ನೀಲೇಶ್ವರದಲ್ಲಿ ಗೃಹಿಣಿ ನದಿಯ ನಾಪತ್ತೆ-ಪಾತ್ರೆ ತೊಳೆಯುವಾಗ ಹೊಳೆಗೆ ಬಿದ್ದ ಶಂಕೆ

​ಕಾಸರಗೋಡು : ಜಿಲ್ಲೆಯ ನೀಲೇಶ್ವರ ಸಮೀಪ ಪಾತ್ರೆ ತೊಳೆಯುತ್ತಿದ್ದ ವೇಳೆ ಕಾಲು ಜಾರಿ ಹೊಳೆಗೆ ಬಿದ್ದು ಗೃಹಿಣಿ ನಾಪತ್ತೆಯಾಗಿದ್ದಾರೆ.

ಕಣಿಚ್ಚಿರ ನಿವಾಸಿ ಆಟೋಚಾಲಕ ಅಜಿತ್‌ ಅವರ ಪತ್ನಿ ನದಿಯ (48) ನಾಪತ್ತೆಯಾದ ದುರ್ದೈವಿ.

​ ಬುಧವಾರ ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಮನೆ ಹತ್ತಿರದ ಹೊಳೆ ಬದಿಯಲ್ಲಿ ಈ ಅಪಘಾತ ಸಂಭವಿಸಿದೆ. ನದಿಯವರು ಪಾತ್ರೆ ತೊಳೆಯಲು ತೆರಳಿದ್ದ ಸಂದರ್ಭದಲ್ಲಿ ಈ ಅನಾಹುತ ನಡೆದಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳದ ದಡದಲ್ಲಿ ಇವರ ಮೊಬೈಲ್ ಫೋನ್ ಪತ್ತೆಯಾಗಿದೆ.

​ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಪರಿಣಿತ ಸ್ಕೂಬಾ ತಂಡ, ನೀಲೇಶ್ವರ ಪೊಲೀಸರು ಹಾಗೂ ಸ್ಥಳೀಯ ಸಾರ್ವಜನಿಕರು ಸೇರಿ ಹೊಳೆಯಲ್ಲಿ ನಾಪತ್ತೆಯಾದ ಮಹಿಳೆಗಾಗಿ ತೀವ್ರ ಹುಡುಕಾಟ ಮುಂದುವರಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!