ಮುಳ್ಳೇರಿಯಲ್ಲಿ ಸಿಡಿಲು ಬಡಿದು 30ರ ಯುವಕ ಸಾವು

ಕಾಸರಗೋಡು : ಮುಳ್ಳೇರಿಯ ಬಳಿ ಸಂಬಂಧಿಕರ ಮನೆಗೆ ತೆರಳಿದ್ದ ಯುವಕನೊಬ್ಬ ಸಿಡಿಲು ಬಡಿದು ಅಕಾಲಿಕ ಮರಣಕ್ಕೀಡಾಗಿದ್ದಾನೆ.

ಕುಂಟಾರು ಉಯಿತ್ತಡ್ಕ ಮಾಯಿಲಂಕೋಟೆಯ ಅರಬಿ ಎಂಬವರ 30 ವರ್ಷದ ಪುತ್ರ ಮುಹಮ್ಮದ್ ನೌಫಲ್ ಪಿ.ಎ ಸಾವನ್ನಪ್ಪಿದ ದುರ್ದೈವಿ.

​ರಾತ್ರಿ ಪಾಂಡಿ ಬಳವಂತಡ್ಕದಲ್ಲಿದ್ದ ಸಂಬಂಧಿಕರ ಮನೆಯಲ್ಲಿದ್ದಾಗ ದಿಢೀರ್ ಸಿಡಿಲು ಅಪ್ಪಳಿಸಿ ನೌಫಲ್ ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ತಕ್ಷಣವೇ ಅವರನ್ನು ಮುಳ್ಳೇರಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.

ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವ ಶರೀರ ಕುಟುಂಬಸ್ಥರಿಗೆ ಬಿಟ್ಟು ಕೊಡಲಾಯಿತು.

SHARE
Loading spinner

2 thoughts on “ಮುಳ್ಳೇರಿಯಲ್ಲಿ ಸಿಡಿಲು ಬಡಿದು 30ರ ಯುವಕ ಸಾವು”

Leave a Reply

Your email address will not be published. Required fields are marked *

error: Content is protected !!