ಸಿರಿಯಾದ ಮಾಜಿ ಅಧ್ಯಕ್ಷ ಬಷರ್ ಅಸ್ಸಾದ್‌ಗೆ ಮರಣದಂಡನೆ

ಡಮಾಸ್ಕಸ್: ಸಿರಿಯಾದಲ್ಲಿ 14 ವರ್ಷಗಳ ಕಾಲ ನಡೆದ ಸುದೀರ್ಘ ಸಂಘರ್ಷಕ್ಕೆ ಕಾರಣವಾದ ಮಾನವೀಯತೆಯ ವಿರುದ್ಧದ ಅಪರಾಧಗಳು ಹಾಗೂ ಯುದ್ಧ ಅಪರಾಧಗಳ ಪ್ರಕರಣದಲ್ಲಿ ಮಾಜಿ ಅಧ್ಯಕ್ಷ ಬಷರ್ ಅಸ್ಸಾದ್ ಮತ್ತು ಅವರ ಸಹೋದರ ಮಹೇರ್ ಅಸ್ಸಾದ್‌ಗೆ ಸಿರಿಯಾದ ನ್ಯಾಯಾಲಯ ಮರಣದಂಡನೆ ವಿಧಿಸಿದೆ.

ಈ ಸಂಘರ್ಷದಲ್ಲಿ ಸುಮಾರು 5 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇದೇ ಪ್ರಕರಣದಲ್ಲಿ ಅಸ್ಸಾದ್ ಅವರ ಸೋದರಸಂಬಂಧಿ ಅತೆಫ್ ನಜೀಬ್ ಅವರಿಗೂ ದಂಗೆ ಹತ್ತಿಕ್ಕುವಲ್ಲಿ ಪ್ರಮುಖ ಪಾತ್ರ ವಹಿಸಿದ ಆರೋಪದಡಿ ಮರಣದಂಡನೆ ವಿಧಿಸಲಾಗಿದೆ.

ಭದ್ರತಾ ವ್ಯವಸ್ಥೆ ಬಿಗಿಗೊಳಿಸಲಾಗಿದ್ದ ನ್ಯಾಯಾಲಯದ ಕೋಣೆಯಲ್ಲಿ ತೀರ್ಪು ಪ್ರಕಟಿಸುವ ವೇಳೆ ಅತೆಫ್ ನಜೀಬ್ ಕೈದಿಯ ಸಮವಸ್ತ್ರದಲ್ಲಿ ಹಾಜರಿದ್ದರು. ಅವರನ್ನು ಈಗಾಗಲೇ ಬಂಧಿಸಲಾಗಿದ್ದು, ಅಸ್ಸಾದ್ ಆಡಳಿತದ ಪ್ರಮುಖ ಅಧಿಕಾರಿಗಳ ಪೈಕಿ ವಿಚಾರಣೆ ಎದುರಿಸುತ್ತಿರುವವರಲ್ಲಿ ನಜೀಬ್ ಕೂಡ ಒಬ್ಬರಾಗಿದ್ದಾರೆ.

ಬಷರ್ ಅಸ್ಸಾದ್ ಹಾಗೂ ಅವರ ಸಹೋದರ ಮಹೇರ್ ಅಸ್ಸಾದ್, 2014ರ ಡಿಸೆಂಬರ್‌ನಲ್ಲಿ ದಂಗೆಕೋರ ಪಡೆಗಳು ಡಮಾಸ್ಕಸ್ ಮೇಲೆ ದಾಳಿ ನಡೆಸಿದ ಬಳಿಕ ಸಿರಿಯಾದಿಂದ ಪಲಾಯನ ಮಾಡಿ ರಷ್ಯಾದಲ್ಲಿ ನೆಲೆಸಿದ್ದಾರೆ ಎಂದು ವರದಿಯಾಗಿದೆ.

ಅತೆಫ್ ನಜೀಬ್ ಈ ಹಿಂದೆ ಸಿರಿಯನ್ ಸೇನೆಯಲ್ಲಿ ಬ್ರಿಗೇಡಿಯರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. 2011ರಲ್ಲಿ ದಾರಾ ನಗರದಲ್ಲಿನ ರಾಜಕೀಯ ಭದ್ರತಾ ವಿಭಾಗದ ಮುಖ್ಯಸ್ಥರಾಗಿದ್ದರು. ಸಿರಿಯಾದಲ್ಲಿ ಬಂಡಾಯದ ಕಿಡಿ ಹೊತ್ತಿಕೊಳ್ಳಲು ಕಾರಣವಾದ ಆರಂಭಿಕ ಪ್ರತಿಭಟನೆಗಳನ್ನು ಹತ್ತಿಕ್ಕುವಲ್ಲಿ ನಜೀಬ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ಆರೋಪಿಸಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!