಲಚಂದ್ರ ಎಂ., ಹಾಗೂ ಲೇಡೀಸ್ ಅಲಯನ್ಸ್ ಕ್ಲಬ್ ಹೆಬ್ರಿ ಸಿಟಿಯ ಅಧ್ಯಕ್ಷೆ ಸುನೀತ ಹೆಬ್ಬಾರ್ ಅವರು ಗುಲಾಬಿ ಗೌಡ್ತಿ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸದಸ್ಯರಾದ ಪುಷ್ಪಾವತಿ ಶೆಟ್ಟಿ, ರತ್ನಾವತಿ ನಾಯಕ್ ಹಾಗೂ ಸ್ಥಳೀಯರಾದ ಸದಾನಂದ ರಾವ್ ಉಪಸ್ಥಿತರಿದ್ದರು.

ಹಲವಾರು ವರ್ಷಗಳಿಂದ ವಿಷಹಾವು ಕಡಿತ, ಜ್ವರ, ಮಹಿಳೆಯರ ಕೆಲವು ಆರೋಗ್ಯ ಸಮಸ್ಯೆಗಳು, ತಲೆ ಕೂದಲು ಉದುರುವಿಕೆ ಮತ್ತು ಚರ್ಮರೋಗಗಳಿಗೆ ನಾಟಿ ಔಷಧಿ ನೀಡುತ್ತಾ ಬಂದಿರುವ 89 ವರ್ಷದ ಗುಲಾಬಿ ಗೌಡ್ತಿ ಅವರು ವಯೋಸಹಜ ಅಸೌಖ್ಯ ಮತ್ತು ಕಣ್ಣಿನ ಸಮಸ್ಯೆಯಿಂದಾಗಿ ಈಗ ತಮ್ಮ ಸೇವೆಗೆ ವಿದಾಯ ನೀಡಿದ್ದಾರೆ.

ಬಡತನದಲ್ಲಿಯೇ ನಿರಂತರ ಸೇವೆ ಸಲ್ಲಿಸಿದ ಅವರ ಕೊಡುಗೆಯನ್ನು ಗುರುತಿಸಿ, ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!