ಗೋವಾದಿಂದ ಕೇರಳಕ್ಕೆ ಅಕ್ರಮ ಮದ್ಯ ಸಾಗಾಟ ಜಾಲ ಪತ್ತೆ; 438 ಲೀಟರ್ ಮದ್ಯ ವಶ

ಗೋವಾದಿಂದ ಮಂಗಳೂರು ಉಡುಪಿ ಮೂಲಕ ಅಕ್ರಮವಾಗಿ ಮದ್ಯವನ್ನು ಕೇರಳಕ್ಕೆ ಸಾಗಿಸುವ ಜಾಲವೊಂದನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ದಿನಾಂಕ 22/08/2026 ರಂದು ಮಾನ್ಯ ಅಬಕಾರಿ ಜಂಟಿ ಆಯುಕ್ತರು ಮಂಗಳೂರು ವಿಭಾಗ ಬಾಲಕೃಷ್ಣ ಸಿ ಹೆಚ್ ರವರ ಆದೇಶದ ಮೇರೆಗೆ ದಕ್ಷಿಣ ಕನ್ನಡ ಅಬಕಾರಿ ಉಪ ಆಯುಕ್ತೆ ಶ್ರೀಮತಿ ಬಿಂದುಶ್ರೀರವರ ನಿರ್ದೇಶನದಲ್ಲಿ ಅಬಕಾರಿ ವಿಶೇಷ ತಂಡವೊಂದು ಕಾರ್ಯನಿರ್ವಹಿಸಿದ್ದು ಈ ಸಂಧರ್ಭದಲ್ಲಿ ಗೋವಾದಿಂದ ಪರವಾನಗಿಯಿಲ್ಲದೆ ಅಕ್ರಮ ಮದ್ಯ ತರುವ ಗ್ಯಾಂಗ್ ಒಂದನ್ನೂ ತಂಡದವರು ಪತ್ತೆಹಚ್ಚಿ ಇವರಿಂದ ಒಂದು ಸ್ವಿಫ್ಟ್ ಡಿಸೈರ್ ಕಾರಿನೊಂದಿಗೆ 438 ಲೀಟರ್ ಅಕ್ರಮ ಗೋವಾ ಮದ್ಯವನ್ನು ವಶಪಡಿಸಲಾಯಿತು.

ವಾಹನ ಮಾಲೀಕ ಹಾಗೂ ಚಾಲಕ ಬಸವರಾಜು ಬೋವಿ ಹಾಗೂ ನಾಗವೇಣಿ ನಾಯಕರವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿರುತ್ತದೆ, ಈ ವಿಶೇಷ ತಂಡದಲ್ಲಿ ಮಂಗಳೂರು ಉಪವಿಭಾಗದ ಉಪ ಅಧೀಕ್ಷಕಿ ಗಾಯತ್ರಿ ಸಿ ಹೆಚ್.ಬಂಟ್ವಾಳ ಉಪವಿಭಾಗ ಉಪ ಅಧೀಕ್ಷಕ ಸಂತೋಷ್ ಮೋಡಗಿ ಬಂಟ್ವಾಳ ತಾಲೂಕು ವಲಯ ಅಬಕಾರಿ ನಿರೀಕ್ಷಕ ಲಕ್ಷ್ಮಣ್ ಶಿವಣಗಿ ತಲಪಾಡಿ ಚೆಕ್ ಪೋಸ್ಟ್ ನಿರೀಕ್ಷಕ ದತ್ತಗುರು ಅಥೆಣಿ ಉಪ ನಿರೀಕ್ಷಕ ಜಯಪ್ಪ ,ಶಿವಶಂಕರ್ , ಅಭಿಷೇಕ್ ಹಾಗೂ ಪೇದೆ ಪ್ರಕಾಶ್ ರವರು ಕಾರ್ಯಾಚರಣೆ ಮಾಡಿದ್ದು ಜಂಟಿ ಆಯುಕ್ತರ ಕಚೇರಿ ನಿರೀಕ್ಷಕಿ ಸುನಿತರವರು ಪ್ರಕರಣ ದಾಖಲಿಸಿರುತ್ತಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!