ಮಂಗಳೂರು: ರಾಜಕೀಯದಲ್ಲಿ ‘ಗ್ಲಾಮರ್’ ಹೇಳಿಕೆ—ಮಾಜಿ ಸಚಿವೆ ಮೋಟಮ್ಮ ಮಾತಿಗೆ ವಿವಾದ
ಮಂಗಳೂರು : ರಾಜಕೀಯದಲ್ಲಿ ಹೆಣ್ಣುಮಕ್ಕಳು ಗ್ಲಾಮರಸ್ ಆಗಿರ್ಬೇಕು ಅನ್ನೊದು ಹೆಚ್ಚಾಗಿದೆ ಎಂಬ ಮಾಜಿ ಸಚಿವೆ ಕಾಂಗ್ರೆಸ್ ನಾಯಕಿ ಮೋಟಮ್ಮ ಅವರ ಹೇಳಿಕೆ ವಿವಾದಕ್ಕೆ ಹಾದಿ ತೆರೆದಿದೆ. ಮಹಿಳಾ ವೈಭವ 2026ರ ಕಾರ್ಯಕ್ರಮದಲ್ಲಿ ಮಾಜಿ ಸಚಿವರೂ ಆಗಿರುವ ಮೋಟಮ್ಮ ಭಾಷಣ ಮಾಡಿದ್ದರು.ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದಿಂದ ಆಯೋಜನೆಯಾದ ಕಾರ್ಯಕ್ರಮದಲ್ಲಿ ರಾಜಕೀಯದಲ್ಲಿ ಮಹಿಳೆಯರು ಚುರುಕಾಗಿರಬೇಕು.ಅದನ್ನು ಬಿಟ್ಟು, ಹೆಣ್ಣುಮಕ್ಕಳು ನಾವು, ಗ್ಲಾಮರಸ್ ಆಗಿ ಇರ್ಬೇಕು. ಎಂಬುದು ಸರಿಯಲ್ಲ ಎಂಬ ರೀತಿಯಲ್ಲಿ ಅವರು ಮಾತನಾಡಿದ್ದರು. ‘ರಾಜಕೀಯ ಮುಖಂಡರು ನಮ್ಮನ್ನು ಗುರುತಿಸಬೇಕು.’‘ಅವರಿಗೆ ನಾವು…