ಮಂಗಳೂರು: ಮಂಗಳೂರು ಸೆಂಟ್ರಲ್ ಮತ್ತು ಸುಬ್ರಹ್ಮಣ್ಯ ನಡುವೆ ಸಂಚರಿಸುವ ಪ್ರಯಾಣಿಕ ರೈಲು ಸೇವೆಗಳಲ್ಲಿ ಪ್ರಮುಖ ಬದಲಾವಣೆಗಳನ್ನು ರೈಲ್ವೆ ಇಲಾಖೆ ಘೋಷಿಸಿದೆ.
ರೈಲು ಸಂಖ್ಯೆ 56629 (ಮಂಗಳೂರು–ಸುಬ್ರಹ್ಮಣ್ಯ ರಸ್ತೆ ಪ್ಯಾಸೆಂಜರ್) ಹಾಗೂ ರೈಲು ಸಂಖ್ಯೆ 56630 (ಸುಬ್ರಹ್ಮಣ್ಯ ರಸ್ತೆ–ಮಂಗಳೂರು ಪ್ಯಾಸೆಂಜರ್) ರೈಲುಗಳನ್ನು ಒಟ್ಟು 35 ದಿನಗಳ ಕಾಲ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಈ ರೈಲುಗಳು ಮಾರ್ಚ್ 23ರಿಂದ ಏಪ್ರಿಲ್ 14ರವರೆಗೆ ಹಾಗೂ ಜೂನ್ 10ರಿಂದ ಜೂನ್ 21ರವರೆಗೆ ಸಂಚರಿಸುವುದಿಲ್ಲ ಎಂದು ಇಲಾಖೆ ತಿಳಿಸಿದೆ.

ಇದರೊಂದಿಗೆ, ಏಪ್ರಿಲ್ ತಿಂಗಳಲ್ಲಿ ಹಲವಾರು ಎಕ್ಸ್ಪ್ರೆಸ್ ರೈಲುಗಳ ವೇಳಾಪಟ್ಟಿಯಲ್ಲೂ ಬದಲಾವಣೆ ಮಾಡಲಾಗಿದೆ. ಯಶವಂತಪುರ–ಕಾರವಾರ (16515), ಯಶವಂತಪುರ–ಮಂಗಳೂರು (16575) ಮತ್ತು ಯಶವಂತಪುರ–ಮಂಗಳೂರು (16539) ಎಕ್ಸ್ಪ್ರೆಸ್ ರೈಲುಗಳು ಸುಮಾರು 20 ನಿಮಿಷಗಳವರೆಗೆ ವಿಳಂಬವಾಗಿ ಸಂಚರಿಸಲಿವೆ.
ಮಂಗಳೂರು–ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು (56229) ಏಪ್ರಿಲ್ 21ರಿಂದ ಜೂನ್ 9ರವರೆಗೆ ಸುಮಾರು 55 ನಿಮಿಷಗಳ ಕಾಲ ವಿಳಂಬವಾಗಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಿಸಿದೆ.
ಪ್ರಯಾಣಿಕರು ತಮ್ಮ ಪ್ರಯಾಣವನ್ನು ಪೂರ್ವ ಯೋಜನೆ ಮಾಡಿಕೊಂಡು, ಬದಲಾದ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.


