ಕಾಸರಗೋಡು : ಚೆರ್ಕಳ ನಾಲ್ಕನೇ ಮೈಲುಗಲ್ಲಿನ ಆಟೋ ವರ್ಕ್ಶಾಪ್ನಲ್ಲಿ ಮೆಕ್ಯಾನಿಕ್ ಆಗಿ ದುಡಿಯುತ್ತಿದ್ದ ಪಾಡಿ ಕೊಲ್ಲಂಪಾಡಿಯ ಟಿ. ಅಜೀಶ್ (31) ತಮ್ಮ ಮನೆಯ ಹಿತ್ತಿಲ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗೋಪಾಲ-ನಿರ್ಮಲ ದಂಪತಿಯ ಪುತ್ರನಾಗಿದ್ದ ಅಜೀಶ್, ಸಹೋದರನ ಮನೆಯಲ್ಲಿ ವಾಸವಾಗಿದ್ದರು. ಅಪರಾಹ್ನ ಈ ದುರಂತ ಸಂಭವಿಸಿದ್ದು, ವಿದ್ಯಾನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಶವಮಹಜರು ನಡೆಸಿದ ನಂತರ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ.


Great graphics and very responsive customer support. ph58jilicom definitely knows how to treat their players right.