ಚೆರ್ಕಳದಲ್ಲಿ ಮೆಕ್ಯಾನಿಕ್ ಆತ್ಮಹತ್ಯೆ; 31ರ ಅಜೀಶ್ ಮೃತ್ಯು

ಕಾಸರಗೋಡು : ಚೆರ್ಕಳ ನಾಲ್ಕನೇ ಮೈಲುಗಲ್ಲಿನ ಆಟೋ ವರ್ಕ್‌ಶಾಪ್‌ನಲ್ಲಿ ಮೆಕ್ಯಾನಿಕ್ ಆಗಿ ದುಡಿಯುತ್ತಿದ್ದ ಪಾಡಿ ಕೊಲ್ಲಂಪಾಡಿಯ ಟಿ. ಅಜೀಶ್ (31) ತಮ್ಮ ಮನೆಯ ಹಿತ್ತಿಲ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗೋಪಾಲ-ನಿರ್ಮಲ ದಂಪತಿಯ ಪುತ್ರನಾಗಿದ್ದ ಅಜೀಶ್, ಸಹೋದರನ ಮನೆಯಲ್ಲಿ ವಾಸವಾಗಿದ್ದರು. ಅಪರಾಹ್ನ ಈ ದುರಂತ ಸಂಭವಿಸಿದ್ದು, ವಿದ್ಯಾನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಶವಮಹಜರು ನಡೆಸಿದ ನಂತರ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ.

SHARE
Loading spinner

One thought on “ಚೆರ್ಕಳದಲ್ಲಿ ಮೆಕ್ಯಾನಿಕ್ ಆತ್ಮಹತ್ಯೆ; 31ರ ಅಜೀಶ್ ಮೃತ್ಯು”

Leave a Reply

Your email address will not be published. Required fields are marked *

error: Content is protected !!