ಗಾಣಿಗ ಯಾನೆ ಸಪಲ್ಯ ಸುಧಾರಕ ಸಂಘ ಸಂಘ ಮಂಜೇಶ್ವರ ,ಕಾಸರಗೋಡು ಜಿಲ್ಲೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ ) ಮಂಜೇಶ್ವರ ತಾಲೂಕು ಆಶ್ರಯದಲ್ಲಿ, 137ನೇ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ ಆಯೋಜಿಸಲಾಗಿದೆ.ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಭಾನುವಾರ ಕೀರ್ತೇಶ್ವರ ದೇವಸ್ಥಾನ ಸಭಾಭವನದಲ್ಲಿ ನಡೆಯಿತು.


ಶಿಬಿರವನ್ನು ಶ್ರೀ ಬಾಬು ನಾಯ್ಕ .ಎ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ದಯಾನಂದ ಬಂಗೇರ ವಹಿಸಿದರು . ಮಾಹಿತಿ ನೀಡುವವರು ಕೆ. ಪ್ರಭಾಕರ ಸಾಲ್ಯಾನ್ ಬಾಕಿಲಗುತ್ತು ,ಮುಖ್ಯ ಅತಿಥಿಗಳಾಗಿ ಶ್ರೀ ಮತಿ ಶಶಿಕಲಾ ಸುವರ್ಣ ಶ್ರೀ ಧರ್ಮಪ್ಪ ಆಚೆ ಪಾಲ್ , ಶ್ರೀ ಶೈಲೇಶ್ ಕುಮಾರ್ ಅನುಗ್ರಹ ಶ್ರೀ ಪ್ರಕಾಶ್ ಕೀರ್ತೇಶ್ವರ ಭಾಗವಹಿಸಿದರು.
ಶಿಬಿರವು ಆಗಸ್ಟ್ 24ರಿಂದ ಸೆಪ್ಟೆಂಬರ್ 07 2026ರವರೆಗೆ ನಡೆಯಲಿದ್ದು, ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸಾರ್ವಜನಿಕರಿಗೆ ಸೇವೆ ಲಭ್ಯವಿರಲಿದೆ.

ಹೊಸಂಗಡಿಯ ಶ್ರೀ ಕೀರ್ತೇಶ್ವರ ದೇವಸ್ಥಾನ ಸಭಾಭವನದಲ್ಲಿ ಶಿಬಿರ ಆಯೋಜಿಸಲಾಗಿದೆ.
ಈ ಶಿಬಿರದಲ್ಲಿ ಯಾವುದೇ ರೀತಿಯ ವಿದ್ಯುತ್ ಶಾಕ್ ನೀಡುವುದಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ. ಇಲೆಕ್ಟ್ರೋ ಮ್ಯಾಗ್ನೆಟ್ ಮೂಲಕ ಸ್ಟಿಮ್ಯುಲೇಷನ್ ನೀಡುವ ಚಿಕಿತ್ಸಾ ವಿಧಾನ ಇದಾಗಿದ್ದು, ಅಂತಾರಾಷ್ಟ್ರೀಯ ಮಾನ್ಯತೆಯನ್ನು ಪಡೆದಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶಿಬಿರದಲ್ಲಿ ರಕ್ತಸಂಚಾರಕ್ಕೆ ಸಂಬಂಧಿಸಿದಂತೆ ಅರಿವು ಹಾಗೂ ಚಿಕಿತ್ಸಾ ಸೇವೆಗಳನ್ನು ನೀಡಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಆಗಸ್ಟ್ 24ರಿಂದ ಸೆಪ್ಟೆಂಬರ್ 07ರವರೆಗೆ ನಡೆಯಲಿರುವ ಈ ಉಚಿತ ಶಿಬಿರಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಲಾಗಿದೆ.


