ನ.9 ರಂದು : ಗೋವನಿತಾಶ್ರಯ ಟ್ರಸ್ಟ್ ವತಿಯಿಂದ ಸಾಮೂಹಿಕ ಗೋಪೂಜೆ ಹಾಗೂ ಗೋವಿಗಾಗಿ ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮ
ಮಂಗಳೂರು : ಗೋವು ನಮ್ಮೆಲ್ಲರ ಸಂಪೂಜ್ಯತೆಯ ಪ್ರತೀಕ, ಮನುಕುಲಕ್ಕೆ ಸದಾ ಉಪಕಾರಿ, ಗೋವಂಶದ ಉಳಿವಿಗಾಗಿ ವಿಶ್ವಹಿಂದೂ ಪರಿಷತ್ ಹಲವಾರು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದೆ. ಗೋವುಗಳ ಪಾಲನೆ- ಪೋಷಣೆಯ ನಿಟ್ಟಿನಲ್ಲಿ ಕಳೆದ 25 ವರ್ಷಗಳಿಂದ ವಿಶ್ವಹಿಂದೂ ಪರಿಷತ್ತಿನ ನೇತೃತ್ವದಲ್ಲಿ ಗೋವನಿತಾಶ್ರಯ ಟ್ರಸ್ಟಿನ ಮುಖಾಂತರ ಗೋಶಾಲೆಯನ್ನು ನಡೆಸಿಕೊಂಡು ಬರುತ್ತಿದ್ದು ಸುಮಾರು 450ಕ್ಕೂ ಹೆಚ್ಚು ದನಕರುಗಳ ಪಾಲನೆ- ಪೋಷಣೆ ಮಾಡುತ್ತಿದ್ದೇವೆ. ಮಂಗಳೂರು ಮಹಾನಗರದಿಂದ 22ಕಿ.ಮೀ. ದೂರದ ಪಜೀರಿನಲ್ಲಿ 11 ಎಕರೆ ವಿಶಾಲ ನಿವೇಶನದಲ್ಲಿ ಈ ಗೋಶಾಲೆ ಇದ್ದು ನಿರ್ಗತಿಕ…
