ಮೇ 22ಕ್ಕೆ ತೆರೆಕಾಣಲಿದೆ ‘ಗಜಾನನ ಕ್ರಿಕೆಟರ್ಸ್’ ತುಳು ಸಿನಿಮಾ. ಕ್ರಿಕೆಟ್ ಹಿನ್ನೆಲೆ ಕಥೆಗೆ ಪ್ರೀಮಿಯರ್ ಶೋದಲ್ಲೇ ಭರ್ಜರಿ ಮೆಚ್ಚುಗೆ
ಪುತ್ತೂರು: ಪ್ರಜ್ವಲ್ ಫಿಲಂಸ್ ಲಾಂಛನದಲ್ಲಿ ತಯಾರಾಗುತ್ತಿರುವ ಪ್ರಜ್ವಲ್ ಶೆಟ್ಟಿ ನಿರ್ಮಾಣ ಹಾಗೂ ಕೀರ್ತನ್ ಭಂಡಾರಿ ನಿರ್ದೇಶನದ ‘ಗಜಾನನ ಕ್ರಿಕೆಟರ್ಸ್ (ಜಂತೊಟ್ಟು ಸಿನ್ಸ್ 1983)’ ತುಳು ಚಲನಚಿತ್ರವು ಮೇ.22ರಂದು ತೆರೆಕಾಣಲಿದೆ ಎಂದು ಚಿತ್ರದ ತಂಡ ಪುತ್ತೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ. ಚಿತ್ರದ ನಾಯಕ ನಟ ವಿನೀತ್ ಕುಮಾರ್ ಅವರು ಮಾತನಾಡಿ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಗೊಂಡಿದ್ದು, ಜೊತೆಗೆ ಹಲವು ಕಡೆ ಪ್ರೀಮಿಯರ್ ಶೋನಲ್ಲಿ ಉತ್ತಮ ಮೆಚ್ಚುಗೆ ಸಿಕ್ಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ತುಳುನಾಡು ಚಿತ್ರರಂಗಕ್ಕೆ ಹೊಸ…
