ಕಾಸರಗೋಡು ವಲಯದ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ)ಕಾಸರಗೋಡು ತಾಲೂಕಿನ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮ ಪರಮ ಪೂಜ್ಯ ಪದ್ಮವಿಭೂಷಣ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತ್ರ ಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಿನ್ನೆ ವನಿತ ಭವನ ಕೂಡ್ಲುನಲ್ಲಿ ನಡೆಯಿತು . ಕೂಡ್ಲು ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಪ್ರಮೀಳಾ ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕಾಸರಗೋಡು ತಾಲೂಕಿನ ಮಾನ್ಯ ಯೋಜನಾಧಿಕಾರಿ ಶ್ರೀ ದಿನೇಶ್ ರವರು ಪ್ರಗತಿ ನಿಧಿ ಬೇಡಿಕೆ ಸಲ್ಲಿಸುವ App ನ ಬಗ್ಗೆ ಹಾಗೂ ಕ್ಷೇತ್ರದ ಹಿನ್ನಲೆಯ ಬಗ್ಗೆ ಮತ್ತು ಇತರ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು , ಆಂತರಿಕ ಲೆಕ್ಕ ಪರಿಶೋಧಕರಾದ ಶ್ರೀ ಮೋನಪ್ಪರವರು ಒಕ್ಕೂಟ ಎಂದರೇನು , ಹಾಗೂ ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿಯೇನು , ಎoಬುದರ ಬಗ್ಗೆ ಮಾಹಿತಿ ನೀಡಿದರು . ಕಾರಡ್ಕ ವಲಯದ ಮೇಲ್ವಿಚಾರಕರಾದ ಶ್ರೀ ಸುರೇಶ ರವರು ಯೋಜನೆಯಲ್ಲಿ ದೊರಕುವಂತ ವಿಮೆಗಳ ಬಗ್ಗೆ ಮಾಹಿತಿ ನೀಡಿದ್ದರು.

ಕಾಸರಗೋಡು ತಾಲೂಕಿನ ನೋಡೆಲ್ ಅಧಿಕಾರಿ ಶ್ರೀ ರಾಜೇಂದ್ರ , ಕಾಸರಗೋಡು ವಲಯದ ಮೇಲ್ವಿಚಾರಕರಾದ ಶ್ರೀ ಗೋಪಾಲಕೃಷ್ಣ , ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಶ್ರೀ ಜ್ಞಾನೇಶ್ವರ ಆಚಾರ್ಯ ಪರಕ್ಕಿಲ , ಹಾಗೂ 8 ಕಾರ್ಯ ಕ್ಷೇತ್ರದ ಸೇವಾಪ್ರತಿನಿಧಿಗಳು ಒಕ್ಕೂಟದ ಅಧ್ಯಕ್ಷರು , ಒಕ್ಕೂಟದ ಪದಾಧಿಕಾರಿಗಳು , ಉಪ್ಪಸ್ಥಿತರಿದ್ದರು . ಈ ಕಾರ್ಯಕ್ರಮಕ್ಕೆ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಶ್ರೀ ಜ್ಞಾನೇಶ್ವರ ಆಚಾರ್ಯ ಪರಕ್ಕಿಲ ಶುಭ ಹಾರೈಸಿ , ಅಡ್ಕತ್ತಬೈಲು ಕಾರ್ಯ ಕ್ಷೇತ್ರದ ಸೇವಾಪ್ರತಿನಿಧಿ ಶ್ರೀಮತಿ ಶೋಭಾ ಅಡ್ಕತ್ತಬೈಲು ನಿರೂಪಿಸಿ , ಉಳಿಯತ್ತಡ್ಕ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಶ್ರೀಮತಿ ಜ್ಯೋತಿ ಮಾಯಿಪ್ಪಾಡಿ ಸ್ವಾಗತಿಸಿ , ಏರಿಯಾಲ್ ಕಾರ್ಯ ಕ್ಷೇತ್ರದ ಸೇವಾಪ್ರತಿನಿಧಿ ಶ್ರೀಮತಿ ನಮಿತ ಏರಿಯಲ್ ವಂದಿಸಿದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!