Avatar

NAMMA MEDIA 24X7

ಕೊರಗಜ್ಜ ದೈವಕ್ಕೆ ಹರಕೆ ತೀರಿಸಿದ ನಟಿ ರಚಿತಾ ರಾಮ್

ಮಂಗಳೂರು:ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್,ಜನಪ್ರಿಯ ನಟಿ ರಚಿತಾ ರಾಮ್ ತುಳುನಾಡಿನ‌ ಆರಾಧ್ಯ ದೈವ ಕೊರಗಜ್ಜ ದೈವಕ್ಕೆ ಹರಕೆ ಕೋಲ ಸಲ್ಲಿಸಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೆಂಜನಪದವಿನ ಕೊರಗಜ್ಜ ಸನ್ನಿಧಿಯಲ್ಲಿ ನಟಿ ರಚಿತಾ ರಾಮ್ ತನ್ನ ಹರಕೆ ಕೋಲ ಸೇವೆ ಸಲ್ಲಿಸಿದ್ದಾರೆ. ತಾನು ಅಂದುಕೊಂಡ ಕೆಲಸಗಳು ನೆರವೇರಿದರೆ,ಕೊರಗಜ್ಜ ದೈವಕ್ಕೆ ಕೋಲ ಸೇವೆ ಸಲ್ಲಿಸುವ ಹರಕೆ ಹೊತ್ತಿದ್ದ ರಚಿತಾ ರಾಮ್,ಇದೀಗ ಅದನ್ನು ಪೂರ್ಣಗೊಳಿಸಿದ್ದಾರೆ.ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಸೂಪರ್‌ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿರುವ ರಚಿತಾ ರಾಮ್.ಸದ್ಯ ಧ್ರುವ…

Read More

KSTA ಮಂಗಳಾದೇವಿ ವಲಯ ಸಮಿತಿಯಿಂದ 27ನೇ ವರ್ಷದ ವಾರ್ಷಿಕೋತ್ಸವ. ಟೈಲರ್ ಭವನದಲ್ಲಿ ಸತ್ಯನಾರಾಯಣ ಪೂಜೆ

ಮಂಗಳೂರು : KSTA ಕರ್ನಾಟಕ ಟೈಲರ್ ಅಸೋಸಿಯೇಷನ್ (ರಿ) ಮಂಗಳಾದೇವಿ ವಲಯ ಸಮಿತಿಯ ವತಿಯಿಂದ 27 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಹಾಗೂ ಟೈಲರ್ ಕುಟುಂಬಸ್ಥರಿಗೆ ಸುಖ ಶಾಂತಿ ನೆಲೆಸುವ ಅಂಗವಾಗಿ ಗೋರಿಗುಡ್ಡದಲ್ಲಿರುವ ಪ್ರಧಾನ ಕಚೇರಿ “ಟೈಲರ್ ಭವನ”ದಲ್ಲಿ ಸತ್ಯನಾರಾಯಣ ಪೂಜೆ ಭಕ್ತಿಭಾವದಿಂದ ನೆರವೇರಿತು. ಕರ್ನಾಟಕ ಟೈಲರ್ ಅಸೋಸಿಯೇಷನ್ಸ್ ನ ರಾಜ್ಯದ ಅಧ್ಯಕ್ಷರು, ಸ್ಥಾಪಕ ಸದಸ್ಯರೂ , ಹಾಗೂ ಜಿಲ್ಲೆಯ ಕ್ಷೇತ್ರ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಆಹ್ವಾನಿತರು ಭಾಗವಹಿಸಿ ಪೂಜೆಯಲ್ಲಿ ಪಾಲ್ಗೊಂಡು ….

Read More

ಬಂದ್ಯೋಡ್‌ನಲ್ಲಿ ಭೀಕರ ಅಪಘಾತ: ಯುವಕ ಸಾವು, ಇಬ್ಬರಿಗೆ ಗಂಭೀರ ಗಾಯ

​ಮಂಜೇಶ್ವರ: ಕುಂಬಳೆ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಂದ್ಯೋಡ್ನಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ​ಕರ್ನಾಟಕದ ಪಡುಬಿದ್ರಿ ಬಂಕೆರೆ ರಸ್ತೆಯ ಅಬ್ದುಲ್ ರಹೀಂ ಎಂಬುವವರ ಪುತ್ರ ಮುಹಮ್ಮದ್ ರಾಹಿಲ್ (34) ಸಾವನ್ನಪ್ಪಿದ ದುರ್ದೈವಿ. ಸ್ಕೂಟರ್‌ನಲ್ಲಿದ್ದ ಅವರ ಸ್ನೇಹಿತರಾದ ಅಬ್ದುಲ್ ಜಸೀರ್ ಮತ್ತು ಮುಹಮ್ಮದ್ ರೈಸ್ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ​​ಉಪ್ಪಳ ಭಾಗದಿಂದ ಬಂದ್ಯೋಡ್ ಕಡೆಗೆ ಸ್ಕೂಟರ್‌ನಲ್ಲಿ ಮೂವರು ಪ್ರಯಾಣಿಸುತ್ತಿದ್ದಾಗ, ಅದೇ ದಿಕ್ಕಿನಿಂದ…

Read More

ಕಾಪು ಬ್ರಹ್ಮಮುಗ್ಗೇರ್ಕಳ ಪಿಲಿಚಂಡಿ ದೈವಸ್ಥಾನದಲ್ಲಿ ಐತಿಹಾಸಿಕ ಪಿಲಿಕೋಲ ವೈಭವ

ಉಡುಪಿ: ಕಾಪುವಿನ ಬ್ರಹ್ಮಮುಗ್ಗೇರ್ಕಳ ಪಿಲಿಚಂಡಿ ದೈವಸ್ಥಾನದಲ್ಲಿ ದೈವಾರ್ಷಿಕವಾಗಿ ನಡೆಯುವ ಐತಿಹಾಸಿಕ ಪಿಲಿಕೋಲ ಶನಿವಾರ ಸಂಜೆ ಭಕ್ತಿಭಾವ ಹಾಗೂ ಸಂಭ್ರಮದ ವಾತಾವರಣದಲ್ಲಿ ನೆರವೇರಿತು. ಸಂಪ್ರದಾಯದಂತೆ ಹುಲಿ ವೇಷ ಧರಿಸುವ ದೈವ ನರ್ತಕನಿಗೆ ಪೂರ್ವ ವಿಧಿವಿಧಾನಗಳೊಂದಿಗೆ ಸ್ನಾನ ಮಾಡಿಸಿ, ತೆಂಗಿನ ಗರಿಯಿಂದ ನಿರ್ಮಿಸಿದ ವಿಶೇಷ ಪಂಜರದೊಳಗೆ ಬಣ್ಣಗಾರಿಕೆಗಾಗಿ ಕಳುಹಿಸಲಾಯಿತು. ಬಣ್ಣ ಬಳಿಯುವ ಕಾರ್ಯ ಪೂರ್ಣಗೊಂಡ ಬಳಿಕ ಪಟೇಲರ ಅನುಮತಿ ಪಡೆದು, ಪಿಲಿಚಂಡಿ ಮನೆಯವರು ತೀರ್ಥ ಚಿಮುಕಿಸಿದ ನಂತರ ನರ್ತಕನು ಪಂಜರದಿಂದ ಹೊರಬಂದು ಪಿಲಿಕೋಲಕ್ಕೆ ಚಾಲನೆ ನೀಡಿದರು. ಪಿಲಿ ದೈವವು ಬ್ರಹ್ಮರಗುಂಡಕ್ಕೆ…

Read More

ಹೊಸ ಸಚಿವ ಸಂಪುಟವೂ ಜಿಲ್ಲೆಯ ಪಾಲಿಗೆ ನಿರಾಶಾದಾಯಕ: ಎಂ.ಎಲ್. ಅಶ್ವಿನಿ

ಕಾಸರಗೋಡು: ಆರು ದಶಕಗಳ ಬಳಿಕ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದ ಎಲ್ಲಾ ಸಚಿವರು ಪ್ರಮಾಣ ವಚನ ಸ್ವೀಕರಿಸುತ್ತಿರುವಾಗ ಜಿಲ್ಲೆಯ ಪಾಲಿಗೆ ನಿರಾಶೆಯಷ್ಟೇ ಉಳಿದಿದೆ. ರಾಜ್ಯದಲ್ಲೇ ಅತ್ಯಂತ ಹಿಂದುಳಿದಿರುವ ಜಿಲ್ಲೆಗೆ ಮತ್ತೊಮ್ಮೆ ಪ್ರಾತಿನಿಧ್ಯವನ್ನು ನಿರಾಕರಿಸುವ ಮೂಲಕ, ಮುಂದಿನ ಐದು ವರ್ಷಗಳ ಕಾಲ ಜಿಲ್ಲೆಯ ಬಗ್ಗೆ ವಿ ಡಿ ಸತೀಶನ್ ಅವರ ಸರ್ಕಾರದ ಧೋರಣೆ ಏನಿರಲಿದೆ ಎಂಬುದು ಬಹುಮಟ್ಟಿಗೆ ಸ್ಪಷ್ಟವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ. ಸಚಿವರನ್ನು ಆಯ್ಕೆ ಮಾಡುವುದು ಯುಡಿಎಫ್ (UDF) ನ ಆಂತರಿಕ ವಿಷಯವಾಗಿದ್ದರೂ, ಜಿಲ್ಲೆಯ…

Read More

ಕೇರಳ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಪ್ರಮಾಣವಚನ

ತಿರುವನಂತಪುರಂ, ಮೇ 18: ಕೇರಳದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ನಾಯಕ ವಿ.ಡಿ. ಸತೀಶನ್ ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. ತಿರುವನಂತಪುರಂನ ಸೆಂಟ್ರಲ್ ಸ್ಟೇಡಿಯಂನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲ ಆರ್.ವಿ. ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಸತೀಶನ್ ಸೇರಿದಂತೆ 20 ಮಂದಿ ಸಚಿವರಿಗೆ ಹುದ್ದೆ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು. ನೂತನ ಸಚಿವ ಸಂಪುಟದಲ್ಲಿ ಕಾಂಗ್ರೆಸ್ ಪಕ್ಷದ 11 ಮಂದಿ ಶಾಸಕರು ಸ್ಥಾನ ಪಡೆದಿದ್ದು, ಭಾರತೀಯ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಪಕ್ಷದ ಐವರು ಸಚಿವರಾಗಿ ಸೇರ್ಪಡೆಯಾಗಿದ್ದಾರೆ….

Read More

ಬಡ ಹಿಂದು ಮಹಿಳೆಯ ಪರ ನೆರವು ಕೇಳಿಕೊಂಡು ಬಂದ ಮುಸ್ಲಿಂ ಮಹಿಳೆಯರು ! ಇದು ನಮ್ಮ ಭಾರತ ಎಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಉಡುಪಿಯಲ್ಲಿ ಅಪರೂಪದ ಘಟನೆಗೆ ಸಾಕ್ಷಿ

ಉಡುಪಿ: 35 ವರ್ಷಗಳ ಹಿಂದೆ ಸರ್ಕಾರದಿಂದ ನಿವೇಶನ ಮಂಜೂರು ಆಗಿದ್ದರೂ ಅರಣ್ಯ ಇಲಾಖೆಯ ಅಡ್ಡಿಯಿಂದಾಗಿ ಮನೆ ಕಟ್ಟಲಾಗದೆ ದಿಕ್ಕೆಟ್ಟು ಹೋಗಿದ್ದ ವಿಧವೆ ಹಿಂದು ಮಹಿಳೆಯೊಬ್ಬರ ಪರವಾಗಿ ನೆರೆಮನೆಯ ಮುಸ್ಲಿಂ ಮಹಿಳೆಯರು ಧ್ವನಿಯೆತ್ತಿದ ಅಪರೂಪದ ಪ್ರಸಂಗ ಉಡುಪಿಯಲ್ಲಿ ನಡೆದಿದೆ. ಉಡುಪಿಗೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಭೇಟಿಯಾಗಿ ಮುಸ್ಲಿಂ ಮಹಿಳೆಯರು ನೆರವು ಯಾಚಿಸಿದ್ದು ಹಿಂದು – ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾಗಿದ್ದಾರೆ. ಉಡುಪಿ ತಾಲೂಕಿನ 80 ಬಡಗಬೆಟ್ಟು ನಿವಾಸಿ ಗಿರಿಜಾ ಶೆಟ್ಟಿಗಾರ್ ಎಂಬ ವಯಸ್ಕ ಮಹಿಳೆ…

Read More

ಮಂಗಳೂರಿನಲ್ಲಿ ‘ತರವಾಡ್’ ಬ್ಯಾರಿ ಕಾದಂಬರಿ ಅವಲೋಕನ ಕಾರ್ಯಕ್ರಮ

ಮಂಗಳೂರು:ಬ್ಯಾರಿ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ (ರಿ) ಮಂಗಳೂರು ವತಿಯಿಂದ ಬ್ಯಾರಿ ಭಾಷಾ ವೈವಿಧ್ಯತೆ ಮತ್ತು ಪುರಾತನ ಬ್ಯಾರಿ ಸಂಸ್ಕೃತಿ ಸಂಪ್ರದಾಯಗಳ ಉಲ್ಲೇಖಗಳಿಗೆ ಸಾಕ್ಷಿಯಂತಿರುವ ಮರ್ಹೂಂ ಯು.ಎ. ಕಾಸೀಮ್ ಉಳ್ಳಾಲ್‌ರ ತರವಾಡ್ ಬ್ಯಾರಿ ಕಾದಂಬರಿಯ ಅವಲೋಕನ ಕಾರ್ಯಕ್ರಮ ನಗರದ ಹಂಪನಕಟ್ಟೆಯಲ್ಲಿರುವ ವಿಶ್ವವಿದ್ಯಾನಿಲಯ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಂಗಣದಲ್ಲಿ ನಡೆಯಿತು.ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಎಂ. ಫಾರೂಕ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾದಂಬರಿಯನ್ನು ಅವಲೋಕಿಸಿದ ಕತೆಗಾರ ಮುನವ್ವರ್ ಜೋಗಿಬೆಟ್ಟು ಮರ್ಹೂಂ ಯು.ಎ. ಕಾಸಿಮ್ ಉಳ್ಳಾಲ್ ತನ್ನ ಜೀವನಾನುಭವವನ್ನು…

Read More

ಚಿಲಿಂಬಿಗುಡ್ಡೆಯಲ್ಲಿ ಸಂತರ ಪಾದಯಾತ್ರೆ ಕಾರ್ಯಕ್ರಮ

ಮಂಗಳೂರು :ವಿಶ್ವ ಹಿಂದೂ ಪರಿಷತ್ ಮಂಗಳೂರು ಜಿಲ್ಲೆಯ ಧರ್ಮ ಪ್ರಸಾರ ಹಾಗೂ ಸಾಮಾಜಿಕ ಸಮರಸತಾ ವಿಭಾಗ ದ ವತಿಯಿಂದ ಚಿಲಿಂಬಿ ಗುಡ್ಡೆಯ ಉಪೇಕ್ಷಿತ ಬಂದುಗಳ ವಸತಿಯಲ್ಲಿ ಚಿತ್ರಾಪುರ ಶ್ರೀ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಗಳಿಂದ ಸಂತರ ಪಾದ ಯಾತ್ರೆ ಕಾರ್ಯಕ್ರಮ ರವಿವಾರ ನಡೆಯಿತು. ಶ್ರೀಪಾದರು ಹತ್ತಕ್ಕೂ ಹೆಚ್ಚು ಉಪೇಕ್ಷಿತ ಬಂಧುಗಳ ಮನೆಗೆ ತೆರಳಿ ಧರ್ಮ ಪಾಲನೆ ಮತ್ತು ರಕ್ಷಣೆಯ ಮಹತ್ವವನ್ನು ತಿಳಿಸಿದರು. ಚಿಲಿಂಬಿ ಗುಡ್ಡೆ ಶ್ರೀ ರಾಮಾಂಜನೆಯ ಭಜನಾ ಮಂದಿರದಲ್ಲಿ ಶ್ರೀಪಾದರನ್ನು ಗೌರವಿಸಲಾಯಿತು. ಈ ಕಾರ್ಯಕ್ರಮಕ್ಕೆ ಶ್ರೀ…

Read More

ವ್ಯಾಂಕೋವರ್‌ಗೆ ಬಂದ ಪ್ರಯಾಣಿಕರಲ್ಲಿ ಹಂಟಾವೈರಸ್ ಪತ್ತೆ

ವ್ಯಾಂಕೋವರ್: ಹಂಟಾವೈರಸ್ ಸೋಂಕು ತಗುಲಿದ್ದ ಕ್ರೂಸ್ ಹಡಗಿನಿಂದ ಮನೆಗೆ ಹಿಂದಿರುಗಿದ ನಾಲ್ವರು ಕೆನಡಿಯನ್ನರಲ್ಲಿ ಓರ್ವ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಕೆನಡಾದ ರಾಷ್ಟ್ರೀಯ ಆರೋಗ್ಯ ಸಂಸ್ಥೆ ಭಾನುವಾರ ಮಾಹಿತಿ ನೀಡಿದೆ. ಎಂವಿ ಹೊಂಡಿಯಸ್ ಹೆಸರಿನ ಕ್ರೂಸ್ ಹಡಗಿನಿಂದ ಮರಳಿದ್ದ ನಾಲ್ವರು ಕೆನಡಾ ನಾಗರಿಕರನ್ನು ಮೇ 10ರಂದು ಬ್ರಿಟಿಷ್ ಕೊಲಂಬಿಯಾಗೆ ತಲುಪಿದ ತಕ್ಷಣವೇ ಐಸೋಲೇಷನ್‌ಗೆ ಒಳಪಡಿಸಲಾಗಿತ್ತು. ಅವರಲ್ಲಿ ಒಬ್ಬರಿಗೆ ಹಂಟಾವೈರಸ್ ಸೋಂಕು ದೃಢಪಟ್ಟಿದ್ದು, ಮತ್ತೊಬ್ಬರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಉಳಿದ ಇಬ್ಬರ ಆರೋಗ್ಯ ಸ್ಥಿತಿಯನ್ನು ಆಸ್ಪತ್ರೆಯಲ್ಲಿ ನಿಗಾ…

Read More
error: Content is protected !!