ಮಂಜೇಶ್ವರ: ಅಂತಾರಾಷ್ಟ್ರೀಯ ಶಾಲಾ ಬಾಸ್ಕೆಟ್‌ಬಾಲ್ ಪಂದ್ಯಾಟಕ್ಕೆ ಓಮನ್ ದೇಶದ ಮಸ್ಕತ್ ಇಂಡಿಯನ್ ಸ್ಕೂಲ್ ತಂಡದ ನಾಯಕಿಯಾಗಿ ಮಂಜೇಶ್ವರದ ಅನೋಕಿ ಆರ್. ಆಯ್ಕೆಯಾಗಿದ್ದಾರೆ.

ಮಂಜೇಶ್ವರ ಹೊಸಂಗಡಿ ಅಂಗಡಿಪದವು ನಿವಾಸಿಗಳಾದ ಅಶ್ವಿನಿ ಮತ್ತು ರೋಹಿದಾಸ್ ಬಿ.ಎಂ. ದಂಪತಿಯ ಪುತ್ರಿಯಾಗಿರುವ ಅನೋಕಿ ಆರ್. ಪ್ರಸ್ತುತ ಕುಟುಂಬದೊಂದಿಗೆ ಮಸ್ಕತ್‌ನಲ್ಲಿ ವಾಸವಾಗಿದ್ದು, ಮಸ್ಕತ್ ಇಂಡಿಯನ್ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಸೆಪ್ಟೆಂಬರ್ 21ರಿಂದ ಬಿಹಾರದಲ್ಲಿ ಅಂತಾರಾಷ್ಟ್ರೀಯ ಶಾಲಾ ಬಾಸ್ಕೆಟ್‌ಬಾಲ್ ಪಂದ್ಯಾಟ ನಡೆಯಲಿದ್ದು, ವಿಶ್ವದ ವಿವಿಧ ದೇಶಗಳ ಇಂಡಿಯನ್ ಸ್ಕೂಲ್ ತಂಡಗಳು ಸೇರಿದಂತೆ ಭಾರತದ ಕೇಂದ್ರೀಯ ತಂಡ ಕ್ರೀಡಾಕೂಟದಲ್ಲಿ ಭಾಗವಹಿಸಲಿದೆ.
ಈ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಮಸ್ಕತ್ ಇಂಡಿಯನ್ ಸ್ಕೂಲ್ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಅನೋಕಿ ಆರ್. ಅವರಿಗೆ ದೊರೆತಿರುವುದು ಮಂಜೇಶ್ವರದ ಕ್ರೀಡಾಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

