ಬಂಟ್ವಾಳ: ಆತ್ಮಿ ಶೆಟ್ಟಿಯ ಭರತನಾಟ್ಯ ರಂಗಪ್ರವೇಶ ಏಪ್ರಿಲ್ 4ರಂದು

ಬಂಟ್ವಾಳ: ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ (ರಿ), ಕಲ್ಲಡ್ಕದ ಭರತನಾಟ್ಯ ವಿದ್ಯಾರ್ಥಿನಿ ಕುಮಾರಿ ಆತ್ಮಿ ಶೆಟ್ಟಿ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ಏಪ್ರಿಲ್ 4ರಂದು ಸಂಜೆ ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆಯಲಿದೆ ಎಂದು ನೃತ್ಯಗುರು ವಿದುಷಿ ವಿದ್ಯಾ ಮನೋಜ್ ತಿಳಿಸಿದ್ದಾರೆ. ಬಿ.ಸಿ.ರೋಡಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆತ್ಮಿ ಶೆಟ್ಟಿ ಕಳೆದ 12 ವರ್ಷಗಳಿಂದ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದು, ಪ್ರಸ್ತುತ ವಿದ್ವತ್ ಅಂತಿಮ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಿದರು. ವಿವಿಧ ಪ್ರತಿಷ್ಠಿತ ವೇದಿಕೆಗಳಲ್ಲಿ ನೃತ್ಯ…

Read More

ಸಂದೇಹಾಸ್ಪದ ಸಾವು: ಸುದೀಪ್ ರೈ ಪ್ರಕರಣದಲ್ಲಿ ವಿಷಪ್ರಾಶನ ಆರೋಪ – ನ್ಯಾಯಕ್ಕಾಗಿ ಕುಟುಂಬದ ಆಗ್ರಹ

ಮಂಗಳೂರು/ನೆಲ್ಯಾಡಿ: ನೆಲ್ಯಾಡಿ ನಿವಾಸಿ ಸುದೀಪ್ ರೈ (31) ಅವರ ಸಂದೇಹಾಸ್ಪದ ಸಾವಿಗೆ ಸಂಬಂಧಿಸಿ ಕುಟುಂಬಸ್ಥರು ವಿಷಪ್ರಾಶನದ ಆರೋಪ ಮಾಡಿದ್ದು, ಪ್ರಕರಣದ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ಮಾತನಾಡಿದ ಮೃತರ ತಂದೆ ಬಿ. ದಾಮೋದರ, ಸುದೀಪ್ ರೈ ಅವರು ಮಾರ್ಚ್ 29ರಂದು ಮುಂಜಾನೆ ಮಂಗಳೂರಿನ ಕೊಡಿಯಾಲ್ ಬೈಲ್‌ನ ಯೆನೆಪೋಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ವೈದ್ಯರ ಪ್ರಾಥಮಿಕ ಅಭಿಪ್ರಾಯದಂತೆ, ಆಹಾರದಲ್ಲಿ ವಿಷ ಮಿಶ್ರಣವಾಗಿರುವ ಸಾಧ್ಯತೆ ಇರುವುದಾಗಿ ಸೂಚಿಸಲಾಗಿದೆ. ಮರಣೋತ್ತರ ಪರೀಕ್ಷೆ ದೇರಳಕಟ್ಟೆಯ ಕೆ.ಎಸ್….

Read More

ಸೂರಿಕುಮೇರು: ಅತೀವೇಗದ ಚಾಲನೆ – ಖಾಸಗಿ ಬಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪಿಕಪ್

ಮಾಣಿ: ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿ ಮಂಗಳವಾರ ಬೆಳಿಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಖಾಸಗಿ ಬಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪಿಕಪ್ ವಾಹನದ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಘಟನೆಯಲ್ಲಿ ಪಿಕಪ್ ಚಾಲಕ ಪ್ರಾಣಾಪಾಯದಿಂದ ಪಾರಾಗಿರುವುದು ತಿಳಿದುಬಂದಿದೆ. ಮಾಹಿತಿಯಂತೆ, ಅತೀವೇಗದಲ್ಲಿ ಸಂಚರಿಸುತ್ತಿದ್ದ ಪಿಕಪ್ ವಾಹನವು ನಿಯಂತ್ರಣ ಕಳೆದುಕೊಂಡು ಮುಂದೆ ಸಾಗುತ್ತಿದ್ದ ಖಾಸಗಿ ಬಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ವಾಹನದ ಮುಂಭಾಗಕ್ಕೆ ಭಾರೀ ಹಾನಿಯಾಗಿದೆ. ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿರುವುದರಿಂದ, ವಾಹನಗಳು ಹೆಚ್ಚುವರಿ…

Read More

ಗೇರುಕಟ್ಟೆ: ಸರ್ಕಾರಿ ಬಸ್ ಬಾಗಿಲು ತೆರೆದು ರಸ್ತೆಗೆ ಎಸೆಯಲ್ಪಟ್ಟ ವಿದ್ಯಾರ್ಥಿನಿಯರು

ದಕ್ಷಿಣ ಕನ್ನಡ: ಗೇರುಕಟ್ಟೆ ಸಮೀಪದ ರೇಷ್ಮೆ ರೋಡ್‌ನಲ್ಲಿ ಇಂದು ಸಂಭವಿಸಿದ ಅಪಘಾತದಲ್ಲಿ, ಸಂಚರಿಸುತ್ತಿದ್ದ ಸರ್ಕಾರಿ ಬಸ್‌ನ ಬಾಗಿಲು ಆಕಸ್ಮಿಕವಾಗಿ ತೆರೆದ ಪರಿಣಾಮ ಇಬ್ಬರು ವಿದ್ಯಾರ್ಥಿನಿಯರು ರಸ್ತೆಗಪ್ಪಳಿಸಿ ಗಾಯಗೊಂಡಿದ್ದಾರೆ. ಗೇರುಕಟ್ಟೆಯಿಂದ ಬೆಳ್ತಂಗಡಿ ಕಡೆಗೆ ತೆರಳುತ್ತಿದ್ದ ಬಸ್‌ನಲ್ಲಿ ಈ ಘಟನೆ ನಡೆದಿದೆ. ಒಂದೇ ಮನೆಯ ಇಬ್ಬರು ವಿದ್ಯಾರ್ಥಿನಿಯರು ಬಸ್‌ನಿಂದ ಬಿದ್ದು ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬಳು ಬೆಳ್ತಂಗಡಿಯ ಖಾಸಗಿ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಮತ್ತೊಬ್ಬಳು ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಯಾಗಿದ್ದು ಸಾರ್ವಜನಿಕ ಪರೀಕ್ಷೆ ಬರೆಯಲು ತೆರಳುತ್ತಿದ್ದಳು ಎಂದು ತಿಳಿದುಬಂದಿದೆ. ಬಸ್‌ನಲ್ಲಿ ಅಧಿಕ ಸಂಖ್ಯೆಯ ಪ್ರಯಾಣಿಕರು…

Read More

ಕೊರಿಂಗಿಲ ಮದ್ರಸದಲ್ಲಿ ಮಿಹ್ರಜಾನುಲ್ ಬಿದಾಯ ಮದ್ರಸ ಪ್ರಾರಂಭೋತ್ಸವ

ಪುತ್ತೂರು: ಕೊರಿಂಗಿಲದಲ್ಲಿರುವ ಮಿಸ್ಬಾಹುಲ್ ಹುದಾ ಮದ್ರಸದಲ್ಲಿ 2026ನೇ ಸಾಲಿನ ಮದ್ರಸ ಅಧ್ಯಯನ ಪ್ರಾರಂಭೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಪ್ರಥಮ ತರಗತಿಗೆ ಸೇರ್ಪಡೆಗೊಂಡ ಹೊಸ ವಿದ್ಯಾರ್ಥಿಗಳನ್ನು ಬಲೂನ್ ಹಾಗೂ ಹೂಗುಚ್ಚ ನೀಡಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ಕಾರ್ಯಕ್ರಮದ ವಿಶೇಷವಾಗಿ, ಧಾರ್ಮಿಕ ಶಿಕ್ಷಣದಲ್ಲಿ ಸ್ವಫಾಹಿ ಬಿರುದು ಪಡೆದ ಕೀಲಂಪಾಡಿ ನಿಜಾರ್ ಸ್ವಫಾಹಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಖತೀಬರಾದ ಅಯ್ಯೂಬ್ ವಹಬಿ ಉಸ್ತಾದರು ಮದ್ರಸ ಶಿಕ್ಷಣದ ಅಗತ್ಯತೆ ಮತ್ತು ಮಹತ್ವವನ್ನು ವಿವರಿಸಿ, ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಸಹ ಅಧ್ಯಾಪಕರಾದ…

Read More

ಹಜ್ ಭವನ ನಿರ್ಮಾಣ ವಿಳಂಬಕ್ಕೆ ಎಸ್‌ಡಿಪಿಐ ಆಕ್ರೋಶ

ಹಜ್ ಭವನಕ್ಕೆ ಜಾಗವಿದ್ದರೂ, ಅನುದಾನವೂ ಲಭ್ಯವಿದ್ದರೂ ಕಾಮಗಾರಿ ವಿಳಂಬವಾಗುತ್ತಿರುವುದೇಕೆ ಎಂದು ಪ್ರಶ್ನಿಸಿರುವ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ದಕ್ಷಿಣ ಕನ್ನಡ ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್, ಮಂಗಳೂರಿನಲ್ಲಿ ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಹಜ್ ಭವನವನ್ನು ಕೂಡಲೇ ನಿರ್ಮಿಸಬೇಕು ಹಾಗೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಜ್ ಯಾತ್ರೆಗೆ ನೇರ ವಿಮಾನ ಸೌಲಭ್ಯವನ್ನು ಮರುಾರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ. ನಗರದ ಪಕ್ಷದ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಹಜ್ ಯಾತ್ರಿಕರು ಎದುರಿಸುತ್ತಿರುವ ಸಮಸ್ಯೆಗಳತ್ತ ಸರ್ಕಾರದ…

Read More

ಭಗವಾನ್ ಶ್ರೀ ಮಹಾವೀರರ 2625ನೇ ಜನ್ಮ ಕಲ್ಯಾಣೋತ್ಸವ ಭಕ್ತಿಭಾವದಿಂದ ಆಚರಣೆ

ಮಂಗಳೂರು:ಜೈನ ಧರ್ಮದ ಮಹಾನ್ ತೀರ್ಥಂಕರರಾದ ಭಗವಾನ್ ಶ್ರೀ ಮಹಾವೀರರ 2625ನೇ ಜನ್ಮ ಕಲ್ಯಾಣೋತ್ಸವವನ್ನು ಮಂಗಳೂರಿನ ಬಜಿಲಕೇರಿ ಶ್ರೀ ಆದೀಶ್ವರ ಸ್ವಾಮಿ ಜೈನ ಬಸದಿಯಲ್ಲಿ ಭಕ್ತಿಭಾವದಿಂದ ಆಚರಿಸಲಾಯಿತು.ನಗರದ ಬಸ್ತಿ ಹಿತ್ಲು ಪ್ರದೇಶದಲ್ಲಿರುವ ಬಸದಿ ಮಂದಿರದಲ್ಲಿ ಸೋಮವಾರ ನಡೆದ ಈ ಕಾರ್ಯಕ್ರಮದಲ್ಲಿ ಬಹು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಬಸದಿಯಲ್ಲಿ ಮುಂಜಾನೆಯಿಂದಲೇ ಧಾರ್ಮಿಕ ಕಾರ್ಯಕ್ರಮ ಆಚರಣೆಯ ಭಾಗವಾಗಿ ವಿಶೇಷ ಪೂಜೆ, ಅಭಿಷೇಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಶಾಂತಿನಾಥ ಸ್ವಾಮಿಗೆ ಕ್ಷೀರಾಭಿಷೇಕ, ಅಗ್ರೋದಕ ಮೆರವಣಿಗೆ ಭಗವಾನ್ ಶ್ರೀ ಮಹಾವೀರ ಸ್ವಾಮಿಯ ಜನ್ಮ ಕಲ್ಯಾಣ,…

Read More

ಕೃಷಿ ಹೊಂಡದಲ್ಲಿ ಈಜಲು ಹೋದ ನಾಲ್ವರು ಮಕ್ಕಳು ದಾರುಣ ಸಾವು

ಯಾದಗಿರಿ: ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ ನಾಲ್ವರು ಮಕ್ಕಳು ದಾರುಣವಾಗಿ ಮೃತಪಟ್ಟ ಘಟನೆ ಜಿಲ್ಲೆಯ ಸುರಪುರ ತಾಲ್ಲೂಕಿನ ನಗನೂರು ಗ್ರಾಮದಲ್ಲಿ ನಡೆದಿದೆ.ಮೃತರನ್ನು ಕಿರಣ, ಬಸಮ್ಮ, ಶರತ್ ಮತ್ತು ಹನುಮೇಶ್ ಎಂದು ಗುರುತಿಸಲಾಗಿದೆ. ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಮಕ್ಕಳು ಹೊಂಡದಲ್ಲಿ ಈಜಲು ಹೋಗಿದ್ದರು ಎನ್ನಲಾಗಿದೆ. ಈ ವೇಳೆ ಅನಾಹುತ ಸಂಭವಿಸಿ ನಾಲ್ವರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.ಈ ದುರ್ಘಟನೆ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣ ಮಾಡಿದೆ.

Read More

ಮರೆಯಾಗದಿರಲಿ ತುಳುನಾಡಿನ ಮೂಲ ಸಂಪ್ರದಾಯ.ತುಳುವೆರೆ ಕಲ ಕಾರ್ಯಕ್ರಮದಲ್ಲಿ ಕೊಡೆತ್ತೂರು ಗುತ್ತಿನಾರ್ ನಿತಿನ್ ಶೆಟ್ಟಿ ಆಶಯ

ಕಿನ್ನಿಗೋಳಿ: ತುಳುನಾಡಿನ ನಂಬಿಕೆ ಅನನ್ಯ. ದೈವವನ್ನು ಪ್ರೀತಿಪೂರ್ವಕವಾಗಿ ನಂಬಿದರೆ ಅವು ನಮ್ಮನ್ನು ಅಷ್ಟೇ ಪ್ರೀತಿಯಿಂದ ಕೈ ಹಿಡಿಯುತ್ತದೆ. ಅದಕ್ಕೆ ಅನೇಕ ನಿದರ್ಶನಗಳಿವೆ. ಯಾವುದೇ ಕಾರಣಕ್ಕೂ ನಮ್ಮ ಮೂಲ ಸಂಪ್ರದಾಯವನ್ನು ಮರೆಯಬಾರದು ಎಂದು ಕೊಡೆತ್ತೂರು ಗಡಿ ಪ್ರಧಾನರಾದ ನಿತಿನ್ ಶೆಟ್ಟಿ ಹೇಳಿದರು.ತುಲುವೆರೆ ಕಲ(ರಿ.) ಮಂಗಳೂರು ವತಿಯಿಂದ ಭಾನುವಾರ ಗುತ್ತಿನ ಚಾವಡಿಯಲ್ಲಿ ನಡೆದ ‘ಗುತ್ತುಗೊಂಜಿ ಕಲೊತ ಸುತ್ತು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತುಳುನಾಡಿನ ಸಂಸ್ಕೃತಿಯಲ್ಲಿ ಗುತ್ತುಗಳ ಪಾತ್ರ ಅಪಾರ. ದೇವಳಗಳಲ್ಲಿರುವ ಶಿಷ್ಟಾಚಾರ ಗುತ್ತಿನ ಮನೆಗಳಿಗೂ ಅನ್ವಯ. ವಿಶ್ವಾದ್ಯಂತ ಅನೇಕ ಖ್ಯಾತನಾಮರನ್ನು…

Read More

ಬಿಸಿರೋಡು : ವೈರಲ್ ವಿಡಿಯೋ ಮೂಲಕ ಹೊರಬಂದ ರಸ್ತೆ ಅವ್ಯವಸ್ಥೆ

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಮಂಗಳೂರು- ಬೆಂಗಳೂರು ರಸ್ತೆ ಮಧ್ಯೆ ಬಿಸಿರೋಡು ಜಂಕ್ಷನ್ ನಲ್ಲಿ ನಿತ್ಯ ಟ್ರಾಫಿಕ್ ಜಾಮ್ ಸಮಸ್ಯೆಯಾಗುತ್ತಿದೆ ಎಂಬುದರ ಕುರಿತು ವ್ಯಕ್ತಿಯೋರ್ವರು ಮಾಡಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದ ಮ‌ೂಲಕ ವೈರಲ್ ಆಗಿದೆ.ಖಾಲಿದ್ ನಂದಾವರ ಎಂಬವರು ಕಾರಿನಲ್ಲಿ ಸಂಚರಿಸುವ ವೇಳೆ ರಸ್ತೆಯ ಮೇಲೆ ನಿಲ್ಲಿಸಿ ಟ್ರಾಫಿಕ್ ಜಾಮ್ ಸಮಸ್ಯೆಗೆ ಕಾರಣವಾಗಿದ್ದ ವಾಹನಗಳ ವಿಡಿಯೋ ಮಾಡಿದ್ದಲ್ಲದೆ, ಸಾಮಾಜಿಕ ಜಾಲತಾಣದ ಮೂಲಕ ವೈರಲ್ ಮಾಡಿದ್ದಾರೆ. ಬಿಸಿರೋಡಿನಲ್ಲಿ ಇತ್ತೀಚಿಗೆ ನಿರ್ಮಾಣವಾದ ಬಾವ ಬಿಲ್ಡರ್ ನವರ ಸ್ಮಾರ್ಟ್ ಸಿಟಿ ಕಾಂಪ್ಲೆಕ್ಸ್ ಮುಂಭಾಗದಿಂದ…

Read More
error: Content is protected !!