ಮಂಜೇಶ್ವರ: ನದಿ ಪಾತ್ರಗಳಲ್ಲಿ ಪರಿಸರ ನಾಶ ಮಾಡುತ್ತಿದ್ದ ಅನಧಿಕೃತ ಮರಳು ಮಾಫಿಯಾದ ಮತ್ತೊಬ್ಬ ಕಿರಾತಕ ಕುಂಬಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಮೀಂಜ ಜೋಡುಕಲ್ಲು ನಿವಾಸಿ ಗಿರೀಶ್ ಎ. (40) ಎಂಬಾತನನ್ನು ಕೇರಳ ನದಿ ಸಂರಕ್ಷಣಾ ಕಾಯ್ದೆಯಡಿ ಬಂಧಿಸಿ, ಸಾಗಾಟಕ್ಕೆ ಬಳಸಿದ್ದ ಟಿಪ್ಪರ್ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹೇರೂರು ಗ್ರಾಮದ ಚಿನ್ನಮೊಗರು ಮಾರ್ಗವಾಗಿ ಪಾಚ್ಚಾನಿ ಹೊಳೆಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಕುಂಬಳೆ ಪೋಲೀಸರ ತಂಡ ಅಡ್ಡಗಟ್ಟಿ ದಾಳಿ ನಡೆಸಿ ಸೆರೆ ಹಿಡಿದಿದ್ದಾರೆ. ಮತ್ತೊಬ್ಬ ವ್ಯಕ್ತಿಯ ಕುಮ್ಮಕ್ಕಿನಿಂದ ಈ ದಂಧೆ ನಡೆಸುತ್ತಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ.
ನದಿಗಳನ್ನು ಬರಿದು ಮಾಡುತ್ತಿರುವ ಇಂತಹ ಮಾಫಿಯಾಗಳ ವಿರುದ್ಧ ಪೊಲೀಸ್ ಇಲಾಖೆ ಉಗ್ರ ಕ್ರಮ ಕೈಗೊಂಡಿದ್ದು, ಈ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ. ಪ್ರಕೃತಿಯನ್ನು ಬಲಿಕೊಟ್ಟು ಹಣ ಮಾಡುವವರಿಗೆ ಇದು ಎಚ್ಚರಿಕೆಯಾಗಬೇಕಿದೆ.


