ಕೇಂದ್ರ ಟೀಕೆಯಲ್ಲೇ 3 ವರ್ಷ ವ್ಯರ್ಥ — ಪ್ರಧಾನಿ ನಿರ್ಧಾರಕ್ಕೆ ವಿಜಯೇಂದ್ರ ಅಭಿನಂದನೆ
ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರ ನಿರ್ಧಾರದಿಂದ ನಮ್ಮ ದೇಶದಲ್ಲಿ ಪೆಟ್ರೋಲ್- ಡೀಸೆಲ್ ಮೇಲೆ ಅಬಕಾರಿ ಸುಂಕ 10 ರೂ. ಕಡಿಮೆ ಮಾಡಿದ್ದಾರೆ. ಜನರ ಮೇಲೆ ಬೀಳುವ ಹೊರೆಯನ್ನು ಕೇಂದ್ರ ಸರಕಾರವೇ ಜವಾಬ್ದಾರಿ ತೆಗೆದುಕೊಳ್ಳುವ ಮೂಲಕ ನರೇಂದ್ರ ಮೋದಿಜೀ ಅವರು ದೇಶದ ಸಾಮಾನ್ಯ ಜನರ ಪರವಾಗಿ ದೃಢನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಯುದ್ಧದ ಈ ಸಂದರ್ಭದಲ್ಲಿ ರಾಜ್ಯ- ದೇಶದ ಜನತೆ…
