ಉಡುಪಿ: ಆಟೋ ರಿಕ್ಷಾದಲ್ಲಿ ಪ್ರಯಾಣಿಕರಂತೆ ಬಂದು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಬೈಕ್‌ನಲ್ಲಿದ್ದ ಹೆಲ್ಮೆಟ್ ಕಳವು ಮಾಡಿರುವ ಘಟನೆ ನಗರದ ತೆಂಕಪೇಟೆಯ ಐಡಿಯಲ್ ಜಂಕ್ಷನ್ ಬಳಿ ನಡೆದಿದೆ.

ಆಟೋ ರಿಕ್ಷಾದಲ್ಲಿ ಬಂದ ವ್ಯಕ್ತಿಯೊಬ್ಬರು ಸುತ್ತಮುತ್ತಲಿನ ಪರಿಸ್ಥಿತಿಯನ್ನು ಗಮನಿಸಿ, ಬೈಕ್‌ನಲ್ಲಿ ಇರಿಸಲಾಗಿದ್ದ ಹೆಲ್ಮೆಟ್ ಅನ್ನು ಎಗರಿಸಿ ಪರಾರಿಯಾಗಿರುವುದು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

