ಮಂಜೇಶ್ವರ: ಮಂಜೇಶ್ವರ ತಾಲೂಕ್ ಲೈಬ್ರರಿ ಕೌನ್ಸಿಲ್ ನ ಮೀಂಜ ಪಂಚಾಯತ್ ಮಟ್ಟದ ಬಾಲವೇದಿ ಮಕ್ಕಳ ಸೃಜನೋತ್ಸವ ಕಾರ್ಯಕ್ರಮವನ್ನು ಕುಳೂರು ಸರಕಾರಿ ಎಲ್ ಪಿ ಶಾಲೆಯಲ್ಲಿ ಕೇರಳ ಸ್ಟೇಟ್ ಲೈಬ್ರರಿ ಕೌನ್ಸಿಲ್ ಸದಸ್ಯರಾದ ಶ್ರೀ ದಾಸಪ್ಪ ಶೆಟ್ಟಿ ಮಾಸ್ತರ್ ಉದ್ಘಾಟಿಸಿದರು.



ಪಂಚಾಯತ್ ಸದಸ್ಯರಾದ ಶ್ರೀಮತಿ ಶರ್ಮಿಳಾ ಎಂ ಶೆಟ್ಟಿ ಅಧ್ಯಕ್ಷತೆವಹಿಸಿದರು. ತಾಲೂಕ್ ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಶ್ರೀ ಡಿ ಕಮಲಾಕ್ಷ, ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀಮತಿ ವನಿತಾ ಆರ್ ಶೆಟ್ಟಿ. ಶ್ರೀ ಕಿಶೋರ್ ಕುಮಾರ್ ಪಾವಳ, ಶ್ರೀ ಯೋಗೀಶ್ ಕಲ್ಯಾಣತ್ತಾಯ, ಕುಮಾರಿ ಪದ್ಮಜಾ ಕುಳೂರು, ಶ್ರೀ ಶೇಖ್ ಅಬ್ದುಲ್ ಮಜೀದ್, ಶ್ರೀ ರಾಮಚಂದ್ರ ಟಿ, ಶ್ರೀ ಸುರೇಶ ಬಂಗೇರ, ಶ್ರೀ ಲೋಕೇಶ ಚಿನಾಲ, ಶ್ರೀ ಜನಾರ್ದನ ಪೂಜಾರಿ, ಶ್ರೀ ಉದಯ ಸಿ ಎಚ್, ಶ್ರೀಮತಿ ಚಂದ್ರಾವತಿ ಕುಳೂರು, ಭಾಗವಹಿಸಿದರು. ಸಮಾರೋಪ ಸಮಾರಂಭವನ್ನು ಶ್ರೀ ಡಿ ಕಮಲಾಕ್ಷ ಉದ್ಘಾಟಿಸಿದರು. ಆರಂಭದಲ್ಲಿ ಶ್ರೀ ಶಶಿ ಕುಮಾರ್ ಕುಳೂರು ಸ್ವಾಗತಿಸಿ, ಕೊನೆಯಲ್ಲಿ ಶ್ರೀ ಸತೀಶ ಎಲಿಯಾಣ ವಂದಿಸಿದರು.




