ವಿಜೃಂಭಣೆಯಿಂದ ನಡೆದ ಕುಲಾಲ ಸಮಾಜ ಬಾಂಧವರ ಕುಂಭ ಕಲಾವಳಿ-ಕುಲಾಲ ಕಲಾ ಸೇವಾಂಜಲಿ ಕಾರ್ಯಕ್ರಮ…!
ಮಂಗಳೂರು: ಕುಲಾಲ ಸಮುದಾಯವು ತಲೆತಲಾಂತರಗಳಿಂದ ಮಹಾನ್ ಸಾಧಕರನ್ನು ನೀಡಿರುವ ದಿವ್ಯ ಸಮುದಾಯವಾಗಿದ್ದು, ಎಲ್ಲ ಸಮುದಾಯಗಳ ಪ್ರೀತಿ ಮತ್ತು ಸ್ವೀಕಾರವನ್ನು ಪಡೆದಿದೆ. ನಮ್ಮದು ಎಂಬ ಭಾವನೆ ಮೂಡಿದಾಗಲೇ ರಾಜಕೀಯ ಹಾಗೂ ಸಾಮಾಜಿಕ ಬೆಳವಣಿಗೆ ಸಾಧ್ಯ. ಕಲೆ, ಸಂಸ್ಕೃತಿ ಮತ್ತು ಆಚಾರಗಳ ಪಾಲನೆ ಅಗತ್ಯವಿದ್ದು, ಪೂರ್ವಜರ ಆದರ್ಶಗಳನ್ನು ಅನುಸರಿಸಿ ಇನ್ನಷ್ಟು ಸೇವಾಕಾರ್ಯಗಳನ್ನು ಕೈಗೊಳ್ಳಬೇಕು. ಹುಟ್ಟುಸಾವಿನ ನಡುವಿನ ಜೀವನದಲ್ಲಿ ಧರ್ಮ ಹಾಗೂ ಕರ್ತವ್ಯ ಪ್ರಜ್ಞೆ ಅತ್ಯಂತ ಮುಖ್ಯವಾದುದು ಎಂದು ಶ್ರೀ ಧಾಮ ಮಾಣಿಲದ ಯೋಗಿ ಕೌಸ್ತುಭ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ…
