ಬಂಟ್ವಾಳದಲ್ಲಿ ಮಾ.30ರಿಂದ ಎ.4ರವರೆಗೆ ಬ್ರಹ್ಮಕಲಶೋತ್ಸವ ಮಹೋತ್ಸವ

ಬಂಟ್ವಾಳ: ಶ್ರೀ ಜಗದಂಬಿಕಾ ಶ್ರೀ ಮಹಮ್ಮಾಯಿ ಗುಳಿಗ ಅಣ್ಣಪ್ಪ ಕ್ಷೇತ್ರ ಸೇವಾ ಸಮಿತಿ ( ರಿ.) ದೇವಿನಗರ – ದಡ್ಡಲಕಾಡು ಇಲ್ಲಿ ಮಾ.30 ರಿಂದ ಎ.4 ರ ವರೆಗೆ ನವೀಕರಣ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ,ಶ್ರೀ ಚಂಡಿಕಾಯಾಗ ಹಾಗೂ ಸಹಪರಿವಾರ ದೇವರ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮಗಳು ನಡೆಯಲಿವೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಮದಾಸ್ ಬಂಟ್ವಾಳ ತಿಳಿಸಿದರು.ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ‌‌‌‌ ಸತ್ಯನಾರಾಯಣ ಭಟ್ ಶಿವಕ್ಷೇತ್ರ, ಇಜ್ಜ ಇವರ ನೇತ್ರತ್ವದಲ್ಲಿ, ವೇದಮೂರ್ತಿ…

Read More

ಏಪ್ರಿಲ್ 26ರಂದು ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ:ಮೂವರಿಗೆ ಗೌರವ

ಮಂಗಳೂರು:ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪುರಸ್ಕಾರಗಳನ್ನು ಘೋಷಿಸಲಾಗಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಹಿರಿಯ ಸಾಹಿತಿ ರೋನ್ ರೋಚ್ ಕಾಸ್ಸಿಯಾ, ಕಲಾ ಕ್ಷೇತ್ರದಲ್ಲಿ ರಾಮದಾಸ ದತ್ತಾತ್ರೇಯ ಗುಲ್ವಾಡಿ ಹಾಗೂ ಜಾನಪದ ಕ್ಷೇತ್ರದಲ್ಲಿ ಸೈರು (ಮುರಳೀಧರ) ಪುತ್ತು ನಾಯ್ಕ ಅವರು ಗೌರವ ಪ್ರಶಸ್ತಿಗೆ ಭಾಜನರಾಗಿದ್ದು ಕಾರ್ಯಕ್ರಮವು ಎ.26ರಂದು ಸಂಜೆ 5 ಗಂಟೆಗೆ ಉಡುಪಿ ಉದ್ಯಾವರ ಚರ್ಚ್ ವಠಾರದಲ್ಲಿ ನಡೆಯಲಿದೆ ಎಂದು ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾದ ಸ್ಟ್ಯಾನಿ ಅಲ್ವಾರಿಸ್ ತಿಳಿಸಿದರು. ನಗರದ…

Read More

ತಿಬ್ಲಪದವು: ಮನೆ ಗೋಡೆಗೆ ಹಾರಿ ಬಡಿದ ಕಾರು.ಭೀಕರ ಅಪಘಾತ, ಅಚ್ಚರಿಯ ರೀತಿಯಲ್ಲಿ ಪಾರಾದ ಪ್ರಯಾಣಿಕರು

ನಾಟೇಕಲ್: ಇಲ್ಲಿಗೆ ಸಮೀಪದ ತಿಬ್ಲಪದವು ಮಸೀದಿ ಸಭಾಂಗಣದ ಬಳಿ ನಿನ್ನೆ ತಡರಾತ್ರಿ ಭೀಕರ ಕಾರು ಅಪಘಾತ ಸಂಭವಿಸಿದೆ.ಕೋಣಾಜೆ ಕಡೆಯಿಂದ ದೇರಳಕಟ್ಟೆ ಕಡೆಗೆ ಸಾಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಸುಮಾರು 10 ಅಡಿ ಆಳಕ್ಕೆ ಜಿಗಿದು, ಸಭಾಂಗಣ ಕಟ್ಟಡದ ಗೋಡೆಗೆ ಬಡಿದು ಕೆಳಕ್ಕೆ ಉರುಳಿದೆ. ಅಪಘಾತದ ತೀವ್ರತೆ ಭೀಕರವಾಗಿದ್ದರೂ, ವಾಹನದಲ್ಲಿದ್ದವರು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.ಘಟನೆಯ ಕುರಿತು ಮಂಗಳೂರು ದಕ್ಷಿಣ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Read More

ಆರಿಫ್ ಕೊಲೆ ಪ್ರಕರಣದಲ್ಲಿ‌ ಆರು ಆರೋಪಿಗಳ ಗುರುತು ಪತ್ತೆ

ಮಂಗಳೂರು :ಆರಿಫ್ ಕೊಲೆ ಪ್ರಕರಣದಲ್ಲಿ‌ ಆರು ಆರೋಪಿಗಳ ಗುರುತು ಪತ್ತೆಯಾಗಿದೆ.ತೊಕ್ಕೊಟ್ಟು ಬಳಿ ಇತ್ತೀಚೆಗೆ ನಡೆದ ಆರಿಫ್ ಕೊಲೆ ಪ್ರಕರಣದ ಮುಂದಿನ ತನಿಖೆಯನ್ನು ಸಿಸಿಬಿ ಎಸಿಪಿ ತಂಡಕ್ಕೆ ವರ್ಗಾಯಿಸಲಾಗಿದೆ. ಪ್ರಕರಣದಲ್ಲಿ ಆರು ಮಂದಿ ಆರೋಪಿಗಳು ಭಾಗಿಯಾಗಿರುವುದನ್ನು ಗುರುತಿಸಲಾಗಿದ್ದು, ಆರೋಪಿಗಳು ನಿರಂತರವಾಗಿ ಸ್ಥಳ ಬದಲಾವಣೆ ಮಾಡುತ್ತಿರುವುದರಿಂದ, ತನಿಖಾ ತಂಡಗಳಿಗೆ ಅವರನ್ನು ತಕ್ಷಣವೇ ಬಂಧಿಸುವುದು ಸವಾಲಾಗಿ ಪರಿಣಮಿಸಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ. “ತನಿಖೆಯ ಸಮಯದಲ್ಲಿ ನಮ್ಮ ತಂಡಗಳು ಸಂಪೂರ್ಣ ಸಂಚು ಮತ್ತು…

Read More

ತಿಂಗಳ ಹಿಂದಷ್ಟೇ ರಿಜಿಸ್ಟರ್ ಮದುವೆಯಾಗಿದ್ದ ಬೆಳ್ತಂಗಡಿಯ ಯುವ ಉದ್ಯಮಿ ವಿಷ ಕುಡಿದು ಸಾವು

ಮಂಗಳೂರು : ತಿಂಗಳ ಹಿಂದಷ್ಟೇ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದ ಯುವ ಉದ್ಯಮಿ ತಿಂಡಿಯ ಜೊತೆಗೆ ವಿಷ ಸೇವಿಸಿದ್ದು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ನೆಲ್ಯಾಡಿ ನಿವಾಸಿ ಸುದೀಪ್ ರೈ(36) ಮೃತರು. ಇವರು ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಕರ್ನೋಡಿಯಲ್ಲಿ ಅಜ್ಜನ ಮನೆಯಲ್ಲಿ ವಾಸವಿದ್ದರು. ಸುದೀಪ್ ರೈಗೆ ಕಳೆದ ಫೆ.17ರಂದು ಕಾರ್ಕಳ ತಾಲೂಕಿನ ಯುವತಿ ಜೊತೆಗೆ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿತ್ತು. ಸುದೀಪ್ ಅವರು ಬೆಳ್ತಂಗಡಿಯಲ್ಲಿ ಎಸ್‌ಆರ್ ಎನ್ ಗ್ರೂಪ್ ಹೆಸರಲ್ಲಿ ಇಲೆಕ್ಟ್ರಾನಿಕ್ ಮತ್ತು ಸೋಲಾರ್ ಉದ್ಯಮ…

Read More

ಎಪ್ರಿಲ್ 4 – 5 , ಮಂಗಳೂರಿನಲ್ಲಿ CITU ಕರ್ನಾಟಕ ರಾಜ್ಯ ಮಟ್ಟದ ಸಂಘಟನಾ ಕಾರ್ಯಾಗಾರ

ಕಾರ್ಮಿಕ ಕಾನೂನುಗಳ ರಕ್ಷಣೆಗಾಗಿ, ದುಡಿಯುವ ವರ್ಗದ ಚಳುವಳಿಯ ವಿಸ್ತರಣೆಗಾಗಿ CITU ಕರ್ನಾಟಕ ರಾಜ್ಯ ಮಟ್ಟದ ಸಂಘಟನಾ ಕಾರ್ಯಾಗಾರವು ಎಪ್ರಿಲ್ 4 ಮತ್ತು 5ರಂದು ಎರಡು ದಿನಗಳ ಕಾಲ ಮಂಗಳೂರಿನ ಸಂದೇಶ ಪ್ರತಿಷ್ಠಾನದಲ್ಲಿ ಜರುಗಲಿದೆ ಎಂದು ಕೇಂದ್ರ ಕಾರ್ಮಿಕ ಸಂಘಟನೆಯಾದ CITU ಪತ್ರಿಕಾಹೇಳಿಕೆಯೊಂದರಲ್ಲಿ ತಿಳಿಸಿದೆ ಕರ್ನಾಟಕ ರಾಜ್ಯಾದ್ಯಂತ ಆಯ್ದ 250ರಷ್ಟು ಪ್ರಮುಖ CITU ನಾಯಕರು ಭಾಗವಹಿಸಲಿರುವ ಸಂಘಟನಾ ಕಾರ್ಯಾಗಾರವನ್ನು CITU ರಾಷ್ಟ್ರೀಯ ಕಾರ್ಯದರ್ಶಿಗಳಾದ ಕೆ ಎನ್ ಉಮೇಶ್ ರವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ CITU ರಾಜ್ಯಾಧ್ಯಕ್ಷರಾದ ಮೀನಾಕ್ಷಿ ಸುಂದರಂ,ರಾಜ್ಯ…

Read More

ಪಂಚಾಯತ್‌ ನಿರ್ಮಿಸಿದ ಮಳೆ ನೀರಿನ ತೋಡನ್ನೇ ಮುಚ್ಚಿದ ಭೂಪ

ಉಳ್ಳಾಲ: ಪಂಚಾಯತ್‌ ನಿರ್ಮಿಸಿದ ಮಳೆ ನೀರಿನ ತೋಡನ್ನು ಮುಚ್ಚಿದ ಭೂಪನೋರ್ವನ ಕೃತ್ಯವನ್ನು ಪ್ರಶ್ನಿಸಿದ ನೆರೆಮನೆಯ ಇಬ್ಬರು ಮಹಿಳೆಯರು ಹಾಗೂ ಯುವಕನಿಗೆ ಕಲ್ಲಿನಿಂದ ಹಲ್ಲೆ ನಡೆಸಿರುವ ಘಟನೆ ಕೊಣಾಜೆ ಪೊಲೀಸ್‌ ಠಾಣಾ ವ್ಯಾಪ್ತಿಯ ಅಂಬ್ಲಮೊಗರು ಗ್ರಾಮದ ಪಟ್ನಮೊಗರು ಎಂಬಲ್ಲಿ ಇಂದು ನಡೆದಿದೆ. ಆರೋಪಿಯನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪಟ್ನಮೊಗರು ನಿವಾಸಿ ನಾಗೇಶ್‌ ಶೇಣವ ಹಲ್ಲೆ ನಡೆಸಿರುವ ವ್ಯಕ್ತಿಯಾಗಿದ್ದು, ನೆರೆಮನೆಯ ಬೇಬಿ(56), ಅವರ ಪುತ್ರ ರವಿರಾಜ್‌ ಮತ್ತು ಸೊಸೆ ವರ್ಷಾ ಎಂಬವರು ಹಲ್ಲೆಗೊಳಗಾದವರು. ಇಂದು ಬೆಳಿಗ್ಗೆ 8.30 ರ…

Read More

2025 ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಎ.ಆರ್.ಎಸ್.ಐ ಅಗಿರುವ ತಿಲಕ್ ರಾಜ್ ಆಯ್ಕೆ

ಮಂಗಳೂರು : 2025 ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಎ.ಆರ್.ಎಸ್.ಐ ಅಗಿರುವ ತಿಲಕ್ ರಾಜ್ ಆಯ್ಕೆಯಾಗಿದ್ದಾರೆ. ಮಂಗಳೂರು ತಾಲೂಕಿನ ಕಾವೂರು ಗ್ರಾಮದ ದಯಾನಂದ ಪೂಜಾರಿ ಮತ್ತು ವೇದಾವತಿ ದಂಪತಿಗಳ ಪುತ್ರರಾದ ತಿಲಕ್ ರಾಜ್ ಇವರು 2008 ರಲ್ಲಿ ಜಿಲ್ಲಾ ಪೊಲೀಸ್ ಡಿ.ಎ.ಆರ್ ಘಟಕಕ್ಕೆ ಸೇರ್ಪಡೆಯಾಗಿ ವಿವಿಧ ವಿಭಾಗಗಳಲ್ಲಿ ಒಟ್ಟು 18 ವರ್ಷ ಕರ್ತವ್ಯ ನಿರ್ವಹಿಸಿರುವುದಲ್ಲದೆ, ಇವರು ಭಯೋತ್ಪಾದನಾ ನಿಗ್ರಹ ದಳ ಕೂಡ್ಲು ಬೆಂಗಳೂರಿನಲ್ಲಿ ನಡೆಸುವ ಕೌಂಟರ್ ಟೆರರಿಸಂ ಕೋರ್ಸನ್ನು…

Read More

ಒಡ್ಡೂರು ಫಾರ್ಮ್‌ನಲ್ಲಿ ರೋಮಾಂಚಕ ಆಫ್‌ರೋಡ್ ಮೋಟಾರ್ ಸ್ಪರ್ಧೆ ಇಂದು–ನಾಳೆ

ಮಂಗಳೂರು: ಸಾಮಾನ್ಯವಾಗಿ ರಸ್ತೆಯಲ್ಲಿ ಸಾಗುವ, ಇಂಜಿನ್ ಅಷ್ಟೊಂದು ಶಬ್ದ ಮಾಡದ ನಾಲ್ಕು ಚಕ್ರದ ವಾಹನಗಳು ಮಾರ್ಚ್ 28 ಮತ್ತು 29ರಂದು ಮಂಗಳೂರಿಗೆ ಸಮೀಪದ ಒಡ್ಡೂರು ಫಾರ್ಮ್ ನಲ್ಲಿ ಆರ್ಭಟ ಮಾಡುತ್ತ ತಮ್ಮ ಹೊಸ ಅವತಾರದ ಪ್ರದರ್ಶನ ಮಾಡಲಿವೆ.ಇವು ನಶೆಯಲ್ಲಿದ್ದಂತೆ ಉರುಳಿ ಬೀಳುತ್ತ, ನೆಲ ಬಿಟ್ಟು ಆಕಾಶದ ಗೆಳೆತನ ಮಾಡಲು ಮೇಲೆ ಕುಪ್ಪಳಿಸುತ್ತ ತೆಂಗಿನ ತೋಟ, ಅಡಿಕೆ ಮರ, ಬಾಳೆ ತೋಟ..ಇವುಗಳ ನಡುವೆ ಸಾಮಾನ್ಯವಾಗಿ ರಸ್ತೆಯೇ ಇಲ್ಲದ ಕಠಿಣ ಪಥದಲ್ಲಿ ಭಾರೀ ವೇಗದಿಂದ ಸಾಗಿ ರೋಮಾಂಚಕ ದೃಶ್ಯಗಳನ್ನು ಸೃಷ್ಟಿಸಲಿವೆ….

Read More

ಬಂಟ್ವಾಳ ಗುಪ್ತವಾರ್ತೆ ವಿಭಾಗದ ಇರ್ಷಾದ್‌ಗೆ ಮುಖ್ಯಮಂತ್ರಿ ಪದಕ ಗೌರವ

ಬಂಟ್ವಾಳ: 2025- 26 ನೇ ಸಾಲಿನ ಮುಖ್ಯಮಂತ್ರಿ ಪದಕ ಘೋಷಣೆಯಾಗಿದ್ದು, ಬಂಟ್ವಾಳ ನಗರ ಪೋಲೀಸ್ ಠಾಣೆಯ ಗುಪ್ತವಾರ್ತೆ ವಿಭಾಗದ ಇರ್ಷಾದ್ ಪಡಂಗಡಿ ಅವರು ಆಯ್ಕೆಯಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಪಡಂಗಡಿ ನಿವಾಸಿಯಾಗಿರುವ ಇರ್ಷಾದ್ ಅವರು 2008 ರಲ್ಲಿ ಪೋಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದಾರೆ.ಬಳಿಕ ಮಂಗಳೂರು ವಿಶೇಷ ಘಟಕ, ಉಪ್ಪಿನಂಗಡಿ ಠಾಣೆ, ಬಂಟ್ವಾಳ ಪೋಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಇವರು ಅನೇಕ ಕೊಲೆ ಪ್ರಕರಣಗಳ ಪತ್ತೆ , ದರೋಡೆ ,ಮನೆಕಳ್ಳತನ,ಗಾಂಜಾ ಹಾಗೂ ಖೋಟಾ ನೋಟು ಪ್ರಕರಣಗಳ ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ಪೋಲೀಸ್…

Read More
error: Content is protected !!