ಹೆಸರುಕಾಳಿನ ದೋಸೆ

ಬೇಕಾಗುವ ಪದಾರ್ಥಗಳು…

  • ಹೆಸರುಕಾಳು- ಒಂದು ಬಟ್ಟಲು
  • ಅಕ್ಕಿ- ಅರ್ಧ ಬಟ್ಟಲು
  • ತೆಂಗಿನಕಾಯಿತುರಿ- ಕಾಲು ಬಟ್ಟಲು
  • ಕಡಲೆ ಬೇಳೆ-ಒಂದು ಚಮಚ
  • ಶುಂಠಿ-ಒಂದು ಅಂಗುಲ

  • ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ…

  • ಹೆಸರುಕಾಳು, ಅಕ್ಕಿ, ಕಡಲೆ ಬೇಳೆ ಎಲ್ಲವನ್ನೂ ಬೇರೆ ಬೇರೆಯಾಗಿ 5-6 ಗಂಟೆಗಳ ಕಾಲ ನೆನೆಸಿಕೊಳ್ಳಿ.
  • ನಂತರ ನೀರು ತೆಗೆದು, ಕಾಯಿತುರಿ, ಶುಂಠಿ ಸೇರಿಸಿ ನುಣ್ಣಗೆ ರುಬ್ಬಿಕೊಂಡು ಉಪ್ಪು ಸೇರಿಸಿ ಹಿಟ್ಟನ್ನು ಹದ ಮಾಡಿಕೊಂಡು ಹತ್ತು ನಿಮಿಷ ನೆನೆಯಲು ಬಿಡಿ.
  • ಇದೀಗ ಒಲೆಯ ಮೇಲೆ ನಾನ್‌ಸ್ಟಿಕ್ ತವಾದ ಇಟ್ಟು, ತೆಳುವಾಗಿ ದೋಸೆ ಹೊಯ್ದು ಎರಡೂ ಬದಿಯಲ್ಲೂ ಬೇಯಿಸಿರಿ. ಇದನ್ನು ಬಿಸಿ ಇರುವಾಗಲೆ ಕಾಯಿಚಟ್ನಿಯೊಂದಿಗೆ ಸವಿಯಿರಿ.
SHARE
Loading spinner

Leave a Reply

Your email address will not be published. Required fields are marked *

error: Content is protected !!