ಕುಂಬಳೆಯಲ್ಲಿ ಯುವಕನ ಹತ್ಯೆ ಯತ್ನ ಪ್ರಕರಣ: ಆರು ಮಂದಿ ಆರೋಪಿಗಳ ಬಂಧನ

ಕಾಸರಗೋಡು: ಕುಂಬಳೆಯ ಕೃಷ್ಣನಗರ ಸಮೀಪ ಯುವಕನನ್ನು ಹತ್ಯೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಆರು ಮಂದಿ ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ.

ಕುಂಬಳೆ ಕುಂಟಾಗಿರಡ್ಕ ಪ್ರದೇಶದ ಮಹಮ್ಮದ್ ಹಾಶಿಂ (ಆಶಿಂ), ಅಬು ಜಾಸಿಂ (ಜಾಸಿ), ರಮೀಸ್ ರೋಷಾಲ್ ಫಿರೋಸ್ (ರಮೀಸ್), ಮಿನ್ಹಾಜ್ ಅಬ್ದುಲ್ಲ (ಮಿನ್ಹಾಜ್), ಫಝಲ್ ರಹ್ಮಾನ್ (ಪಜಿಲು) ಮತ್ತು ಮೊಹಿಯುದ್ದೀನ್ ನಿಹಾಲ್ (ನಿಹಾಲ್) ಇವರು ಕುಂಬಳ ಪೊಲೀಸ್ ಠಾಣೆಯ ಉಪನಿರೀಕ್ಷಕ ಅನಂತಕೃಷ್ಣನ್ ಆರ್ ಮೆನನ್ ಅವರ ಮುಂದೆ ಶರಣಾಗಿದ್ದಾರೆ.

ಮಾರ್ಚ್ 30ರಂದು ಮಧ್ಯರಾತ್ರಿ ಸುಮಾರು 12 ಗಂಟೆಗೆ ಕುಂಬಳೆ –ಬದಿಯಡ್ಕ ರಸ್ತೆಯ ಕೃಷ್ಣನಗರ ಸಮೀಪದ ಬಸ್ ನಿಲ್ದಾಣದ ಬಳಿ ಅಫ್‌ಸಾನ್ ಫಹದಿ (19) ಅವರನ್ನು ಹತ್ಯೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು ಇವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದ ಮತ್ತೊಬ್ಬ ಆರೋಪಿ ಬೋವಿಕಾನ ಮುತಲಪ್ಪಾರ ನಿವಾಸಿ ಅಮೀನ್ ಸಫಾ (21) ಅವರನ್ನು ಇತ್ತೀಚೆಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಪೊಲೀಸರು ಮೊದಲು ಹೊರಡಿಸಿದ್ದ ಸೂಚನೆ ಆಧರಿಸಿ ವಿಮಾನ ನಿಲ್ದಾಣದ ಅಧಿಕಾರಿಗಳು ಅವರನ್ನು ತಡೆದು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ, ಉಪನಿರೀಕ್ಷಕ ಸನಿತ್ ನೇತೃತ್ವದ ಪೊಲೀಸ್ ತಂಡ ಚೆನ್ನೈಗೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದು ಮಂಗಳವಾರ ಸಂಜೆ ಕುಂಬಳಕ್ಕೆ ಕರೆತಂದು ಬಂಧನ ದಾಖಲಿಸಿದರು

ಬಳಿಕ ಸಹಆರೋಪಿಗಳಾದ ಆರು ಮಂದಿ ಸ್ವಯಂಪ್ರೇರಿತರಾಗಿ ಪೊಲೀಸರಿಗೆ ಶರಣಾಗಿದ್ದಾರೆ. ಪ್ರಕರಣದ ಇನ್ನೊಬ್ಬ ಆರೋಪಿ ಮಹಮ್ಮದ್ ಅನಸ್ ಈಗಾಗಲೇ ಬಂಧನಕ್ಕೊಳಗಾಗಿದ್ದಾನೆ. ಈ ಪ್ರಕರಣದ ತನಿಖೆ ಮುಂದುವರಿದಿದೆ

SHARE
Loading spinner

Leave a Reply

Your email address will not be published. Required fields are marked *

error: Content is protected !!