ಮಲಯಾಳಂನ ಹಿರಿಯ ನಟ-ನಿರ್ದೇಶಕ ಶ್ರೀನಿವಾಸನ್ ಇನ್ನಿಲ್ಲ
ಕೊಚ್ಚಿ: ಮಲಯಾಳಂ ಭಾಷೆ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಮತ್ತು ನಿರ್ಮಾಪಕ ಶ್ರೀನಿವಾಸನ್(69) ಇಂದು ನಿಧನರಾಗಿದ್ದಾರೆ.ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಉದಯಂಪೀರೂರಿನ ತನ್ನ ನಿವಾಸದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಆರೋಗ್ಯದಲ್ಲಿ ದಿಡೀರ್ ಏರುಪೇರು ಕಂಡು ಬಂದ ಬಳಿಕ ಅವರನ್ನು ತ್ರಿಪ್ಪುನಿತುರಾದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಶನಿವಾರ ಬೆಳಿಗ್ಗೆ ಅವರು ಮೃತಪಟ್ಟಿದ್ದಾರೆ. ಕೇರಳದ ತಲಕ್ಕೇರಿ ಬಳಿಯ ಪಟ್ಯಂನಲ್ಲಿ 1956ರ ಏಪ್ರಿಲ್ 6 ರಂದು ಜನಿಸಿದ ಶ್ರೀನಿವಾಸನ್, ಕದಿರೂರಿನಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಆ ಬಳಿಕ ಮಟ್ಟನೂರಿನ ಪಿಆರ್‌ಎನ್ ಎಸ್‌ಎಸ್…