“ಬೋಳೂರಿನಲ್ಲಿ ದೈವನರ್ತನ ಮಾಡಿದ್ದು ಕ್ರೈಸ್ತ ಅಲ್ಲ ಹಿಂದೂ!” ಸ್ಪಷ್ಟನೆ ನೀಡಿದ ಕುಟುಂಬ , ಡಾ ರತಿ ಹೇಳಿಕೆಗೆ ಕ್ಷಮೆಯಾಚೆನೆಗೆ ಪಟ್ಟು

“ಕಳೆದ ಮಾರ್ಚ್ 13 ರಂದು ಸುದ್ದಿಗೋಷ್ಠಿ ನಡೆಸಿದ್ದ ಡಾ.ರತಿ ಅವರು ಕರಾವಳಿಯಲ್ಲಿ ದೈವ ನರ್ತನ ಸೇವೆಯನ್ನು ಪಂಬದ, ಪಾಣಾರ ಸುಮಾರು 16 ಜಾತಿಗಳವರು ಮಾಡಬೇಕು ಆದರೆ ಮಂಗಳೂರಿನ ಬೋಳೂರಿನಲ್ಲಿ ಜಾರಂದಾಯ ದೈವಸ್ಥಾನದ ಬಂಟ ದೈವಕ್ಕೆ ಕ್ರಿಶ್ಚಿಯನ್ ಮಹಿಳೆಗೆ ಹುಟ್ಟಿದ ಯುವಕನಿಂದ ನರ್ತನ ಸೇವೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಅವರ ಈ ಆರೋಪಕ್ಕೆ ಬೇಕಾದ ಜಾತಿ ಪ್ರಮಾಣಪತ್ರ ನಮ್ಮಲ್ಲಿದ್ದು ನರ್ತನ ಸೇವೆ ಮಾಡಿರುವ ಸುಶಾಂತ್ ಬಂಗೇರ ಒಬ್ಬ ಹಿಂದೂ ಆಗಿದ್ದು ಪಂಬದ ಸಮಾಜಕ್ಕೆ ಸೇರಿದವನು“ ಎಂದು ದೈವನರ್ತಕ ಸೂರಜ್…

Read More

ಹೆಣ್ಣುಮಕ್ಕಳ ವಿರುದ್ಧ ಭೇದಭಾವ ತೊಡೆದುಹಾಕಿ: ಕಾರ್ಯಾಗಾರದಲ್ಲಿ ಕರೆ -ಡಾ. ಶಿವಪ್ರಕಾಶ್

ಮಂಗಳೂರು: ಲಿಂಗಾನುಪಾತ ಹದಗೆಡಲು ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗು ಪ್ರಮುಖ ಕಾರಣವಾಗಿದ್ದು, ಈ ದುಷ್ಪ್ರಥೆಯನ್ನು ನಿರ್ಮೂಲನೆ ಮಾಡಬೇಕಾಗಿದೆ ಎಂದು ವೆನ್‍ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ. ಶಿವಪ್ರಕಾಶ್ ಅಭಿಪ್ರಾಯಪಟ್ಟರು. ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ–1994 ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹೆಣ್ಣು ಮಗು ಹುಟ್ಟಿದರೆ…

Read More

ಭೂ ವ್ಯವಹಾರ ತಕರಾರು: ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದು ಕೊಲೆ ಯತ್ನ

ಮಂಗಳೂರು: ಭೂ ವ್ಯವಹಾರದಲ್ಲಿ ಮೋಸ ಮಾಡಿದ ಸಿಟ್ಟಿನಿಂದ ಯುವಕನೋರ್ವ ಸ್ಕೂಟರ್‌ಗೆ ಕಾರು ಡಿಕ್ಕಿ ಹೊಡೆದು ವ್ಯಕ್ತಿಯನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಗಾಯಗೊಂಡವರನ್ನು ಮೋಹನ್ ದಾಸ್ ಶೆಟ್ಟಿ ಎಂದು ಗುರುತಿಸಲಾಗಿದೆ. ಆರೋಪಿ ಮೊಹಮ್ಮದ್ ಶರೀಫ್ ಆಗಿದ್ದು, ಈತನ ತಂದೆ ಮಹಮ್ಮದ್ ಇಕ್ಬಾಲ್ ಜೊತೆಗೆ ಮೋಹನ್ ದಾಸ್ ಶೆಟ್ಟಿ ಅವರ ನಡುವೆ ಭೂ ವ್ಯವಹಾರ ನಡೆದಿದೆ. ಸುರತ್ಕಲ್‌ನ ಖಾನ ಮತ್ತು ವಾಮಂಜೂರು ಪ್ರದೇಶಗಳಲ್ಲಿ ಸುಮಾರು 2…

Read More

ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಮಂಗಳೂರಲ್ಲಿ ಬಂಧನ

ಮಂಗಳೂರು: ನ್ಯಾಯಾಲಯಕ್ಕೆ ಹಾಜರಾಗದೇ ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತನನ್ನು Nawaz ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ 2014ರ ಅ.ಕ್ರ. 375/2014ರಡಿ ಐಪಿಸಿ ಕಲಂ 393, 398 ಹಾಗೂ 34ರಡಿ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯಕ್ಕೆ ಹಾಜರಾಗದೇ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಪತ್ತೆ ಹಚ್ಚಿದ ಉಳ್ಳಾಲ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡವು ದಸ್ತಗಿರಿ ನಡೆಸಿದೆ. ಬಂಧಿತನನ್ನು ಮಂಗಳೂರು ನಗರದ 7ನೇ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು…

Read More

ಲಂಚ ಪ್ರಕರಣದಲ್ಲಿ ಸಿಕ್ಕಿಬಿದ್ದ ಅಧಿಕಾರಿಣಿ – ಬಂಧನ ತಪ್ಪಿಸಲು ಆತ್ಮಹತ್ಯೆ ಯತ್ನ ನಾಟಕ

ಮಹಿಳಾ ಅಧಿಕಾರಿಯೊಬ್ಬರು ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಹುಣಸೂರು ತಾಲೂಕಿನ ಮುಳ್ಳೂರು ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.ಮುಳ್ಳೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸ್ವಾಮಿ ಎಂಬವರು ಗ್ರಾಮದಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದರು. ಅವರು ನಿಧನರಾದ ನಂತರ, ಅವರ ಪುತ್ರ ಮಹದೇವ್ ಅವರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲಾಗಿತ್ತು. ಸ್ವಾಮಿ ಅವರು ಸೇವೆ ಸಲ್ಲಿಸಿದ ಅವಧಿಗೆ ಸಂಬಂಧಿಸಿದಂತೆ ಸುಮಾರು ಎರಡು ವರ್ಷದ ಬಾಕಿ ಸಂಬಳ, ಅಂದಾಜು ₹4 ಲಕ್ಷ ರೂಪಾಯಿ ಬಿಡುಗಡೆ ಆಗಬೇಕಿತ್ತು. ಈ ಬಾಕಿ ಸಂಬಳ…

Read More

ಉಳ್ಳಾಲದಲ್ಲಿ DYFI ಘಟಕ ಸಮ್ಮೇಳನ – ಸಮಾಜ ಕಟ್ಟಲು ಒಗ್ಗಟ್ಟಿನ ಕರೆ

ಉಳ್ಳಾಲ:ಡಿವೈಎಫ್‌ ಐ ಕುತ್ತಾರು ಬಟ್ಟೆದಡಿ ಘಟಕದ ಆಶ್ರಯದಲ್ಲಿ ಡಿವೈಎಫ್‌ ಐ ಘಟಕ ಸಮ್ಮೇಳನ ಹಾಗೂ ಬಹಿರಂಗ ಸಭೆ ಕುತ್ತಾರಿನ ಕಾಂ. ಯೋಗೀಶ ಕುತ್ತಾರು ವೇದಿಕೆಯಲ್ಲಿ ನಡೆಯಿತು. ಬಹಿರಂಗ ಸಭೆ ಯನ್ನು ಉದ್ದೇಶಿಸಿ ಪತ್ರಕರ್ತ ನವೀನ್‌ ಸೂರಿಂಜೆ ಮಾತನಾಡಿ ಸಾಹಿತಿಗಳು, ಬರಹಗಾರರು, ಚಳುವಳಿಗಾರರು, ಪತ್ರಕರ್ತರು ಒಗ್ಗಟ್ಟಾಗಬೇಕಿದೆ. ಸರಕಾರದ ತಪ್ಪುಗಳನ್ನು ತಿಳಿಸುವ ಕಾರ್ಯವನ್ನು ಮಾಡುವ ಮೂಲಕ ಸಮಾಜವನ್ನು ಕಟ್ಟಬೇಕಿದೆ ಎಂದು ಪತ್ರಕರ್ತ ನವೀನ್‌ ಸೂರಿಂಜೆ ಹೇಳಿದರು. ಕಾರ್ಯಕ್ರಮದಲ್ಲಿ ಪತ್ರಕರ್ತ ನವೀನ್ ಸೂರಿಂಜೆ, DYFI ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಕಾರ್ಯದರ್ಶಿ…

Read More

ಹಾರ್ಮುಝ್ ಮೂಲಕ 46,000 ಎಂಟಿ LPG: ‘ಶಿವಾಲಿಕ್’ ಹಡಗು ಮುಂದ್ರಾ ಬಂದರಿಗೆ ಆಗಮನ

ಹಾರ್ಮುಝ್ ಜಲಸಂಧಿಯ ಮೂಲಕ ಒಟ್ಟು 46,000 ಎಂಟಿ ಪ್ರಮಾಣದೊಂದಿಗೆ ಎಲ್‌ಪಿಜಿ ಹಡಗು ಶಿವಾಲಿಕ್ ಗುಜರಾತ್‌ನ ಮುಂದ್ರಾ ಬಂದರಿನ ಎಲ್‌ಪಿಜಿ ಟರ್ಮಿನಲ್‌ಗೆ ಆಗಮಿಸಿದೆ. 46,000 ಎಂಟಿ ಪ್ರಮಾಣ ಎಲ್‌ಪಿಜಿಯನ್ನು ಹಡಗು ಹೊತ್ತಿದೆ. ಈ ಪೈಕಿ 20,000 ಎಂಟಿಯಷ್ಟು ಗ್ಯಾಸ್‌ನ್ನು ಭಾರತದ ಅತಿದೊಡ್ಡ ಖಾಸಗಿ ಮತ್ತು ವಾಣಿಜ್ಯ ಬಂದರು ಮುಂದ್ರಾದಲ್ಲಿ ಒಟ್ಟು ಇಳಿಸಲಾಗುತ್ತದೆ ಹಾಗೂ 26,000 ಎಂಟಿ ಗ್ಯಾಸ್‌ನ್ನು ನವ ಮಂಗಳೂರು ಬಂದರಿನ ಸಿಂಗಲ್ ಪಾಯಿಂಟ್ ಮೂರಿಂಗ್ ಸೌಲಭ್ಯದಲ್ಲಿ ಇಳಿಸಲಾಗುವುದು.ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಬುಕ್ ಮಾಡಿರುವ ಎಲ್‌ಪಿಜಿಯನ್ನು ಹಡಗು…

Read More

ರೋಟರಿ ವಂದನಾ ಪ್ರಶಸ್ತಿಗೆ ಹಸಿರು ಕ್ರಾಂತಿಕಾರ ” ಡಾ. ಆರ್. ಕೆ. ನಾಯರ್” ಆಯ್ಕೆ

ಮಂಗಳೂರು : ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರ್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 21 ರಂದು ಸಂಜೆ 07.30 ರಿಂದ ರಾಜ್ಯ ಮಟ್ಟದ “ವಂದನಾ ಪ್ರಶಸ್ತಿ – 2026″ ನಗರದ ಹೊಟೇಲ್ ಸೀ ವ್ಯೂವ್‌ನ ಸಭಾಂಗಣದಲ್ಲಿ ನಡೆಯಲಿದ್ದುಪ್ರಶಸ್ತಿಯನ್ನು ಈ ಬಾರಿ ಹಸಿರು ಕ್ರಾಂತಿಕಾರ ಡಾ. ಆರ್. ಕೆ. ನಾಯರ್ ಅವರಿಗೆ ನೀಡಲಾಗುವುದೆಂದು ರೋಟರಿ ಸಂಸ್ಥೆಯ ಅಧ್ಯಕ್ಷ, ರೋ। ಭಾಸ್ಕರ್ ರೈ ಕಟ್ಟಾ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ…

Read More

ಸೈಂಟ್ ಅಲೋಶಿಯಸ್ ವಿಶ್ವವಿದ್ಯಾಲಯದಲ್ಲಿ ‘ಇಂಡಸ್ಟ್ರಿ ಎಂಬೆಡೆಡ್ ಪ್ರೋಗ್ರಾಂ’ ಪದವಿ ಕೋರ್ಸ್ ಆರಂಭ

ಮಂಗಳೂರು: ಇಂದಿನ ವೇಗವಾಗಿ ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆಯಲ್ಲಿ ಕೇವಲ ಪದವಿ ಶಿಕ್ಷಣ ಮಾತ್ರವಲ್ಲದೆ ಪ್ರಾಯೋಗಿಕ ಜ್ಞಾನವೂ ವಿದ್ಯಾರ್ಥಿಗಳಿಗೆ ದೊರೆಯಬೇಕು ಎಂಬ ಉದ್ದೇಶದಿಂದ ಮಂಗಳೂರಿನ ಪ್ರತಿಷ್ಠಿತ ಸೈಂಟ್ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಸಿಯೆರಾ ಲರ್ನಿಂಗ್ ಅಕಾಡೆಮಿ ಸಹಯೋಗದೊಂದಿಗೆ ‘ಇಂಡಸ್ಟ್ರಿ ಎಂಬೆಡೆಡ್ ಪ್ರೋಗ್ರಾಂ’ (IEP) ಮಾದರಿಯ ನೂತನ ಪದವಿ ಕೋರ್ಸ್‌ಗಳನ್ನು ಆರಂಭಿಸಲು ಸಿದ್ಧತೆ ನಡೆಸಿದೆ. ಈ ಕೋರ್ಸ್‌ಗಳು ಜೂನ್ ತಿಂಗಳಿಂದ ಆರಂಭವಾಗಲಿವೆ ಎಂದು ಸಿಯೆರಾ ಲರ್ನಿಂಗ್ ಅಕಾಡೆಮಿ ಮುಖ್ಯಸ್ಥ ದೀಪಿತ್ ಕುಂದರ್ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ…

Read More

ಮಾರ್ಚ್ 20ರಂದು ತುಳು ಭವನದಲ್ಲಿ ‘ಮೂರನೇ ವಿದ್ಯಾರ್ಥಿ ತುಳು ಸಮ್ಮೇಳನ’

ಮಂಗಳೂರು: ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡುವ ಉದ್ದೇಶದಿಂದ ತುಳು ಪರಿಷತ್ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಜಂಟಿಯಾಗಿ ಮಾರ್ಚ್ 20ರಂದು ನಗರದ ತುಳು ಭವನದಲ್ಲಿ ‘ಮೂರನೇ ವಿದ್ಯಾರ್ಥಿ ತುಳು ಸಮ್ಮೇಳನ’ವನ್ನು ಆಯೋಜಿಸಿವೆ. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತುಳು ಪರಿಷತ್ ಅಧ್ಯಕ್ಷ ಶುಭೋದಯ್ ಆಳ್ವ, ಈ ಸಮ್ಮೇಳನ ಸಂಪೂರ್ಣವಾಗಿ ವಿದ್ಯಾರ್ಥಿಗಳನ್ನು ಕೇಂದ್ರವಾಗಿರಿಸಿಕೊಂಡಿದ್ದು, ಕಾರ್ಯಕ್ರಮದ ವಿವಿಧ ಭಾಗಗಳನ್ನು ವಿದ್ಯಾರ್ಥಿಗಳೇ ಮುನ್ನಡೆಸಲಿದ್ದಾರೆ ಎಂದು ಹೇಳಿದರು. ಈ ಬಾರಿ ಪ್ರತಿಭಾವಂತ ವಿದ್ಯಾರ್ಥಿಗಳೇ ಉದ್ಘಾಟಕರಾಗಿ…

Read More
error: Content is protected !!