ಮಂಜೇಶ್ವರ:ಉಪ್ಪಳದಲ್ಲಿ ಒಂದೇ ರೀತಿಯ ನೋಂದಣಿ ಸಂಖ್ಯೆ ಯನ್ನು ಅಳವಡಿಸಿಕೊಂಡು ರಸ್ತೆಯಲ್ಲಿ ಮುಕ್ತವಾಗಿ ತಿರುಗಾಡುತ್ತಿದ್ದ ಎರಡು ಟಾರ್ ವಾಹನಗಳನ್ನು ಮಂಜೇಶ್ವರ ಪೊಲೀಸರು ಇಂದಿನ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆದಿದ್ದಾರೆ.

ಮಂಜೇಶ್ವರ ಪೊಲೀಸ್ ಠಾಣಾಧಿಕಾರಿ ವಿಷ್ಣು ಹಾಗೂ ಎಸ್ಐ ಶಬರಿ ಅವರ ನೇತೃತ್ವದ ಪೊಲೀಸ್ ತಂಡವು ಇಂದು ಬೆಳಿಗ್ಗೆ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ರೋಚಕ ನಕಲಿ ಜಾಲದ ಕಳ್ಳಾಟ ಬೆಳಕಿಗೆ ಬಂದಿದೆ.

ಎರಡು ವಾಹನಗಳಿಗೂ ಒಂದೇ ನೋಂದಾವಣೆ ಸಂಖ್ಯೆ ಇರುವುದನ್ನು ಕಂಡು ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಎರಡೂ ಟಾರ್ ವಾಹನಗಳನ್ನು ವಶಕ್ಕೆ ಪಡೆದು ಠಾಣೆಗೆ ಕೊಂಡೊಯ್ದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಲಿ ಟಾರ್ ವಾಹನದ ಮಾಲೀಕರು ಈಗಾಗಲೇ ಮಂಜೇಶ್ವರ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಆದರೆ, ನಕಲಿ ನಂಬರ್ ಪ್ಲೇಟ್ ಅಳವಡಿಸಿ ವಾಹನ ಚಲಾಯಿಸುತ್ತಿದ್ದವರಿಗೆ ನೋಟಿಸ್ ಜಾರಿಗೊಳಿಸಿದ್ದರೂ ಅವರು ಠಾಣೆಗೆ ಹಾಜರಾಗಿಲ್ಲ. ಈ ಹಿನ್ನೆಲೆಯಲ್ಲಿ ನಕಲಿ ನಂಬರ್ ಪ್ಲೇಟ್ ಬಳಸಿದವರ ವಿರುದ್ಧ ಬಿಎನ್ಎಸ್ ಹಾಗೂ ಕೇರಳ ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮಂಜೇಶ್ವರ ಠಾಣೆಯ ಎಸ್ಐ ಶಬರಿ ಅವರು ಮಾಹಿತಿ ನೀಡಿದ್ದಾರೆ.


I hit a huge jackpot here last week and the process of claiming it was so easy. Truly a lucky place pklucky98game.
If you are looking for a place with great odds and a friendly vibe, this is it. I’ve tried a few others but br118bet feels much more honest and transparent.