ಉಡುಪಿ: ಹೆಮ್ಮಾಡಿ-ಕುಂದಾಪುರ ರಾಷ್ಟ್ರೀಯ ಹೆದ್ದಾರಿಯ ನಡುವೆ ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆಯೇ ನಾನಾ ಭಂಗಿಯಲ್ಲಿ ‘ಸರ್ಕಸ್’ ಮಾಡಿದ್ದ ಪುಂಡನ ವಿಡಿಯೋ ವೈರಲ್ ಆಗಿದ್ದು, ಇದೀಗ ವಿಡಿಯೋ ಪರಿಶೀಲಿಸಿದ ಕುಂದಾಪುರ ಸಂಚಾರ ಠಾಣೆ ಪೊಲೀಸರು ಸವಾರನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮಾ.20ರಂದು ಸ್ಕೂಟರ್ ಅನ್ನು ಸವಾರ ವೀಲಿಂಗ್ ಮಾಡುತ್ತಾ, ಹೆಲ್ಮಟ್ ಧರಿಸದೇ, ಸಂಚಾರ ನಿಯಮ ಉಲ್ಲಂಘಿಸಿ, ಸಾರ್ವಜನಿಕ ರಸ್ತೆಯಲ್ಲಿ ದುಡುಕಿನಿಂದ ಮತ್ತು ಅಪಾಯಕಾರಿ ರೀತಿಯಲ್ಲಿ ವಾಹನ ಚಲಾಯಿಸಿ ಮಾನವ ಜೀವಕ್ಕೆ ಹಾಗೂ ಇತರರ ಸ್ವತ್ತಿಗೆ ಹಾನಿ ಉಂಟು ಮಾಡುವ ರೀತಿಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ನಾನಾ ರೀತಿಯ ಭಂಗಿಗಳಲ್ಲಿ ಸಂಚರಿಸುತ್ತಿದ್ದ. ಈ ಬಗ್ಗೆ ಸಂಚಾರ ಠಾಣಾ ಎಸ್ ಐ ಸುಧಾ ಪ್ರಭು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.