Avatar

NAMMA MEDIA 24X7

ಆಂಬ್ಯುಲೆನ್ಸ್ ವಾಹನದಲ್ಲಿ ಗಂಡು ಮಗುವಿಗೆ ಜನ್ಮ .ಹೆರಿಗೆ ಮಾಡಿಸಿದ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಸಿಸ್ಟರ್ ಗಳು

ಬೆಳ್ತಂಗಡಿ : ಹೆರಿಗೆಗಾಗಿ ಮಂಗಳೂರು ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ಹೋಗುತ್ತಿದ್ದಾಗ ದಾರಿ ಮಧ್ಯೆ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ಫೆ.23 ರಂದು ಬೆಳಗ್ಗಿನ ಜಾವ ಹೆರಿಗೆಗೆಂದು ಬಂದಿದ್ದ ಬೆಳ್ತಂಗಡಿ ನಗರದ ಸುದೆಮುಗೇರು ನಿವಾಸಿ ಲೀಲಾವತಿ ಎಂಬ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದು.ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲೇ ಹೆರಿಗೆಯಾಗಬೇಕೆಂಬ ಅಭಿಲಾಷೆಯೊಂದಿಗೆ ಅಲ್ಲಿನ ವೈದ್ಯರ ಸೂಚನೆ ಮೇರೆಗೆ ಇಬ್ಬರು ಶುಶ್ರೂಶಕಿಯರ ಜೊತೆಗೆ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯ ತುರ್ತು ವಾಹನದಲ್ಲಿ ವೈದ್ಯರು ಮಂಗಳೂರಿಗೆ ಕಳುಹಿಸಿದ್ದರು….

Read More

ವಿಕಸಿತ ಭಾರತ ಜಿ ರಾಮ್ ಜಿ ಯೋಜನೆಯಿಂದ ಗ್ರಾಮೀಣ ಜನರ ಜೀವನ ಸುಭದ್ರ: ಸಂಸದ ಕೋಟ

ಉಡುಪಿ: ಭಾರತ ಸರ್ಕಾರದ ವಾರ್ತಾ ಶಾಖೆ, ಬೆಂಗಳೂರು (ಪಿಐಬಿ) ವತಿಯಿಂದ ಇಂದು ಉಡುಪಿಯಲ್ಲಿ ವಿಕಸಿತ ಭಾರತ ಜಿ ರಾಮ್ ಜಿ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಆಯೋಜಿಸಿದ್ದ ‘ವಾರ್ತಾಲಾಪ’ ಕಾರ್ಯಾಗಾರವನ್ನು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ…

Read More

ಉಡುಪಿ: ಕಾಲೇಜು ಯುವತಿ ನಾಪತ್ತೆ

ಉಡುಪಿ: ಕಾಪು ತಾಲೂಕು ಕಟಪಾಡಿ ಏಣಗುಡ್ಡೆಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ನಗರದ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದ ಮೂಲತಃ ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ದೀಪ ಸುರೇಶ ಲಮಾಣಿ (20) ಎನ್ನುವ ಯುವತಿಯು ಫೆಬ್ರವರಿ 20 ರಂದು ಕಾಲೇಜಿಗೆ ರಜೆ ಮಾಡಿ ಮನೆಯಿಂದ ಹೊರ ಹೋದವರು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿರುತ್ತಾರೆ. 5 ಅಡಿ 6 ಇಂಚು ಎತ್ತರ, ಗೋಧಿ ಮೈಬಣ್ಣ, ಸಪೂರ ಶರೀರ ಹೊಂದಿದ್ದು, ಕನ್ನಡ, ಲಂಬಾಣಿ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ….

Read More

ಬಂದ್ಯೋಡ್ ಅಡ್ಕದಲ್ಲಿ ಸಿಎನ್‌ಜಿ–ಇಲೆಕ್ಟ್ರಿಕ್ ಆಟೋ ಡಿಕ್ಕಿ; ಇಬ್ಬರಿಗೆ ಗಾಯ

ಬಂದ್ಯೋಡು ಅಡ್ಕದಲ್ಲಿ ಸಿಎನ್‌ಜಿ ಆಟೋರಿಕ್ಷಾ ಮತ್ತು ಎಲೆಕ್ಟ್ರಿಕಲ್ ಆಟೋರಿಕ್ಷಾ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಇಬ್ಬರಿಗೆ ಗಾಯಗಳಾಗಿವೆ.ಸಿಎನ್‌ಜಿ ಆಟೋರಿಕ್ಷಾ ಚಾಲಕ ಹಕೀಮ್ ಮದ್ಯಪಾನ ಮಾಡಿದ್ದರಿಂದಲೇ ಅಪಘಾತ ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ. ಘಟನಾ ಸ್ಥಳಕ್ಕೆ ಬಂದ ಕುಂಬಳೆ ಎಸ್‌ಐ ಜಿಜೀಶ್ ಆಟೋ ಚಾಲಕ ಹಕೀಮ್ ಅವರನ್ನು ವೈದ್ಯಕೀಯ ಪರೀಕ್ಷೆಗೆಂದು ವಶಕ್ಕೆ ಪಡೆದು ಕರೆದೊಯಿದಿದ್ದಾರೆಇವರು ಪ್ರತಿದಿನವೂ ಮದ್ಯಪಾನ ಮಾಡುತ್ತಾರೆ ಎಂಬುದಾಗಿ ಇತರ ಆಟೋ ಚಾಲಕರು ಪೊಲೀಸರಿಗೆ ತಿಳಿಸಿದ್ದಾರೆ.

Read More

ಕಟ್ಟೆಮಾರ್ ತುಳು ಚಿತ್ರ ದುಬೈ ಯಲ್ಲಿ ಭರ್ಜರಿ ಬಿಡುಗಡೆ

ದುಬೈ: ಕರಾವಳಿಯ ಯಶಸ್ವಿ ಪ್ರದರ್ಶನ ಗೊಳ್ಳುತ್ತಿರುವ ತುಳು ಚಿತ್ರ ಕಟ್ಟೆಮಾರ್ ದುಬೈನಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಿ ಅಪಾರ ಪ್ರತಿಕ್ರಿಯೆ ಪಡೆಯುತ್ತಿದೆ. ಯುಎಇಯಲ್ಲಿ ವಾಸಿಸುವ ತುಳು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್‌ಗಳಿಗೆ ಆಗಮಿಸಿ ಚಿತ್ರತಂಡಕ್ಕೆ ಭಾರೀ ಬೆಂಬಲ ವ್ಯಕ್ತಪಡಿಸಿದರು. ದುಬೈ ನಗರದ ಪ್ರಮುಖ ಥಿಯೇಟರ್‌ನಲ್ಲಿ ನಡೆದ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರತಂಡದ ಸದಸ್ಯರು ಹಾಗೂ ಅನೇಕ ಗಣ್ಯರು ಭಾಗವಹಿಸಿದ್ದರು. ವಿದೇಶದಲ್ಲಿ ತುಳು ಚಿತ್ರದ ಬಿಡುಗಡೆ ಕರಾವಳಿ ಕಲಾವಿದರ ಪರಿಶ್ರಮಕ್ಕೆ ದೊರೆತ ದೊಡ್ಡ ಗೌರವವೆಂದು ಚಿತ್ರ ತಂಡ ಅಭಿಪ್ರಾಯ ವ್ಯಕ್ತಪಡಿಸಿದರು .ಚಿತ್ರದ ಕಥೆ,…

Read More

ಸಹಕಾರ ಕ್ಷೇತ್ರದ ಭೀಷ್ಮ , ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬದ ಸಂಭ್ರಮ ಮತ್ತು 77 ಮಂದಿ ಫಲಾನುಭವಿಗಳಿಗೆ ಸವಲತ್ತುಗಳ ವಿತರಣಾ ಕಾರ್ಯಕ್ರಮ … !

ಮಂಗಳೂರು:ಸಹಕಾರ ಕ್ಷೇತ್ರದ ಭೀಷ್ಮ , ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬದ ಸಂಭ್ರಮ ಅಭಿವಂದನಾ ಕಾರ್ಯಕ್ರಮ ಹಾಗೂ 77 ಮಂದಿ ಫಲಾನುಭವಿಗಳಿಗೆ ಸವಲತ್ತುಗಳ ವಿತರಣಾ ಕಾರ್ಯಕ್ರಮ ಪ್ರಧಾನ ಕಚೇರಿಯ ಬ್ಯಾಂಕ್ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತಾಡಿದ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ , “ಸಹಕಾರಿ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿರುವ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಶ್ಲಾಘನೀಯವಾದುದು. ಇಂದು ಹುಟ್ಟುಹಬ್ಬ ಆಚರಿಸುತ್ತಿರುವ ಅವರು ಈ ವೇಳೆಯಲ್ಲೂ…

Read More

ಕಾಸರಗೋಡು ಡಿವೈಎಸ್ಪಿ ಸಿಬಿ ಥಾಮಸ್ ಹಾಗೂ ಎಎಸ್ಐ ಮೋಹನನ್‌ಗೆ ರಾಜ್ಯ ಇಂಟೆಲಿಜೆನ್ಸ್ ಅತ್ಯುತ್ತಮ ಸೇವಾ ಪ್ರಶಸ್ತಿ.ಸೂಕ್ಷ್ಮ ಪ್ರಕರಣಗಳ ತನಿಖೆಯಲ್ಲಿ ಕರ್ತವ್ಯನಿಷ್ಠೆಗೆ ರಾಜ್ಯ ಮಟ್ಟದಲ್ಲಿ ಗೌರವ

ಕಾಸರಗೋಡು: ಕೇರಳ ರಾಜ್ಯ ಇಂಟೆಲಿಜೆನ್ಸ್ ವಿಭಾಗದ ಅತ್ಯುತ್ತಮ ನೌಕರ ಸೇವಾ ಪ್ರಶಸ್ತಿಗೆ ಕಾಸರಗೋಡು ಜಿಲ್ಲೆಯ ಡಿವೈಎಸ್ಪಿ ಸಿಬಿ ಥಾಮಸ್ ಹಾಗೂ ಎಎಸ್ಐ ಮೋಹನನ್ ಅರ್ಹರಾಗಿದ್ದಾರೆ. ಪ್ರಸ್ತುತ ಇವರೀರ್ವರೂ ಕಾಸರಗೋಡು ಜಿಲ್ಲೆಯ ಒಂದೇ ಕಚೇರಿಯಲ್ಲಿ ಉತ್ಕೃಷ್ಟ ಸೇವೆ ಸಲ್ಲಿಸುವುದನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ನಡೆದಿದೆ. ಅಪರಾಧ ತನಿಖಾ ಕರ್ತವ್ಯದಲ್ಲಿ ಬದ್ಧತೆ ಮೆರೆದು, ವಿವಾದಿತವಾದ ಅನೇಕ ಸೂಕ್ಷ್ಮ ಪ್ರಕರಣಗಳನ್ನು ಬಯಲಿಗೆಳೆದು ಅಪರಾಧಿಗಳಿಗೆ ಶಿಕ್ಷೆ ದೊರಕಿಸಿಕೊಡುವಲ್ಲಿ ಕರ್ತವ್ಯ ಬದ್ಧತೆ ಮೆರೆದಿರುವುದನ್ನು ಪ್ರಶಸ್ತಿ ಪ್ರದಾನ ಸಂದರ್ಭ ಉಲ್ಲೇಖಿಸಲಾಗಿದೆ.ತಿರುವನಂತಪುರ ತೖಕಾಡ್ ಪೋಲೀಸ್ ಟ್ರೖನಿಂಗ್ ಕಾಲೇಜಿನಲ್ಲಿ…

Read More

ಮಂಜೇಶ್ವರ ಪಂಚಾಯತ್ ಶಾಪಿಂಗ್ ಕಾಂಪ್ಲೆಕ್ಸ್ ಹಾಗೂ ಮೀನು ಮಾರುಕಟ್ಟೆ ನಿರ್ಜೀವ – ರಸ್ತೆ ಬದಿಯಲ್ಲೇ ಮೀನು ಮಾರಾಟ

ಮಂಜೇಶ್ವರ: ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಮಂಜೇಶ್ವರ ಪಂಚಾಯತ್ ನಿರ್ಮಿಸಿದ ಶಾಪಿಂಗ್ ಕಾಂಪ್ಲೆಕ್ಸ್ ಹಾಗೂ ಮೀನು ಮಾರುಕಟ್ಟೆ ನಿರ್ಲಕ್ಷ್ಯಕ್ಕೆ ಗುರಿಯಾಗಿ ನಿರ್ಜೀವವಾಗಿ ಪರಿಣಮಿಸಿದೆ. ಇಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವುದು ಕೇವಲ ಒಂದು ಗುಜರಿ ಅಂಗಡಿ ಮತ್ತು ಒಂದು ಸೈಕಲ್ ರಿಪೇರಿ ಅಂಗಡಿ ಮಾತ್ರ. ಶಾಪಿಂಗ್ ಕಾಂಪ್ಲೆಕ್ಸ್‌ನ ಐದಕ್ಕಿಂತ ಹೆಚ್ಚು ಕೊಠಡಿಗಳು ಹಲವು ವರ್ಷಗಳಿಂದ ಖಾಲಿಯಾಗಿಯೇ ಇವೆ. ಮೀನು ಮಾರಾಟಕ್ಕಾಗಿ ಕಟ್ಟಡದ ನೆಲಮಹಡಿಯನ್ನು ವಿಶೇಷವಾಗಿ ಸಜ್ಜುಗೊಳಿಸಲಾಗಿತ್ತು. ಆದರೆ ಪ್ರಸ್ತುತ ಅಲ್ಲಿ ಗುಜರಿ ಅಂಗಡಿ ಕಾರ್ಯನಿರ್ವಹಿಸುತ್ತಿದೆ. ಇದರಿಂದಾಗಿ ಮೀನು ಮಾರಾಟ ಸಂಪೂರ್ಣವಾಗಿ ರಸ್ತೆ…

Read More

ಅನುಭವ ಲೇಖನ

ಬದಲಾದ ಬದುಕು ಆಗ ಅವಳಿಗೆ ಆರು ವರುಷ ಅವಳ ಅಜ್ಜ ಆವತ್ತು ತೀರಿಕೊಂಡಿದ್ದರು.ಅಜ್ಜ ಅಂದರೆ ತಾಯಿಯ ತಂದೆ.ಸಾವಿನ ಮನೆಯಲ್ಲಿ ಎಲ್ಲರೂ ಅಳುತ್ತಿದ್ದರು.ಅವಳು ತುಂಬಾನೇ ಹೆದರಿ ಹೋಗಿದ್ದಳು.ಅಜ್ಜ ತೀರಿಕೊಂಡರು ಇನ್ನು ನನ್ನ ಅಮ್ಮನಿಗೆ ಏನು ಆಗುತ್ತೋ… ಅಜ್ಜನ ಸಾವಿನ ನೋವಲ್ಲಿ ನನ್ನ ಅಮ್ಮನಿಗೆ ಏನಾದರೂ ಸಂಭವಿಸಬಹುದೋ ಅನ್ನೋ ಭಯ ಈ ಪುಟ್ಟ ಮನಸನ್ನು ಕಾಡುತ್ತಾ ಇತ್ತು.ಅಷ್ಟೇ ಅಲ್ಲ ಕೈಕಾಲು ನಡುಕ…ಹೊಟ್ಟೆ ತೊಳೆಸಿದಂತೆ ಅನುಭವ…ಮೈಯೆಲ್ಲ ತಣ್ಣಗಾಗಿ ನಾನೇಕೆ ಈ ಭೂಮಿ ಮೇಲೆ ಬದುಕಿರುವೆ ಅನ್ನೋ ಭಾವನೆ.ಏನೋ ಒಂಥರಾ ಹೇಳೋಕೆ ಆಗದೇ…

Read More

ಶ್ರೀ ಕೋಮರಾಯ ದೈವಕ್ಕೆ ಸಂಬಂಧಪಟ್ಟ, ಮಾಕುರ ಕರಿಯ ಎಂಬ ಸ್ಥಳ

ಕೋಮರಾಯ ದೈವವು ಸ್ತ್ರೀ ರೂಪ ಹೊತ್ತು, ಉದಿಪು ಸ್ಥಾನ ಏನಿಯರ್ಪು ಎಂಬ ಸ್ಥಳದಿಂದ, ಹೊರಟು,ಕನ್ಯಾರ, ಛತ್ರo ಪಲ್ಲ, ಅಂಬಿಲಡ್ಕ, ಚೂರಿತಡ್ಕ, ಬಂಬ್ರಾಣ, ಮಾಕುರ ಕರಿಯಕ್ಕೆ ತಲುಪುವಾಗ, ಮಧ್ಯರಾತ್ರಿ 12 ಗಂಟೆಯಾಗಿರುತ್ತದೆ. ಈ ದಡದಿಂದ, ಆ ದಡಕ್ಕೆ ಹೋಗಲುದೋಣಿ ಬಿಡಲು ಹೇಳಿದಾಗ ನಾವಿಕ ಹಿಂಜರಿಯುತ್ತಾನೆ, ಕೊನೆಗೆ ಪಟ್ಟು ಹಿಡಿದು, ಕಲ್ಯಾಣಿ ಮದಿಮಾಲ್ ರೂಪದಲ್ಲಿ ಇದ್ದ ದೈವ, ದೋಣಿ ಏರಿ ಕುಳಿತುಕೊಳ್ಳುತ್ತದೆ, ದೋಣಿ ಮಧ್ಯ ಬಾಗಕ್ಕೆ ತಲುಪುವಾಗ,ದೈವ ದೋಣಿಯನ್ನು ಮಗುಜಿ ಹಾಕಿ ನಾವಿಕನನ್ನು ಮುಳುಗಿಸುತ್ತದೆ, ನಂತರ, ಇಚ್ಲ oಗೋಡು, ಎಂಬ…

Read More
error: Content is protected !!