Avatar

NAMMA MEDIA 24X7

ಕಾರಿಂಜೇಶ್ವರ ದೇವಸ್ಥಾನಕ್ಕೆ ಸಿಡಿಲು ಬಡಿತ: ಶಾಸಕ ರಾಜೇಶ್ ನಾಯ್ಕ್ ಭೇಟಿ, ಪರಿಶೀಲನೆ

ಸಿಡಿಲು ಬಡಿದು ಹಾನಿಯಾಗಿರುವ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದರ್ಭ ತಾಲೂಕು ತಹಶಿಲ್ದಾರ್ ಮಂಜುನಾಥ್ ಅವರು ಜೊತೆಗಿದ್ದು, ಶೀಘ್ರವಾಗಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಚರ್ಚಿಸಿದರು. ಬಳಿಕ ಮಾಧ್ಯಮ ಜೊತೆ ಮಾತನಾಡಿದ ಅವರು ಇತಿಹಾಸ ಪ್ರಸಿದ್ದ ಕಾರಿಂಜ ಕ್ಷೇತ್ರದ ಮೇಲ್ಭಾಗದ ಕಲಶದ ಭಾಗಕ್ಕೆ ಸಿಡಿಲು ಬಡಿದು ಹಾನಿಯಾಗಿದೆ. ಇದನ್ನು ಶೀಘ್ರ ಸರಿಪಡಿಸಬೇಕಾಗಿದೆ. ಈ ನೆಲೆಯಲ್ಲಿ ಬಂಟ್ವಾಳ ತಹಶೀಲ್ದಾರ್ ಅವರ ಉಪಸ್ಥಿತಿಯಲ್ಲಿ ಊರಿನ ಪ್ರಮುಖರ ಜತೆಗೆ…

Read More

ಸಂಸದ ಕ್ಯಾ. ಬ್ರಿಜೇಶ್ ಚೌಟ ನಾಳೆ ಸಾರ್ವಜನಿಕರ ಭೇಟಿಗೆ ಲಭ್ಯ

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಮೇ 19ರ ಮಂಗಳವಾರದಂದು ಸಾರ್ವಜನಿಕರ ಭೇಟಿಗೆ ತಮ್ಮ ಕಚೇರಿಯಲ್ಲಿ ಲಭ್ಯವಿರುತ್ತಾರೆ. ಪಡೀಲ್‌ನಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿರುವ ಸಂಸದರ ಕಚೇರಿಯಲ್ಲಿ ನಾಳೆ ಬೆಳಗ್ಗೆ 10ರಿಂದ ಮಧ್ಯಾಹ್ನ12ಗಂಟೆಯವರೆಗೆ ಅವರು ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ಸಾರ್ವಜನಿಕರು ಹಾಗೂ ಕ್ಷೇತ್ರದ ಮತದಾರರು ತಮ್ಮ ಸಮಸ್ಯೆಗಳು ಮತ್ತು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಸಂಸದರನ್ನು ಖುದ್ದಾಗಿ ಭೇಟಿಯಾಗಿ ಚರ್ಚಿಸಬಹುದಾಗಿದೆ. ಆ ಮೂಲಕ ಸಾರ್ವಜನಿಕರು ತಮ್ಮ ಕುಂದು-ಕೊರತೆಗಳನ್ನು ಸಂಸದರ…

Read More

ಮಾಣಿ-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ.ಸ್ಕೂಟರ್ ಸವಾರ ಗಂಭೀರ ಸ್ಥಿತಿ

ಮಹಿಂದ್ರಾ ಪಿಕಪ್ ವಾಹನ‌ ಮತ್ತು ಆಕ್ಟಿವಾ ದ್ವಿಚಕ್ರ ವಾಹನದ‌ ನಡುವೆ ಅಪಘಾತ ನಡೆದ ಘಟನೆ ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಮಿತ್ತೂರು ಸಮೀಪದ ಕೂವೆತ್ತಿಲ ಎಂಬಲ್ಲಿ ಇಂದು ನಡೆದಿದೆ. ದ್ವಿಚಕ್ರ ವಾಹನ‌ ಸವಾರ ಗಂಭೀರವಾಗಿ ಗಾಯಗೊಂಡಿದ್ದು ಇವ್ರನ್ನು ಸ್ಥಳೀಯ ನಿವಾಸಿ ಸಲೀಂ ಎಂದು ಗುರುತಿಸಲಾಗಿದೆ. ಕಬಕ ಕಡೆಯಿಂದ ಮಿತ್ತೂರು ಕಡೆಗೆ ಹೋಗುತ್ತಿದ್ದ ಮಹಿಂದ್ರಾ ಪಿಕಪ್ ವಾಹನ ಸಲೀಂ ರವರು ಸಂಚರಿಸುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡ ಸಲೀಂರನ್ನು ಸ್ಥಳೀಯರು…

Read More

ಎಸ್‌.ಸಿ.ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂತ ರವಿದಾಸರ 650ನೇ ಜಯಂತಿ ಅಂಗವಾಗಿ “ಭಾರತೀಯ ಸಂತ ಪರಂಪರೆ” ಉಪನ್ಯಾಸಮಾಲೆ ಕಾರ್ಯಕ್ರಮ

ಮಂಗಳೂರು : ಎಸ್‌.ಸಿ.ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ, ಮಂಗಳೂರು ವಿಭಾಗ ಹಾಗೂ ಕಾಲೇಜಿನ ಹಿಂದಿ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಸಂತ ರವಿದಾಸರ 650ನೇ ಜಯಂತಿಯ ಅಂಗವಾಗಿ “ಭಾರತೀಯ ಸಂತ ಪರಂಪರೆ” ವಿಷಯದ ಉಪನ್ಯಾಸಮಾಲೆ – 2 ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ಕಾರ್ಯಕ್ರಮವು ಭಕ್ತಿ, ಮಾನವೀಯತೆ, ಸಮಾನತೆ ಹಾಗೂ ಮೌಲ್ಯಾಧಾರಿತ ಬದುಕಿನ ಸಂದೇಶವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವಲ್ಲಿ ಯಶಸ್ವಿಯಾಯಿತು. ಕಾರ್ಯಕ್ರಮದ ಆರಂಭದಲ್ಲಿ ಸಂತ ರವಿದಾಸರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಬಳಿಕ ದೀಪ…

Read More

ತಣ್ಣೀರುಭಾವಿಯಲ್ಲಿ “ಎನ್‌ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್ 2026” ಸ್ಪರ್ಧೆಗಳು ಮೇ 29ರಿಂದ

ಮಂಗಳೂರು:ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ವತಿಯಿಂದ ಆಯೋಜಿಸಲಾಗುತ್ತಿರುವ ಏಳನೇ ಆವೃತ್ತಿಯ “ಎನ್‌ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್ 2026” ಸ್ಪರ್ಧೆಗಳು ಮೇ 29ರಿಂದ 31ರವರೆಗೆ ಮಂಗಳೂರಿನ ತಣ್ಣೀರುಭಾವಿಯ ಬ್ಲೂ ಬೇ ಎಕೋ ಬೀಚ್‌ನಲ್ಲಿ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ತಿಳಿಸಿದ್ದಾರೆ. ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕರ್ನಾಟಕವು ಸರ್ಫಿಂಗ್ ಹಾಗೂ ಕರಾವಳಿ ಕ್ರೀಡೆಗಳ ಕ್ಷೇತ್ರದಲ್ಲಿ ದೇಶದ ಪ್ರಮುಖ ತಾಣವಾಗಿ ನಿರಂತರವಾಗಿ ಹೊರಹೊಮ್ಮುತ್ತಿದೆ. ಎನ್‌ಎಂಪಿಎ ಇಂಡಿಯನ್ ಓಪನ್ ಆಫ್…

Read More

ಮೂಡುಬಿದಿರೆ: ಪಾಳು ಮನೆಯಲ್ಲಿ ಅನಾಥ ಶವ ಪತ್ತೆ, ಸ್ಥಳೀಯರಲ್ಲಿ ಆತಂಕ

ಮಂಗಳೂರು : ಮೂಡುಬಿದಿರೆಯ ವಾಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಡದಂಗಡಿ ಪರಿಸರದ ಪಾಳುಬಿದ್ದ ಮನೆಯೊಂದರಲ್ಲಿ ಅನಾಥ ಶವವೊಂದು ಪತ್ತೆಯಾಗಿದೆ. ಮೃತದೇಹವು ಸಂಪೂರ್ಣವಾಗಿ ಕೊಳೆತು ಹೋಗಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಈ ವ್ಯಕ್ತಿ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದ್ದು, ಶವದಿಂದ ತೀವ್ರ ದುರ್ನಾತ ಬರುತ್ತಿತ್ತು. ನೆರೆಮನೆಯವರ ನಾಯಿಯೊಂದು ಕಾಣೆಯಾಗಿದ್ದರಿಂದ, ಅದು ಎಲ್ಲಾದರೂ ಸತ್ತು ಬಿದ್ದಿರಬಹುದೇ ಎಂದು ಸುತ್ತಮುತ್ತ ಹುಡುಕಾಟ ನಡೆಸುತ್ತಿದ್ದಾಗ ಈ ಪಾಳುಬಿದ್ದ ಮನೆಯಲ್ಲಿ ಮಾನವನ ಮೃತದೇಹ ಇರುವುದು ಬೆಳಕಿಗೆ ಬಂದಿದೆ. ಮೃತಪಟ್ಟ…

Read More

ಕರಾವಳಿ ಕರ್ನಾಟಕದಲ್ಲಿ ಹವಾಮಾನ ತೀವ್ರತೆ: ಮೀನುಗಾರರಿಗೆ ಮುನ್ನೆಚ್ಚರಿಕೆ ಸೂಚನೆ

ಮಂಗಳೂರು: ಕರಾವಳಿಯಲ್ಲಿ ಸಮುದ್ರದ ಅಬ್ಬರ ಹೆಚ್ಚಳ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಕರಾವಳಿಯಲ್ಲಿ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆಯಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕರಾವಳಿ ಕರ್ನಾಟಕದ ಹೆಚ್ಚಿನ ಸ್ಥಳಗಳಲ್ಲಿ ಹಾಗು ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಪ್ರಮುಖವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಲ್ಲಿ 7 ಸೆಂಟಿ ಮೀಟರ್ ಮಳೆಯಾಗಿದೆ. ಉಳಿದಂತೆ ಹಾವೇರಿಯಲ್ಲಿ 5, ಮೂಡಬಿದ್ರೆ, ಶಿವಮೊಗ್ಗ, ಹುಂಚದಕಟ್ಟೆ,…

Read More

ಪೀಸ್ ಕ್ರಿಯೇಟಿವ್ ಆಂಗ್ಲ ಮಾಧ್ಯಮ ಸೆಂಟ್ರಲ್ ಶಾಲೆಯಲ್ಲಿ ಎರಡು ದಿನಗಳ ‘ಶಿಕ್ಷಕರ ತರಬೇತಿ ಕಾರ್ಯಕ್ರಮ’ಕ್ಕೆ ಚಾಲನೆ

​ ಮಂಜೇಶ್ವರ: “ಸರಿಯಾದ ಶಿಕ್ಷಣದ ಮೂಲಕ ರಾಷ್ಟ್ರದ ಸಬಲೀಕರಣ” ಎಂಬ ಘೋಷವಾಕ್ಯದೊಂದಿಗೆ ಮುನ್ನಡೆಯುತ್ತಿರುವ ಗಡಿಭಾಗದಲ್ಲಿರುವ ಪ್ರತಿಷ್ಠಿತ ಕುಂಜತ್ತೂರು ಪೀಸ್ ಕ್ರಿಯೇಟಿವ್ ಶಾಲೆಯಲ್ಲಿ ಶಿಕ್ಷಕರಿಗಾಗಿ ಹಮ್ಮಿಕೊಳ್ಳಲಾದ ಎರಡು ದಿನಗಳ ವಿಶೇಷ ತರಬೇತಿ ಕಾರ್ಯಕ್ರಮಕ್ಕೆ ಸೋಮವಾರದಂದು ಅದ್ದೂರಿಯ ಚಾಲನೆ ದೊರಕಿತು. ​ಎಲ್ ಕೆ ಜಿ ಯಿಂದ 10ನೇ ತರಗತಿಯವರೆಗಿನ ಶಿಕ್ಷಕರಿಗಾಗಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ಶೈಕ್ಷಣಿಕ ಸಲಹೆಗಾರರು ಹಾಗೂ ಐಟೆಕ್ ತಂತ್ರಜ್ಞರಾದ ಶ್ರೀ ಶಿವರಾಜ್ ಕೆ. ಸಿ. ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು. ಸೋಮವಾರ…

Read More

ಕೇರಳ ಸಿಎಂ ಪ್ರಮಾಣವಚನ ಸಮಾರಂಭ: ಕಾಂಗ್ರೆಸ್ ದಿಗ್ಗಜರ ಸಮಾಗಮ

ಕೇರಳ ರಾಜ್ಯದ ನಿಯೋಜಿತ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರು ಪ್ರಮಾಣವಚನ ಸ್ವೀಕರಿಸಿದ ಸಮಾರಂಭವು ಇಂದು ಭವ್ಯವಾಗಿ ನೆರವೇರಿತು. ಈ ಮಹತ್ವದ ಕಾರ್ಯಕ್ರಮದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಹಾಗೂ ರಾಜ್ಯಸಭಾ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದರು. ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಶಾಸಕರಾದ ಡಾ. ಮಂಜುನಾಥ ಭಂಡಾರಿ ಕೂಡ ಉಪಸ್ಥಿತರಿದ್ದು ಸಮಾರಂಭದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಸಮಾರಂಭದ ಅಂಗವಾಗಿ…

Read More

ಕ್ರಿಕೆಟ್ ಮೈದಾನದ ಜಗಳ ಕೊಲೆಯಲ್ಲಿ ಅಂತ್ಯ: ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ ಚಾಕು ಇರಿತಕ್ಕೆ ಬಲಿ

ಮಂಜೇಶ್ವರ: ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಮಾರ್ಪಿನಡ್ಕ ಎಂಬಲ್ಲಿ ಸಣ್ಣ ವಿಚಾರಕ್ಕೆ ನಡೆದ ಗಲಾಟೆ ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ. ಕುಂಬಡಾಜೆ ಸಹಕಾರಿ ಬ್ಯಾಂಕ್‌ನ ಭದ್ರತಾ ಸಿಬ್ಬಂದಿ, ಬದ್ರ ಕುಡ್ಲು ನಿವಾಸಿ ಸುರೇಶ್ (42) ಎಂಬುವವರು ದುಷ್ಕರ್ಮಿಗಳ ಚಾಕು ಇರಿತದಿಂದ ಸಾವನ್ನಪ್ಪಿದ ದುರ್ದೈವಿ. ಭಾನುವಾರ ಸಂಜೆ ಕುಂಬಡಾಜೆ ಪಂಚಾಯತ್ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯ ಸಂದರ್ಭದಲ್ಲಿ ಆಟಗಾರರ ನಡುವೆ ಸಣ್ಣ ವಾಕ್ಸಮರ ನಡೆದಿತ್ತು. ಇದೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡ ಆರೋಪಿಗಳು, ರಾತ್ರಿ ಕುಂಬಡಾಜೆ ಸಹಕಾರಿ ಬ್ಯಾಂಕ್ ಬಳಿ ಇದ್ದ ಸುರೇಶ್…

Read More
error: Content is protected !!