‘ಶವ ಸಂಖ್ಯೆ 1003’ ಗುರುತಿಗೆ ಗೊಂದಲ; ಡಿಎನ್‌ಎ ಪರೀಕ್ಷೆಗೆ ಮೊರೆ

ಪೋಖರಾ: ನೇಪಾಳದ ಪೋಖರಾ ಆಸ್ಪತ್ರೆಯಲ್ಲಿರುವ ‘ಶವ ಸಂಖ್ಯೆ 1003’ ತಮ್ಮ ಸಂಬಂಧಿಕರದ್ದೆಂದು ಮೂರು ಕುಟುಂಬಗಳು ಹೇಳಿಕೊಂಡಿರುವುದು ಗೊಂದಲಕ್ಕೆ ಕಾರಣವಾಗಿದೆ. ಆಗಸ್ಟ್ 26ರಂದು ಸಂಭವಿಸಿದ ಭೀಕರ ಪ್ರವಾಹದಲ್ಲಿ ಕಾಣೆಯಾಗಿದ್ದ ಗೋಪಾಲ್ ದಹಿತ್ ಹಾಗೂ ದಾಮೋದರ್ ಬಸ್ಯಲ್ ಅವರ ಕುಟುಂಬಗಳು ಈ ಶವ ತಮ್ಮ ಸಂಬಂಧಿಕರದ್ದೆಂದು ಹೇಳಿಕೊಂಡಿವೆ.

ಶವದ ಹಲ್ಲು, ಮುಖ, ತುಟಿ, ಕೈ, ದೇಹದ ರಚನೆ ಹಾಗೂ ಇತರ ದೈಹಿಕ ಗುರುತುಗಳು ತಮ್ಮ ಸಂಬಂಧಿಕರಿಗೆ ಹೊಂದಿಕೆಯಾಗುತ್ತವೆ ಎಂದು ಎರಡೂ ಕುಟುಂಬಗಳು ವಾದಿಸಿವೆ. ಗುರುತಿನ ಗೊಂದಲ ನಿವಾರಿಸಲು ಡಿಎನ್‌ಎ ಪರೀಕ್ಷೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.

ಪೋಖರಾಕ್ಕೆ ವಿವಿಧ ಪ್ರವಾಹಪೀಡಿತ ಜಿಲ್ಲೆಗಳಿಂದ 102 ಶವಗಳನ್ನು ತರಲಾಗಿದ್ದು, ಈ ಪೈಕಿ 16 ಶವಗಳನ್ನು ಗುರುತಿಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಗುರುತು ಪತ್ತೆಗಾಗಿ ಪೊಲೀಸರು ಐದು ಕುಟುಂಬಗಳಿಂದ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಪರೀಕ್ಷಾ ಪ್ರಮಾಣ ಹೆಚ್ಚಿರುವುದರಿಂದ ಫಲಿತಾಂಶಕ್ಕೆ ಒಂದು ತಿಂಗಳಿಂದ ಒಂದೂವರೆ ತಿಂಗಳು ಸಮಯ ಬೇಕಾಗಬಹುದು ಎಂದು ವರದಿಯಾಗಿದೆ.

ಇದೇ ವೇಳೆ, ಪ್ರವಾಹದಲ್ಲಿ ಮೃತಪಟ್ಟ ಐದು ವರ್ಷದ ಬಾಲಕ ಪ್ರಿನ್ಸ್‌ನನ್ನು ಶಾಲಾ ಟೈ, ಕೊರಳ ಹಾರ ಹಾಗೂ ಕಿವಿಯೋಲೆ ಮೂಲಕ ಕುಟುಂಬಸ್ಥರು ಗುರುತಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ವ್ಯಕ್ತಿಯೊಬ್ಬರನ್ನು ಭುಜದ ಮೇಲಿದ್ದ ಹಚ್ಚೆಯ ಮೂಲಕ ಗುರುತಿಸಲಾಗಿದೆ.

SHARE
Loading spinner

One thought on “‘ಶವ ಸಂಖ್ಯೆ 1003’ ಗುರುತಿಗೆ ಗೊಂದಲ; ಡಿಎನ್‌ಎ ಪರೀಕ್ಷೆಗೆ ಮೊರೆ

  1. I’ve been playing here for a few weeks and the payout is surprisingly fast. Definitely one of the smoothest experiences I’ve had lately. Check out krphlwin for a great time!

    Loading spinner

Leave a Reply

Your email address will not be published. Required fields are marked *

error: Content is protected !!