ಡಿಸೆಂಬರ್ 19ರಿಂದ 22ರವರೆಗೆ ಮಂಗಳೂರಿನ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳದಲ್ಲಿ 5ನೇ ರಾಷ್ಟ್ರೀಯ ಫಿನ್‌ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್ – 2025 ಸ್ಪರ್ಧೆ
ಮಂಗಳೂರು :ಅಂಡರ್‌ವಾಟರ್ ಸ್ಪೋರ್ಟ್ಸ್ ಫೆಡರೇಶನ್ ಆಫ್ ಇಂಡಿಯಾ (USFI) ವತಿಯಿಂದ 5ನೇ ರಾಷ್ಟ್ರೀಯ ಫಿನ್‌ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್ – 2025 ಈಜು ಸ್ಪರ್ಧೆಯು ಡಿಸೆಂಬರ್ 19ರಿಂದ 22ರ ತನಕ ಮಂಗಳೂರಿನ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳದಲ್ಲಿ ಆಯೋಜಿಸಲಾಗಿದೆ ಎಂದು ಅಂಡರ್ ವಾಟರ್ ಸ್ಪೋರ್ಟ್ಸ್ ಫೆಡರೇಶನ್ ಆಫ್ ಇಂಡಿಯಾ ಸೆಕ್ರೆಟರಿ ಜನರಲ್ ಡಾ. ತಪನ್ ಕುಮಾರ್ ಪಾಣಿಗ್ರಾಹಿ ತಿಳಿಸಿದರು. ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿ , ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ (ಭಾರತ ಸರ್ಕಾರ)ದಿಂದ ಮಾನ್ಯತೆ ಪಡೆದಿರುವ…