ಜುಲೈ 3ರಂದು ರಾಜ್ಯಾದ್ಯಂತ ತೆರೆಗೆ ‘ಅಪರಾಧಿ ನಾನಲ್ಲ’ಅರ್ಜುನ್ ಕಾಪಿಕಾಡ್, ಪ್ರಮೋದ್ ಶೆಟ್ಟಿ, ಜ್ಯೋತಿ ರೈ ಪ್ರಮುಖ ಪಾತ್ರಗಳಲ್ಲಿ ಅಭಿನಯ

ಮಂಗಳೂರು, ಜೂನ್ 30: ಎಸ್‌ಎಲ್‌ವಿ ಕಲರ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ‘ಅಪರಾಧಿ ನಾನಲ್ಲ’ ಕನ್ನಡ ಚಲನಚಿತ್ರವು ಜುಲೈ 3ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ಯಶಂತ್ ಕಲ್ಲಡ್ಕ ನಿರ್ದೇಶಿಸಿರುವ ಈ ಚಿತ್ರದಲ್ಲಿ ಆಕ್ಷನ್ ಕಿಂಗ್ ಅರ್ಜುನ್ ಕಾಪಿಕಾಡ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ವಿಭಿನ್ನ ಕಥಾಹಂದರದ ಮೂಲಕ ಈಗಾಗಲೇ ಟ್ರೈಲರ್‌ನಿಂದ ಸಿನಿಪ್ರಿಯರ ಗಮನ ಸೆಳೆದಿದೆ.

ಚಿತ್ರದಲ್ಲಿ ನಾಯಕಿಯರಾಗಿ ಅಮೃತ ಮೂರ್ತಿ ಹಾಗೂ ಶ್ರೀಶಾ ಸಾಮಾನಿ ಅಭಿನಯಿಸಿದ್ದಾರೆ. ಕನ್ನಡ ಮತ್ತು ತೆಲುಗು ಚಿತ್ರರಂಗದ ನಟಿ ಜ್ಯೋತಿ ರೈ, ನಟ ಪ್ರಮೋದ್ ಶೆಟ್ಟಿ, ದಿನೇಶ್ ಮಂಗಳೂರು, ನೀತು ಶೆಟ್ಟಿ, ನವೀನ್ ಡಿ. ಪಡೀಲ್, ಅರ್ಜುನ್ ಕಜೆ ಹಾಗೂ ಅನೂಪ್ ಸಾಗರ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ವಿಭಿನ್ನ ಕಥಾವಸ್ತು ಮತ್ತು ಕುತೂಹಲಕಾರಿ ನಿರೂಪಣೆಯೊಂದಿಗೆ ಮೂಡಿಬಂದಿರುವ ‘ಅಪರಾಧಿ ನಾನಲ್ಲ’ ಚಿತ್ರವು ಈಗಾಗಲೇ ಬಿಡುಗಡೆಯಾದ ಟ್ರೈಲರ್ ಮೂಲಕ ಸಿನಿ ಪ್ರೇಕ್ಷಕರಲ್ಲಿ ನಿರೀಕ್ಷೆ ಮೂಡಿಸಿದ್ದು, ಜುಲೈ 3ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಜ್ಜಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!