ಯೋಧರಿಗೆ ಸನ್ಮಾನ

ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಬೆಂಗಳೂರು ಪುತ್ತೂರು ಘಟಕ, ಬ್ರದರ್ಸ್ ಹೆಲ್ಪ್ ಲೈನ್ ಅಜ್ಜಿನಡ್ಕ ಹಾಗೂ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್, ಪುತ್ತೂರು ಲೀಜನ್ ಏರಿಯಾ ಏ ವತಿಯಿಂದ ಸರ್ಕಾರಿ ಪ್ರೌಢಶಾಲೆ ಕಬಕದಲ್ಲಿ ದಿನಾಂಕ 15-08-2026 ರಂದು ಸ್ವಾತಂತ್ರ್ಯೋತ್ಸವ ಪ್ರಯುಕ್ತ ನಡೆದ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ನಿವೃತ್ತ ಯೋಧ ಹವಾಲ್ದಾರ್ ಕೃಷ್ಣಯ್ಯ ಕೆ. ಅವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಶಾಲಾ SDMC ಅಧ್ಯಕ್ಷರಾದ ನಝೀರ್ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕರಾದ ಶ್ರೀಮತಿ ಸುರೇಖಾ ಎಲ್ಲರನ್ನೂ ಸ್ವಾಗತಿಸಿದರು. ವೇದಿಕೆಯಲ್ಲಿ ಸಾಮಾಜಿಕ ಕಾರ್ಯಕರ್ತೆ ವತ್ಸಲಾ ನಾಯಕ್ ಮುಖ್ಯ ಅತಿಥಿಯಾಗಿ ದೇಶಭಕ್ತಿ ಗೀತೆಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟರು. ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕರ್ನಾಟಕ ರಾಜ್ಯ ಸಂಚಾಲಕರು ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪುತ್ತೂರು ಘಟಕದ ಅಧ್ಯಕ್ಷರೂ ಆದ ಡಾ. ಶಾಂತಾ ಪುತ್ತೂರು, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಲೀಜನ್ ಏರಿಯಾ ಏ ಅಧ್ಯಕ್ಷ ರಾದ ಶ್ರೀಮತಿ ಸುಮಂಗಲ ಶೆಣೈ,ಸೀನಿಯರ್ ಚೇಂಬರ್ ನ ಕೋಶಾಧಿಕಾರಿ ರೋಹಿಣಿ ಆಚಾರ್ಯ, ಸದಸ್ಯರಾದ ರತ್ನಾ ನಾಯರ್ SDMC ಸದಸ್ಯರಾದ ಜೈನುದ್ದೀನ್ ಉಪಸ್ಥಿತರಿದ್ದರು.

ವಿಜ್ಞಾನ ಶಿಕ್ಷಕಿ ಶ್ರೀಮತಿ ಸುಮಿತ್ರಾ ಅಭಿನಂದನಾ ಭಾಷಣ ಮಾಡಿದರು. ಆಂಗ್ಲ ಭಾಷಾ ಶಿಕ್ಷಕಿ ಯಶೋಧಾ ಸ್ಪರ್ಧಾ ವಿಜೇತರ ಪಟ್ಟಿ ಓದಿದರು. ಹಿಂದಿ ಶಿಕ್ಷಕರಾದ ಉದಯ ಎಸ್. ಸಮಾಜ ವಿಜ್ಞಾನ ಶಿಕ್ಷಕರಾದ ಸ್ವಪ್ನ ಸಹಕರಿಸಿದರು. ಬ್ರದರ್ಸ್ ಹೆಲ್ಪ್ ಲೈನ್ ಅಜ್ಜಿನಡ್ಕ ಅಧ್ಯಕ್ಷರು ಮತ್ತು ಸೀನಿಯರ್ ಚೇಂಬರ್ ನ ಸದಸ್ಯರು ಆದ ಜಿ.ಎ. ಶಂಸುದ್ದೀನ್ ಅಜ್ಜಿನಡ್ಕ ,ಪತ್ರಕರ್ತರು ಹಾಗೂ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕರ್ನಾಟಕ ರಾಜ್ಯ ಸಂಚಾಲಕರಾದ ಶ್ರೀ ಜಯಾನಂದ ಪೆರಾಜೆ ಶುಭ ಹಾರೈಸಿದರು. ಸೀನಿಯರ್ ಚೇಂಬರ್ ಸದಸ್ಯರು ಕನ್ನಡ ಭಾಷಾ ಶಿಕ್ಷಕಿ ಡಾ. ಶಾಂತಾ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.

SHARE
Loading spinner

2 thoughts on “ಯೋಧರಿಗೆ ಸನ್ಮಾನ”

  1. [864]Jl bet login at registration – Pinoy online slots via GCash,Gamitin ang jl bet login app para sa mabilis na access. Madali ang jl bet register account at pinoy online slots gcash. Download na at maglaro ngayon! visit: jl bet

    Loading spinner
  2. [9925]happycasino লগইন ও অ্যাপ ডাউনলোড | বিকাশ অনলাইন ক্যাসিনো,happycasino login করুন এবং সেরা অনলাইন স্লট গেম ও লাইভ ডিলার ক্যাসিনো উপভোগ করুন। বিকাশ দিয়ে অনলাইন ক্যাসিনো ট্রানজ্যাকশন সহজ করতে আজই অ্যাপ ডাউনলোড করুন। visit: happycasino

    Loading spinner

Leave a Reply

Your email address will not be published. Required fields are marked *

error: Content is protected !!