ಮಕ್ಕಳಿಗೆ ರಾಜ್ಯ ಮಟ್ಟದ ಬೇಸಿಗೆ ಸಾಹಿತ್ಯ ಶಿಬಿರ: ಏಪ್ರಿಲ್ 29ರಿಂದ ತುಮಕೂರಿನಲ್ಲಿ: ದಿನಾಂಕ 20-4-2026 ಪ್ರತಿನಿಧಿಗಳ ಹೆಸರು ನೋಂದಣಿಗೆ ಕೊನೆಯ ದಿನ

ಕಾಸರಗೋಡು: ಮಕ್ಕಳಲ್ಲಿ ಸಾಹಿತ್ಯ, ಸಂಸ್ಕೃತಿ ಮತ್ತು ಸೃಜನಾತ್ಮಕ ಚಿಂತನೆ ಬೆಳೆಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ರಾಜ್ಯ ಮಟ್ಟದ ಬೇಸಿಗೆ ಸಾಹಿತ್ಯ ಶಿಬಿರವನ್ನು ಆಯೋಜಿಸಿದೆ. ಚನ್ನರಾಯಪಟ್ಟಣದ ಪರಿಸರ ತಜ್ಞ ಸಿ.ಎನ್. ಅಶೋಕ ಅವರ ನೇತೃತ್ವದಲ್ಲಿ ಕಳೆದ 15 ವರ್ಷಗಳಿಂದ ಮಕ್ಕಳಿಗಾಗಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುತ್ತಿರುವ ಪರಿಷತ್ತು, ಈ ಬಾರಿ ತುಮಕೂರು ಜಿಲ್ಲೆಯ ಕೊರಟಗೆರೆ ಸಮೀಪದ ಸಿದ್ದರಬೆಟ್ಟದಲ್ಲಿ ಏಪ್ರಿಲ್ 29ರಿಂದ ಮೇ 2ರವರೆಗೆ ನಾಲ್ಕು ದಿನಗಳ ಶಿಬಿರವನ್ನು ನಡೆಸಲಿದೆ. ಶಿಬಿರದಲ್ಲಿ…

Read More

ನಂತೂರು ಅಪಘಾತ: ಹಿರಿಯ ಛಾಯಾಗ್ರಾಹಕ ಕೆ. ಮೋಹನ್ ಚಂದರ್ ಮೃತ್ಯು

ಬೈಕ್‌ ಸವಾರನ ಧಾವಂತಕ್ಕೆ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಹಿರಿಯೆ ಛಾಯಾಗ್ರಾಹಕ ಸಾವಿಗೀಡಾಗಿದ್ದಾರೆ. ಕಳೆದ ಶನಿವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 66ರ ನಂತೂರು ತಾರಾಯಿತೋಟ ಎಂಬಲ್ಲಿ ಓವರ್ ಟೇಕ್ ಮಾಡುವ ಭರದಲ್ಲಿ ಸ್ಕೂಟರ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರ ರಸ್ತೆಗೆಸೆಯಲ್ಪಟ್ಟು ಸಾವನ್ನಪ್ಪಿದ್ದ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ಅಮಾಯಕ ಸ್ಕೂಟರ್ ಸವಾರ, ಹಿರಿಯ ಛಾಯಾಗ್ರಾಹಕ ಕೆ.ಮೋಹನ್ ಚಂದರ್ (64) ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಧರ್ಮಸ್ಥಳದ ಕಾರ್ಯತಡ್ಕ ನಿವಾಸಿ ಗೋಪಾಲಕೃಷ್ಣ(27) ಎಂಬ ಯುವಕ ಶನಿವಾರ ರಾತ್ರಿ ಸುಮಾರು…

Read More

ಎ.16ರಿಂದ ಬನ್ನಂಜೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಭಂದ ಬ್ರಹ್ಮಕಲಶೋತ್ಸವ ವೈಭವ

ಉಡುಪಿ: ಇತಿಹಾಸ ಪ್ರಸಿದ್ಧ ಬನ್ನಂಜೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ‘ಅಷ್ಟಭಂದ ಬ್ರಹ್ಮಕಲಶೋತ್ಸವ ವೈಭವ-2026’ ಎ.16ರಿಂದ ಎ.20ರವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಬಿ.ಮಾಧವ ಪೂಜಾರಿ ತಿಳಿಸಿದ್ದಾರೆ.ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎ.20ರಂದು ಬೆಳಗ್ಗೆ 9.15ಕ್ಕೆ ಶ್ರೀಮಹಾಲಿಂಗೇಶ್ವರ ದೇವರ ಪರಿಕಲಶ ಅಭಿಷೇಕ, ಬ್ರಹ್ಮಕಲಶಾಭಿಷೇಕ, ಕಲಾನ್ಯಾಸ, ಮಹಾಪೂಜೆ, ಪಲ್ಲಪೂಜೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾ ಅನ್ನಸಂತರ್ಪಣೆ ಮತ್ತು ಸಂಜೆ 6ಗಂಟೆಗೆ ಉತ್ಸವ ಬಲಿ, ಮಹಾರಂಗ ಪೂಜೆ, ಭೂತ ಬಲಿ ನಡೆಯಲಿದೆ ಎಂದರು. ಎ.15ರಂದು ಮಧ್ಯಾಹ್ನ 3ಗಂಟೆಗೆ…

Read More

ಲಕ್ಷ್ಮೀ ಮೆಮೋರಿಯಲ್ ನರ್ಸಿಂಗ್ ಕಾಲೇಜಿನಲ್ಲಿ ಪದವಿ ಪ್ರದಾನ, ವಾರ್ಷಿಕೋತ್ಸವ ಸಂಭ್ರಮ

ಸೇವೆಯ ಪಥಕ್ಕೆ ಹೊಸ ಚೈತನ್ಯ: ವಿಜೃಂಭಣೆಯಿಂದ ಕಂಗೊಳಿಸಿದ ಪದವಿ ಪ್ರಧಾನ ಹಾಗೂ ವಾರ್ಷಿಕೋತ್ಸವ ಸಮಾರಂಭಕುಂಟಿಕಾನದ ಎ.ಜೆ. ಆಡಿಟೋರಿಯಂನಲ್ಲಿ ಏಪ್ರಿಲ್ 13, ಸೋಮವಾರದಂದು ಲಕ್ಷ್ಮೀ ಮೆಮೋರಿಯಲ್ ಕಾಲೇಜ್ ಆಫ್ ನರ್ಸಿಂಗ್‌ನ ಪದವಿ ಪ್ರದಾನ ಹಾಗೂ ವಾರ್ಷಿಕೋತ್ಸವ ಸಮಾರಂಭವು ಅತ್ಯಂತ ಸಂಭ್ರಮದಿಂದ ಜರುಗಿತು. ಭಕ್ತಿಪೂರ್ವಕ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಸಮಾರಂಭಕ್ಕೆ ಉಪ ಪ್ರಾಂಶುಪಾಲರಾದ ಡಾ. ತೆರೇಸಾ ಲಿಯೋನಿಲ್ಡಾ ಮೆಂಡೋನ್ಸಾ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಪ್ರಾಂಶುಪಾಲರಾದ ಡಾ. ಲರಿಸ್ಸಾ ಮಾರ್ಥಾ ಸಾಮ್ಸ್ ಅವರು ಕಾಲೇಜಿನ ಯಶೋಗಾಥೆಯನ್ನೊಳಗೊಂಡ ವಾರ್ಷಿಕ ವರದಿಯನ್ನು ಮಂಡಿಸುವ ಮೂಲಕ…

Read More

ಅಂಗನವಾಡಿ ಕಾರ್ಯಕರ್ತೆಯರ ಜಿಲ್ಲಾ ಸಮಾವೇಶ ಏಪ್ರಿಲ್ 20ರಂದು

ದಕ್ಷಿಣ ಕನ್ನಡ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ವತಿಯಿಂದ ಐಸಿಡಿಎಸ್ 50ರ ಸುವರ್ಣ ಸಂಭ್ರಮ ಮತ್ತು ಜಿಲ್ಲಾ ಸಮಾವೇಶ ಎ.20ರಂದು ಬೆಳಗ್ಗೆ 9 ರಿಂದ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷೆ ತಾರಾ ಬಲ್ಲಾಳ್ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಾರ್ಯಕ್ರಮವನ್ನು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಜಿಲ್ಲಾ…

Read More

ಕನಿಷ್ಠ ವೇತನದ ಪುನರ್ ವಿಮರ್ಶೆ ಹಾಗೂ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಒತ್ತಾಯಿಸಿ ಸಹಿ ಸಂಗ್ರಹ ಚಳುವಳಿ

ಕನಿಷ್ಠ ವೇತನ ಪುನರ್ ವಿಮರ್ಶೆಗೆ ಆಗ್ರಹಿಸಿ ಹಾಗೂ ಕಾರ್ಮಿಕರ ಮೂಲಭೂತ ಹಕ್ಕುಗಳ ಸಂರಕ್ಷಿಸಲು ಒತ್ತಾಯಿಸಿ ನಗರದಲ್ಲಿಂದು ಸಾರ್ವಜನಿಕರ ಮಧ್ಯೆ ಸಹಿ ಸಂಗ್ರಹ ಚಳುವಳಿಯನ್ನು ನಡೆಸಲಾಯಿತು.ಕಾರ್ಮಿಕ ವರ್ಗದ ಆಶಾಕಿರಣವಾದ ಡಾ.ಬಿ ಆರ್ ಅಂಬೇಡ್ಕರ್ ರವರ ಜನ್ಮದಿನಾರಣೆಯ ದಿನದಂದು ಕರ್ನಾಟಕ ರಾಜ್ಯಾದ್ಯಂತ ಸಹಿ ಸಂಗ್ರಹ ಚಳುವಳಿಯನ್ನು ನಡೆಸಬೇಕೆಂಬ CITU ಕರೆಯ ಮೇರೆಗೆ CITU ದ.ಕ.ಜಿಲ್ಲಾ ಸಮಿತಿಯ ನೇತ್ರತ್ವದಲ್ಲಿ ಈ ಕಾರ್ಯಕ್ರಮವನ್ನು‌ ಆಯೋಜಿಸಲಾಯಿತು. ಸಹಿ ಸಂಗ್ರಹ ಚಳುವಳಿಯನ್ನು ಉದ್ಘಾಟಿಸಿದ ದ.ಕ.ಜಿಲ್ಲೆಯ ಕಾರ್ಮಿಕ ಚಳುವಳಿಯ ಹಿರಿಯ ನೇತಾರರಾದ ಜೆ ಬಾಲಕೃಷ್ಣ ಶೆಟ್ಟಿಯವರು ಮಾತನಾಡಿ,…

Read More

ಮೈಸೂರಿನ ವ್ಯಕ್ತಿಯೊಬ್ಬರನ್ನು ಮಂಗಳೂರಿನ ಮಂಗಳಮುಖಿಯರು ಅಪಹರಣಗೈದ ಪ್ರಕರಣಕ್ಕೆ ಸಂಬಂಧಿಸಿ ಕೂಲಂಕುಷ ತನಿಖೆ: ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಶಿಕ್ಷೆ

ಮಂಗಳೂರು: ಮೈಸೂರಿನ ವ್ಯಕ್ತಿಯೊಬ್ಬರನ್ನು ಮಂಗಳೂರಿನ ಮಂಗಳಮುಖಿಯರು ಅಪಹರಣಗೈದ ಪ್ರಕರಣಕ್ಕೆ ಸಂಬಂಧಿಸಿ ಕೂಲಂಕುಷ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಶಿಕ್ಷೆ ವಿಧಿಸಬೇಕೆಂದು ನವಸಹಜ ಸಮುದಾಯ ಸಂಘಟನೆ ಆಗ್ರಹಿಸಿದೆ. ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷೆ ನಿಖಿಲಾ, ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯವಾದ ಮೈಸೂರಿನ ವ್ಯಕ್ತಿಯನ್ನು ಮಂಗಳೂರಿನ ಕೆಲವರು ಅಪಹರಿಸಿದ್ದು, ಆತನಿಗೆ ಜಿಲ್ಲೆಯಲ್ಲಿ ಆಧಾರ್ ಕಾರ್ಡ್ ಹಾಗೂ ಟ್ರಾನ್ಸ್‌ಜೆಂಡರ್ ಗುರುತಿನ ಚೀಟಿಯನ್ನು ಮಹಿಳಾ ಅಭಿವೃದ್ಧಿ ನಿಗಮಕ್ಕೆ ಸುಳ್ಳು ದಾಖಲೆಗಳನ್ನು ನೀಡಿ ಮಾಡಿಸಿರುವುದು ಗಂಭೀರ ಅಪರಾಧವಾಗಿದೆ ಎಂದು…

Read More

ಬಿಜೆಪಿ ಹಿರಿಯ ನಾಯಕ ರಾಮಚಂದ್ರ ಬೈಕಂಪಾಡಿ ನಿಧನ

ಮಂಗಳೂರು: ಬಿಜೆಪಿಯ ಹಿರಿಯ ನಾಯಕ ಹಾಗೂ ಮೊಗವೀರ ಸಮುದಾಯದ ಮುಖಂಡರಾಗಿದ್ದ ರಾಮಚಂದ್ರ ಬೈಕಂಪಾಡಿ (75) ಅವರು ಮಂಗಳವಾರ ನಿಧನರಾಗಿದ್ದಾರೆ. ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರು ಎಳೆದಿದ್ದಾರೆ. ಮೊಗವೀರ ಸಮುದಾಯದಲ್ಲಿ ಹಿರಿಯ ರಾಜಕೀಯ ನಾಯಕರಾಗಿ ಗುರುತಿಸಿಕೊಂಡಿದ್ದ ಅವರು, ಮೀನುಗಾರರಿಗೆ ಸಮಸ್ಯೆ ಎದುರಾದಾಗ ತಕ್ಷಣ ಸ್ಪಂದಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳುತ್ತಿದ್ದರು. ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಾಮಾಜಿಕ ಕಳಕಳಿಯುಳ್ಳ ನಾಯಕರೆಂದು ಹೆಸರು ಗಳಿಸಿದ್ದರು. ಮಂಗಳೂರಿನ ಪ್ರಮುಖ ರಂಗಕರ್ಮಿ, ಸಾಹಿತಿ ಹಾಗೂ ಸಾಮಾಜಿಕ…

Read More

ಮಹಮ್ಮದ್ ನಂದರಬೆಟ್ಟು ಅಗಲಿಕೆ: ಪಂಚಾಯತ್ ರಾಜ್ ಜಿಲ್ಲಾಧ್ಯಕ್ಷ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಕಂಬನಿ

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರು ಮಹಮ್ಮದ್ ನಂದರಬೆಟ್ಟು ಅವರ ನಿಧನಕ್ಕೆ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಅಗಲಿಕೆ ಸಮಾಜಕ್ಕೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಅಪಾರ ನಷ್ಟ ಉಂಟುಮಾಡಿದೆ ಎಂದು ತಿಳಿಸಿದ್ದಾರೆ. ಮೂರು ಬಾರಿ ಬಂಟ್ವಾಳ ಪುರಸಭೆಗೆ ಆಯ್ಕೆಯಾಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಮಹಮ್ಮದ್ ನಂದರಬೆಟ್ಟು ಅವರು, ತಮ್ಮ ಕಾರ್ಯಕಾಲದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದರು. ವಾರ್ಡಿನ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಿದ ಅವರು, ಒಂದು…

Read More

ಎಫ್‌ಎಂಸಿಐ ಪದವಿ ಪ್ರದಾನ ಸಮಾರಂಭ ಎ.16ರಿಂದ 18ರವರೆಗೆ — 856 ಪದವೀಧರರಿಗೆ ಪದವಿ

ಫಾದರ್ ಮುಲ್ಲರ್ ಚಾರಿಟೇಬಲ್ ಶಿಕ್ಷಣ ಸಂಸ್ಥೆಗಳ (ಎಫ್‌ಎಂಸಿಐ) ಪದವಿ ಪ್ರದಾನ ಸಮಾರಂಭ ಎ.16ರಿಂದ 18ರ ತನಕ ನಡೆಯಲಿದ್ದು, ಆರೋಗ್ಯ ಕ್ಷೇತ್ರದ 856 ಪದವೀಧರರರು ಆರೋಗ್ಯ ಸೇವೆಯ ಪ್ರತಿಜ್ಞೆ ಸ್ವೀಕರಿಸಲಿದ್ದಾರೆ ಎಂದು ಎಫ್‌ಎಂಸಿಐ ನಿರ್ದೇಶಕ ಫಾದರ್ ಫಾಸ್ಟಿನ್ ಲೂಕಾಸ್ ಲೋಬೊ ತಿಳಿಸಿದರು . ಅವರು ಸಂಸ್ಥೆಯ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮಗಳ ಬಗ್ಗೆ ವಿವರಣೆಯನ್ನು ನೀಡಿದರು . ಪದವಿ ಪ್ರದಾನ ಸಮಾರಂಭದಲ್ಲಿ ಸಾಂಪ್ರದಾಯಿಕ ಆಕ್ಸ್‌ಫರ್ಡ್ ಕ್ಯಾಪ್…

Read More
error: Content is protected !!