ಉದ್ಯಾವರ: ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಉದ್ಯೋಗ ಕೌಶಲ್ಯಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಉದ್ಯಾವರ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾದ ‘ಕ್ರಿಯೇಟಿವ್ ಕಾರ್ನರ್’ ಯೋಜನೆಗೆ ಭವ್ಯ ಚಾಲನೆ ದೊರೆಯಿತು. ವಿವಿಧ ಉದ್ಯೋಗ ಕ್ಷೇತ್ರಗಳಲ್ಲಿ ಪ್ರಾಯೋಗಿಕ ತರಬೇತಿ ನೀಡುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಮತ್ತು ಸೃಜನಶೀಲತೆಯನ್ನು ಬೆಳೆಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.



ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಬಷೀರ್ ಕನಿಲ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಡಿ.ಪಿ.ಸಿ. ಶೌಕತ್ ಅಲಿ ಮುಖ್ಯ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಮಂಜೇಶ್ವರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಫಾತಿಮತ್ ಸೌರ, ಮಂಜೇಶ್ವರ ಎ.ಇ.ಒ. ನಾರಾಯಣ ದ., ಕಾಸರಗೋಡು ಡಿ.ಪಿ.ಒ. ಚಾರಿಷ್ಮ, ಪಿ.ಟಿ.ಎ. ಅಧ್ಯಕ್ಷ ರಹೀಮ್ (ಪುಚ್ಚತ್ತ ವಯಲ್),, ಎಂ.ಪಿ.ಟಿ.ಎ. ಅಧ್ಯಕ್ಷೆ ಶಶಿಕಲಾ, ನಿವೃತ್ತ ಎ.ಸಿ.ಪಿ. ಹಾಗೂ ಶಿಕ್ಷಣ ತಜ್ಞ ಬಷೀರ್ ಅಹಮ್ಮದ್, ಬಿ.ಆರ್.ಸಿ. ಮಂಜೇಶ್ವರಂನ ತರಬೇತುದಾರೆ ಸುಮಯ್ಯ ಎಂ.ಎ., ಮಂಜೇಶ್ವರದ ಸಿ.ಆರ್.ಸಿ.ಸಿ. ನಾರಾಯಣನ್ ಜಿ.ಎಸ್., ಪಿ.ಟಿ.ಎ. ಉಪಾಧ್ಯಕ್ಷ ಯಾಕೂಬ್, ಹಿರಿಯ ಸಹಾಯಕಿ ಸಾಧನ ಪಿ., ಝಾಕರಿಯಾ ಸಾಲಿಮಾರ್ ಹಾಗೂ ಎಂ.ಪಿ.ಟಿ. ಸದಸ್ಯೆ ಹಸೀನಾ (ಮಂಜೇಶ್ವರಂ), “ಪತ್ರಕರ್ತ ಹನೀಫ್ ಶಾರ್ಜಾ ಉಪಸ್ಥಿತರಿದ್ದರು.

ಮಂಜೇಶ್ವರ ಗ್ರಾಮ ಪಂಚಾಯತ್ ಸದಸ್ಯ ಶರೀಫ್ ಪಾವೂರು, ಜೆ.ಎಂ. ಮಂಜೇಶ್ವರಂನ ಕಾರ್ಯದರ್ಶಿ ಹನೀಫ್ ಹಾಗೂ ನಯನಾರ್ ಅಹ್ಮದ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ಶೀಬಾ ಬಿ. ಸ್ವಾಗತಿಸಿದರು. ಸಿಬ್ಬಂದಿ ಕಾರ್ಯದರ್ಶಿ ರಾಜೇಶ್ ಕುಮಾರ್ ಯು. ವಂದಿಸಿದರು.

ಕೃಷಿ, ಫ್ಯಾಷನ್ ಡಿಸೈನಿಂಗ್, ಆಹಾರ ತಯಾರಿಕೆ, ಪ್ಲಂಬಿಂಗ್, ಎಲೆಕ್ಟ್ರಿಕಲ್ ಕೆಲಸ ಮತ್ತು ಕಾರ್ಪೆಂಟ್ರಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡುವ ಉದ್ದೇಶದಿಂದ ‘ಕ್ರಿಯೇಟಿವ್ ಕಾರ್ನರ್’ ಅನ್ನು ಸಜ್ಜುಗೊಳಿಸಲಾಗಿದೆ.
ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ, ಸೂಕ್ತ ತರಬೇತಿ ನೀಡಿ, ಭವಿಷ್ಯದ ಉದ್ಯೋಗಾವಕಾಶಗಳಿಗೆ ದಾರಿ ಮಾಡಿಕೊಡುವ ಈ ಯೋಜನೆಯು ಶಾಲೆಯ ಚಟುವಟಿಕೆಗಳಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. “ಕೌಶಲ್ಯ ಮತ್ತು ಸೃಜನಶೀಲತೆಯನ್ನು ಬೆಳೆಸಿ ಉಜ್ವಲ ಭವಿಷ್ಯದತ್ತ” ಎಂಬ ಆಶಯದೊಂದಿಗೆ ಈ ಯೋಜನೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.


