ಮಂಜೇಶ್ವರ: ಭಾರಿ ಪ್ರಮಾಣದ ಎಂಡಿಎಂಎ ಮತ್ತು ಗಾಂಜಾವನ್ನು ವಶಪಡಿಸಿಕೊಂಡ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ 9ನೇ ಆರೋಪಿಯನ್ನು ಪೊಲೀಸರು ಕರ್ನಾಟಕದಲ್ಲಿ ಬಂಧಿಸಿದ್ದಾರೆ.

ಕಾಸರಗೋಡು ತಳಂಗರೆ ಬಾಂಕೋಟ್ನ ಶಬೀಬಬಾಗ್ ಹೌಸ್ ನಿವಾಸಿ ಮೊಹಮ್ಮದ್ ಲಿಸಾನ್ ಅಲಿ (32) ಬಂಧಿತ ಆರೋಪಿ.
ಕಾಸರಗೋಡು ಎಎಸ್ಪಿ ಅಶೋಕ್ ಅಚ್ಯುತ್ ಅವರ ಮೇಲ್ವಿಚಾರಣೆಯಲ್ಲಿ ಮಂಜೇಶ್ವರ ಪೊಲೀಸ್ ಇನ್ಸ್ಪೆಕ್ಟರ್ ಪಿ.ಕೆ. ಜಿಜೇಶ್ ನೇತೃತ್ವದ ತಂಡವು ಕರ್ನಾಟಕದ ಮಡಿಕೇರಿ ಕುಶಾಲನಗರದಲ್ಲಿರುವ ತಲೆಮರೆಸಿಕೊಂಡಿದ್ದ ಸ್ಥಳದಲ್ಲೇ ಆರೋಪಿಯನ್ನು ಬಂಧಿಸಿದೆ.

2024 ಸೆಪ್ಟೆಂಬರ್ 20ರಂದು ಸಂಜೆ 3.45ಕ್ಕೆ ಈ ಘಟನೆ ನಡೆದಿತ್ತು.

