ಉಪ್ಪಳ, ಜುಲೈ 14: ಶ್ರೀ ಅಯ್ಯಪ್ಪ ಸೇವಾ ಸಮಿತಿ, ಅಯ್ಯಪ್ಪ ಮಂದಿರ ಉಪ್ಪಳದ ಆಶ್ರಯದಲ್ಲಿ ನಡೆಯುತ್ತಿರುವ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರದ ಅವಧಿಯನ್ನು ಜುಲೈ 18, 2026ರ ಶನಿವಾರದವರೆಗೆ ವಿಸ್ತರಿಸಲಾಗಿದೆ.

ಶಿಬಿರಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ದಿನದಿಂದ ದಿನಕ್ಕೆ ಫಲಾನುಭವಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹೆಚ್ಚಿನ ಜನರಿಗೆ ಈ ಸೇವೆಯ ಪ್ರಯೋಜನ ದೊರೆಯುವ ಉದ್ದೇಶದಿಂದ ಅವಧಿ ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.

ಆಸಕ್ತ ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉಚಿತ ಫೂಟ್ ಪಲ್ಸ್ ಥೆರಪಿ ಸೇವೆಯನ್ನು ಪಡೆಯುವಂತೆ ಶ್ರೀ ಅಯ್ಯಪ್ಪ ಸೇವಾ ಸಮಿತಿ ಮನವಿ ಮಾಡಿದೆ.

ಗಮನಿಸಿ: ಶಿಬಿರದ ಕೊನೆಯ ದಿನಾಂಕ ಜುಲೈ 18, 2026 (ಶನಿವಾರ) ಆಗಿರುತ್ತದೆ.
ವ್ಯವಸ್ಥಾಪಕರು ಫೂಟ್ ಪಲ್ಸ್ ಥೆರಪಿ.

