ಕಾಸರಗೋಡು: ಪ್ರಾತಃಕಾಲದ ಉಪಾಹಾರದ ವೇಳೆ ಹೆಚ್ಚುವರಿ ಸಾಂಬಾರ್ ನೀಡಲಿಲ್ಲವೆಂಬ ಸಣ್ಣ ಕಾರಣಕ್ಕೆ, ಸಹ ಕೈದಿಯೊಬ್ಬನ ಮೇಲೆ ಗ್ಲಾಸ್ನಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಕಣ್ಣೂರು ಸೆಂಟ್ರಲ್ ಜೈಲಿನಲ್ಲಿ ಸಂಭವಿಸಿದೆ.

ವಯನಾಡಿನ ಅಂಬಲವಯಲ್ ನಿವಾಸಿ, ಶಿಕ್ಷೆ ಅನುಭವಿಸುತ್ತಿರುವ ರಾಮನ್ ಕುಟ್ಟಿ (56) ಹಲ್ಲೆಗೊಳಗಾದ ದುರ್ದೈವಿ.
ಕಾಸರಗೋಡು ಮೂಲದ ಕಿರಣ್ ರಾಜ್ ಶೆಟ್ಟಿ ಎಂಬ ಇನ್ನೊಬ್ಬ ಕೈದಿ ಈ ಕೃತ್ಯ ಎಸಗಿದ್ದಾನೆ.

ರವಿವಾರ ಬೆಳಿಗ್ಗೆ ಜೈಲಿನ ಐದನೇ ಬ್ಲಾಕ್ನಲ್ಲಿ ಉಪಾಹಾರ ಹಂಚುವ ವೇಳೆ ಈ ಗಲಾಟೆ ಉಂಟಾಗಿದೆ.ಆಹಾರ ವಿತರಣೆಯ ಜವಾಬ್ದಾರಿಯಲ್ಲಿದ್ದ ರಾಮನ್ ಕುಟ್ಟಿ ಬಳಿ ಆರೋಪಿ ಕಿರಣ್ ರಾಜ್ ಹೆಚ್ಚುವರಿ ಸಾಂಬಾರ್ ಕೇಳಿದ್ದಾನೆ. ಆದರೆ, ಎಲ್ಲರಿಗೂ ನಿಗದಿತ ಪ್ರಮಾಣದಲ್ಲಷ್ಟೇ ನೀಡಲು ಜೈಲು ನಿಯಮವಿದೆ ಎಂದು ರಾಮನ್ ಕುಟ್ಟಿ ನಿರಾಕರಿಸಿದ್ದಾರೆ.

ಇದರಿಂದ ಆಕ್ರೋಶಗೊಂಡ ಶೆಟ್ಟಿ, ಅವರನ್ನು ಕೆಳಗೆ ತಳ್ಳಿ ಕೈಯಲ್ಲಿದ್ದ ಲೋಟದಿಂದಲೇ ಮುಖಕ್ಕೆ ಬಲವಾಗಿ ಗುದ್ದಿ ಗಾಯಗೊಳಿಸಿದ್ದಾನೆ.
ರಕ್ತಸ್ರಾವದಿಂದ ಬಳಲುತ್ತಿದ್ದ ಗಾಯಾಳುವನ್ನು ತಕ್ಷಣವೇ ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.


I was looking for a reliable place to register and this was the perfect choice. Everything is streamlined and efficient. Visit aaajili357loginregister