ಮಂಗಳೂರು ಬಜಾಲ್‌ನಲ್ಲಿ ಸಂಭ್ರಮದ ಈದುಲ್ ಫಿತ್ರ್ ಆಚರಣೆ
ಮಂಗಳೂರು: ಬಜಾಲ್ ನಂತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಶುಕ್ರವಾರ ಸಂಭ್ರಮದಿಂದ ಈದುಲ್ ಫಿತ್ರ್ ಆಚರಿಸಲಾಯಿತು.ಈದ್ ಸಂದೇಶ ನೀಡಿ ಮಾತನಾಡಿದ ಖತೀಬ್ ಅಲ್ ಹಾಜ್ ಅಬ್ದುಲ್ ನಾಸೀರ್ ಸಾದಿ, ಬಡವರು, ಅನಾಥರು ಮತ್ತು ಅಸಹಾಯಕರಿಗೆ ನೆರವಾಗುವುದು ಪ್ರತಿಯೊಬ್ಬರ ಕರ್ತವ್ಯ ಆಗಿದೆ. ಈದ್ ಹಬ್ಬವು ಕೇವಲ ಸಂಭ್ರಮದ ಹಬ್ಬವಲ್ಲ, ಅದು ತ್ಯಾಗ, ಸಹಾನುಭೂತಿಯ ಸಂಕೇತವಾಗಿರಬೇಕು ಎಂದು ಹೇಳಿದರು. ನಾವು ಪರಸ್ಪರ ವೈಷಮ್ಯ, ಕಚ್ಛಾಟಗಳನ್ನು ಬದಿಗಿಟ್ಟು ಸೌಹಾರ್ದತೆಯಿಂದ ಜೀವನ ನಡೆಸಬೇಕು. ಅಲ್ಲಾಹು ನೀಡಿದ ಆರೋಗ್ಯ, ಸಂಪತ್ತು ಮತ್ತು ಸಮಯ ಎಂಬ ಅಮೂಲ್ಯ…