ಗಂಗೊಳ್ಳಿ: ಮತ್ಸ್ಯ ಕ್ಷಾಮ ನೀಗಿ ಸಮೃದ್ಧ ಮೀನುಗಾರಿಕೆ ಆಗಲಿ- ಮೀನುಗಾರರಿಂದ ಸಮುದ್ರರಾಜನಿಗೆ ವಿಶೇಷ ಪೂಜೆ
ಉಡುಪಿ: ಈ ಸಾಲಿನಲ್ಲಿ ಮತ್ಸ್ಯಕ್ಷಾಮ ಬಾರದೆ, ಮೀನುಗಳ ಸಮೃದ್ಧಿ ನೆಲೆಸಿ ಮೀನುಗಾರಿಕೆಗೆ ತೆರಳಿದಾಗ ಯಾವುದೇ ಅಡ್ಡಿ ಆತಂಕಗಳು ಮೀನುಗಾರರಿಗೆ ಎದುರಾಗದಿರಲಿ ಎಂದು ಪ್ರಾರ್ಥಿಸಿ ಗಂಗೊಳ್ಳಿಯಲ್ಲಿ ಮೀನುಗಾರರು ಸಮುದ್ರಪೂಜೆ ನೆರವೇರಿಸಿದರು. ಗಂಗೊಳ್ಳಿಯ ಅರ್ಚಕ ವೇದಮೂರ್ತಿ ವಿಠಲ್ದಾಸ್ ಭಟ್ ನೇತೃತ್ವದಲ್ಲಿ ಸಮುದ್ರ ಪೂಜೆಯ ಧಾರ್ಮಿಕ ವಿಧಿಗಳು ನೆರವೇರಿದವು. ಪರ್ಸಿನ್ ಬೋಟ್, ತ್ರಿಸೆವೆಂಟಿ ಬೋಟ್ ಹಾಗೂ ಟ್ರಾಲರ್ ಬೋಟ್ಗಳ ಸಂಘದ ಸದಸ್ಯರು ಸಮುದ್ರ ರಾಜನಿಗೆ ಹಾಲು, ಸೀಯಾಳ, ಫಲಪುಷ್ಪವನ್ನು ಅರ್ಪಿಸಿದರು. ಕಡಲಿನಲ್ಲಿ ತುಪಾನ್(ಗಾಳಿಯೊತ್ತಡ) ಹೆಚ್ಚಿದೆ. ಹೀಗಾಗಿ ಎರಡು ತಿಂಗಳ ಮೀನುಗಾರಿಕಾ ನಿರ್ಬಂಧ…
