ಕೊಡ್ಲಮೊಗರಿನ ಶ್ರೀ ವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಂಜೇಶ್ವರ ಉಪಜಿಲ್ಲಾ ಶಾಸ್ತ್ರ ಮೇಳ ಉದ್ಘಾಟನಾ ಸಮಾರಂಭ.

ಅಕ್ಟೋಬರ್ 13 14 ರಂದು ನಡೆಯುವ ಮಂಜೇಶ್ವರ ಉಪಜಿಲ್ಲಾ ಶಾಸ್ತ್ರ ಮೇಳ ಉದ್ಘಾಟನಾ ಸಮಾರಂಭವು ಕೊಡ್ಲಮೊಗರಿನ ಶ್ರೀ ವಾಣಿ ವಿಜಯ ಹೖಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಿತು.ಶ್ರೀ ವಾಣಿ ವಿಜಯ ಹೖಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರಾದ ಶ್ರೀಯುತ ವಿಜಯಕುಮಾರ್ ಧ್ವಜಾರೋಹಣಗೈದರು. ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ಶ್ರೀಯುತ ಜಾರ್ಜ್ ಕ್ರಾಸ್ತಾ ಪ್ರಾಸ್ತಾವಿಕ ಮಾತುಗಳನ್ನಾಡಿದರು.ವರ್ಕಾಡಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ.ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದ್ವೀಪ ಪ್ರಜ್ವಲಿಸಿ ಅಧ್ಯಕ್ಷೀಯ ಮಾತುಗಳನ್ನಾಡಿದರು ಮಂಜೇಶ್ವರ ಶಾಸಕರಾದ ಶ್ರೀಯುತ ಎ ಕೆ ಎಂ ಅಶ್ರಫ್ ಕಾರ್ಯಕ್ರಮ…

Read More

ಶಾಫಿ ಪರಂಬಿಲ್ ಮೇಲೆ ಪೊಲೀಸರಿಂದ ಹಲ್ಲೆ – ಕಾಂಗ್ರೆಸ್ ಪ್ರತಿಭಟನೆ

ಕೆಪಿಸಿಸಿ ಕಾರ್ಯಾಧ್ಯಕ್ಷ, ಸಂಸದ ಶ್ರೀ ಶಾಫಿ ಪರಂಬಿಲ್ ಹಾಗೂ ಇನ್ನಿತರ ಯುಡಿಎಫ್ ನೇತಾರರ ವಿರುದ್ಧ ಪೇರಾಂಬ್ರದಲ್ಲಿ ಪೊಲೀಸರು ನಡೆಸಿದ ಲಾಠಿ ಚಾರ್ಜ್ ಹಾಗೂ ಮಾರಕ ಹಲ್ಲೆ ಪ್ರತಿಭಟಿಸಿ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಂದ್ಯೋಡುವಿನಲ್ಲಿ ಫ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಶ್ರೀ ಬಾಬು ಬಂದ್ಯೋಡುರವರ ಅಧ್ಯಕ್ಷತೆಯಲ್ಹಿ ನಡೆದ ಕಾರ್ಯಕ್ರಮವನ್ನು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಶ್ರೀ ಫಾರೂಕ್ ಶಿರಿಯ ಉದ್ಘಾಟಿಸಿದರು. ಇರ್ಷಾದ್, ಅಶ್ರಫ್ ಮುಟ್ಟಂ, ಮೋಹನನ್ ಮೇಸ್ತ್ರಿ, ಇಬ್ರಾಹಿಂ, ಕುಂಞಾಲಿ ಇಚ್ಲಂಗೋಡು, ನಾಗೇಶ್, ರಾಜೇಶ್ ನಾಯ್ಕ್, ಬರ್ನಾರ್ಡ್ ಡಿ…

Read More

ಹೊಸಂಗಡಿ ಪೇಟೆಯಲ್ಲಿ ಅವ್ಯವಸ್ಥೆ ರೀತಿಯಲ್ಲಿ ವಾಹನಗಳ ಪಾರ್ಕಿಂಗ್

ಮಂಜೇಶ್ವರ: ಹೆಚ್ಚು ಸಂಖ್ಯೆಯಲ್ಲಿ ಜನ ಸಂದಣಿ ಇರುವ ಹೊಸಂಗಡಿ ಪೇಟೆಯಲ್ಲಿ ದಾರಿಮದ್ಯೆ ಅವ್ಯವಸ್ಥೆಯಾಗಿ ವಾಹನಗಳು ಪಾರ್ಕಿಂಗ್ ಮಾಡಿರುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಜನ ಸಾಮಾನ್ಯರು ಪರದಾಡುವಂತಾಗಿದೆ. ಸಮೀಪದ ಮೇಘ ಟವರ್ ಲ್ಲಿ ಇರುವ ಅಂಗಡಿಗಳಿಗೆ ಜನಸಾಮಾನ್ಯರು ಹೋಗುವುದಕ್ಕೆ ಹರಸಾಹಸ ಪಡುವಂತಾಗಿದೆ. ಇದಕ್ಕೆ ಅಂಗಡಿ ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಇನ್ನೊಂದೆಡೆ ಸರಿಯಾದ ಜಾಗಗಳಲ್ಲಿ ವಾಹನ ಪಾರ್ಕಿಂಗ್ ಮಾಡಿದ್ದರೂ ಪೊಲೀಸರು ವಿನಾಕಾರಣ ಫೈನ್ ಹಾಕುತ್ತಿದ್ದಾರೆ ಎಂದು ವಾಹನ ಚಾಲಕರು ಆರೋಪಿಸಿದ್ದಾರೆ. ಕೂಡಲೇ ಇದಕ್ಕೆ ಶಾಶ್ವತ ಪರಿಹಾರ ಕೈಗೊಂಡು…

Read More

ಕನ್ನಡಿಗರ ಮೇಲೆ ಮಲಯಾಳಂ ಕಡ್ಡಾಯ ಹೇರಿಕೆ ಸರಕಾರದ ಹಾಗೂ ಇಲ್ಲಿನ ಶಾಸಕರ ಕೊಡುಗೆ-ಆದರ್ಶ ಬಿ ಎಂ

ಕೇರಳ ಪಿನರಾಯಿ ಸರಕಾರ ರಾಜ್ಯ ದಲ್ಲಿ ಮಲಯಾಳಂ ಭಾಷಾ ಕಲಿಕೆಯನ್ನು ಕಡ್ಡಾಯ ಮಾಡಿದ್ದು, ಮಸೂದೆಯನ್ನು ಜಾರಿ ಮಾಡಿದೆ ಇದು ಕಾಸರಗೋಡು ಜಿಲ್ಲೆಯ ಭಾಷಾ ಅಲ್ಪಸಂಖ್ಯಾತ ರ ಸಂವಿದಾನಿಕ ಹಕ್ಕಿನ ಮೇಲಿನ ದಬ್ಬಾಳಿಕೆ. ರಾಜ್ಯ ಸರಕಾರ ವಿಧಾನ ಸಭಾದಲ್ಲಿ ಮಸೂದೆ ಪಾಸ್ ಮಾಡುವಾಗ ಅದರ ವಿರುದ್ಧ ಹೊರಟ ನಡೆಸದ ಮಂಜೇಶ್ವರ ಹಾಗೂ ಕಾಸರಗೋಡು ಶಾಸಕರ ಮೌನ ಬೇಜವಾಬ್ದಾರತನ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಶಾಸಕರ ಹಾಗೂ ಸರಕಾರದ ಕ್ರಮವನ್ನು ಖಂಡಿಸಿದರು. ಮಲಯಾಳಂ ಕಡ್ಡಾಯ…

Read More

ಸ್ವಯಂ ಸೇವಕ ಸಂಘದ ಶತಾಬ್ದಿ ಯನ್ನು ಸಾಯಿ ನಿಕೇತನ ಸೇವಾಶ್ರಮದಲ್ಲಿ ಆಚರಿಸಿದ ಅಯೋಧ್ಯಾ ಶಾಖೆಯ ಸ್ವಯಂ ಸೇವಕರು.

ಬೇಕೂರು:ಸಾಯಿ ನಿಕೇತನ ಸೇವಾಶ್ರಮ ದೈಗೋಳಿ ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂರನೇ ವರ್ಷಾಚರಣೆಯ ಪ್ರಯುಕ್ತ ಅಯೋಧ್ಯಶಾಖೆ ಬೇಕೂರಿನ ಸ್ವಯಂ ಸೇವಕರು ಭೇಟಿನೀಡಿ ಬೆಳಗ್ಗಿನ ಉಪಾಹಾರವನ್ನು ಆಶ್ರಿತರಿಗೆ ವಿತರಿಸಿದರು.ಭಾರತದ ಇತಿಹಾಸದಲ್ಲಿ 100ನೇ ವರ್ಷ ಆದ ಸಂಘದ ಧ್ಯೇಯದಂತೆ ಸೇವಾ ಮನೋಭಾವದ ಸದಾಶಯದ ಸುಂದರ ಕ್ಷಣವನ್ನು ಕಣ್ತುಂಬಿಸಿ ಕೊಳ್ಳುವ ಸಮಯ ನಮ್ಮಮುಂದಿನ ಪೀಳಿಗೆಗೆ ಮನದಟ್ಟು ಮಾಡುವ ಸಲುವಾಗಿ ಈ ಭೇಟಿ ನೀಡಲಾಯಿತು. ಮಾತೃ ದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ ಎನ್ನುವ ಮಾತು ಕೇವಲ…

Read More

ಜ್ವರಭಾಧಿಸಿ ಸಮಾಜ ಸೇವಕನ ಯುವಕನ ದಾರುಣ ಅಂತ್ಯ

ಮಂಜೇಶ್ವರ : ನಾಡಿನ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದ ಯುವಕನೊಬ್ಬ ಜ್ವರದ ಭಾಧೆಯಿಂದ ದುರ್ದೈವವಶಾತ್ ತನ್ನ ಅಮೂಲ್ಯ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಉದ್ಯಾವರ ನಿವಾಸಿ ಅಬ್ದುಲ್ ಜಬ್ಬಾರ್ (47) ಮೃತ ದುರ್ದೈವಿ.ವೃತ್ತಿಯಲ್ಲಿ ವಾಹನ ಚಾಲಕನಾಗಿದ್ದ ಅಬ್ದುಲ್ ಜಬ್ಬಾರ್ ಸಮಾಜ ಸೇವೆಗಾಗಿ ತನ್ನ ಜೀವನವನ್ನು ಅರ್ಪಿಸಿದ್ದ ಅನಾಥ ಮಕ್ಕಳಿಗೆ ಶಿಕ್ಷಣ, ಹಿಂದುಳಿದ ಕುಟುಂಬಗಳಿಗೆ ಆಹಾರ ವಿತರಣೆ ಹಾಗೂ ಪರಿಸರ ಸಂರಕ್ಷಣೆ ಎಂಬಂತಹ ಅನೇಕ ಕ್ಷೇತ್ರಗಳಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದನು. ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಯುವಕ ಸ್ಥಳೀಯ ಆಸ್ಪತ್ರೆಯಿಂದ ಚಿಕಿತ್ಸೆ…

Read More

ಲೋಕೋಪಯೋಗಿ ಇಲಾಖೆ ರಸ್ತೆ ದುರಸ್ಥಿ -ಕೂಡಲೇ ಸಂಚಾರ ಯೋಗ್ಯ ಮಾಡಲು ಬಿಜೆಪಿ ಅಗ್ರಹ

ಮಂಜೇಶ್ವರ: ಸಜಂಕಿಲ -ಬಾಯರ್ ರಸ್ತೆ, ಕುರುಡಪದವು ಲಾಲ್ ಬಾಗ್ ರಸ್ತೆ, ಹೊಸಂಗಡಿ- ಮಜೀಬೈಲ್ ಕಂಗುಮೆ ರಸ್ತೆ ವರ್ಕಾಡಿ ದೈಗೋಳಿ, ಗುವೇದಪಡ್ಪುರಸ್ತೆ ಮಂಜೇಶ್ವರ ಕೆದುoಬಾಡಿ ರಸ್ತೆ ಗಳನ್ನು ಸಂಚಾರ ಯೋಗ್ಯಗೊಳಿಸಬೇಕು, ಮತ್ತು ಕಾಮಗಾರಿ ಕೂಡಲೇ ಪೂರ್ಣ ಮಾಡಬೇಕೆಂದು ಬಿಜೆಪಿ ಮಂಡಲ ಸಮಿತಿ ಅಗ್ರಹಿಸಿದೆ. ಮಂಜೇಶ್ವರ ಶಾಸಕರ ಹಾಗೂ ಲೋಕಪಯೋಗಿ ಇಲಾಖೆಯ ಬೇಜವಾಬ್ದಾರಿ ಮತ್ತು ಸ್ಥಳೀಯ ಪಂಚಾಯತ್ ಆಡಳಿತದ ನಿಕ್ರಿಯತೆ ಇದಕೆಲ್ಲ ಕಾರಣ.ಜನರ ಸಮಸ್ಯೆಗೆ ಪರಿಹಾರ ಕಾಣದ ಶಾಸಕರು ವಿದೇಶ ಸುತ್ತುವುದು ಬಿಟ್ಟು ತಮ್ಮ ಕರ್ತವ್ಯ ನಿರ್ವಹಿಸಬೇಕೆಂದು ಬಿಜೆಪಿ ಮಂಜೇಶ್ವರ…

Read More

ಆಟೋ ರಿಕ್ಷಾದಲ್ಲಿ ಸಾಗಿಸಲಾಗುತಿದ್ದ 22.5 ಕಿಲೋ ಗಾಂಜಾ ವಶಪಡಿಸಿಕೊಂಡ ಪ್ರಕರಣ : ಆರೋಪಿಗಳಿಗೆ 10 ವರ್ಷ ಕಠಿಣ ಸಜೆ ಹಾಗೂ ದಂಡ

ಕಾಸರಗೋಡು : ಆಟೋ ರಿಕ್ಷಾದಲ್ಲಿ ಸಾಗಿಸಲಾಗುತಿದ್ದ 22.5 ಕಿಲೋ ಗಾಂಜಾ ವಶಪಡಿಸಿಕೊಂಡ ಪ್ರಕರಣದಲ್ಲಿ ಆರೋಪಿಗಳಿಗೆ ಹತ್ತು ವರ್ಷ ಕಠಿಣ ಸಜೆ ಹಾಗೂ ಒಂದು ಲಕ್ಷ ರೂ. ನಂತೆ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಕಾಸರಗೋಡು ಅಡಿಷನಲ್ ಜಿಲ್ಲಾ ಸೆಷನ್ಸ್ ನ್ಯಾಯಾಲಯ (ಧ್ವಿ) ನ್ಯಾಯಾಧೀಶೆ ಕೆ ಪ್ರಿಯಾ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದಾರೆ. ನೆಲ್ಲಿಕಟ್ಟೆ ಹಮೂಸ್ ನಗರದ ಅಬ್ದುಲ್ ರಹ್ಮಾನ್ (55), ಪೆರುಂಬಳ ಕಡವ್ ನಿವಾಸಿ ಸಿ ಎ ಆಹ್ಮದ್ ಕಬೀರ್ (43) ಹಾಗೂ ಆದೂರು ನಿವಾಸಿ ಕೆ…

Read More

ಪಿಣರಾಯಿ ಸರಕಾರಕ್ಕೆ ವಿನಾಶ ಕಾಲೇ ವಿಪರೀತ ಬುದ್ಧಿ- ಕಾಂಗ್ರೆಸ್

ದೈವ ದೇವರುಗಳನ್ನು ಧಿಕ್ಕರಿಸಿ ರಾಜಕೀಯ ಮಾಡಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದ ಪಿಣರಾಯಿ ನೇತೃತ್ವದ ಸಿಪಿಎಂ ಸರಕಾರ ತನ್ನ ಅಂಧಾ ದರ್ಬಾರ್ ದೆಸೆಯಿಂದ ಅಧಿಕಾರ ಕೈ ತಪ್ಪಿ ಹೋಗುತ್ತದೆ ಎಂಬ ಪರಿಸ್ಥಿತಿ ನಿರ್ಮಾಣವಾದಾಗ ದೈವ ದೇವರುಗಳ ಮೊರೆ ಹೋಗುವ ಮೂಲಕ ಆಸ್ತಿಕರ ಭಾವನೆಗಳಿಗೆ ಘಾಸಿಯುಂಟು ಮಾಡಿದೆ. ಅವಸರದ ಕಳ್ಳರಂತೆ ಕಂಡ ಕಂಡ ದೇವಸ್ಥಾನಗಳ ಹುಂಡಿಗೆ ಕೈ ಹಾಕುವುದು ಮಾತ್ರವಲ್ಲದೆ ಶಬರಿಮಲೆ ಕ್ಷೇತ್ರದ ಬಾಗಿಲು, ದಾರಂದ ಮತ್ತಿತರ ಸ್ವರ್ಣಲೇಪಿತ ಪೂಜನೀಯ ವಸ್ತುಗಳನ್ನು ಕದ್ದೊಯ್ಯುವ ನಿರ್ಲಜ್ಜ ಹಗಲು ದರೋಡೆಗೆ ಇಳಿದಿದೆ. ಈ ಆಟವು…

Read More

ಕೋಟೆ ಮನೆ ವೆಂಕಟರಮಣ ಆಚಾರ್ಯರವರ ಶತ ಸಂಭ್ರಮ

ಮಂಜೇಶ್ವರ : ಮಂಜೇಶ್ವರ ಹೊಸಂಗಡಿಯ ಹೆಸರಾಂತ ಕಾಸ್ಟ ಶಿಲ್ಪಿ ಕೋಟೆ ಮನೆ ವೆಂಕಟರಮಣ ಆಚಾರ್ಯರವರ 100 ನೇ ಹುಟ್ಟುಹಬ್ಬವನ್ನು ಇತ್ತೀಚಿಗೆ ಸಂಭ್ರಮದಿಂದ ಆಚರಿಸಲಾಯಿತು. ಹಲವು ವರ್ಷಗಳಿಂದ ಶ್ರೀ ಮತ್ ಅನಂತೇಶ್ವರ ದೇವಸ್ಥಾನದ ಬಳಿಯಿರುವ ಕಟ್ಟಡದಲ್ಲಿ ಮರದ ಕೆಲಸವನ್ನು ನಿರ್ವಹಿಸುತ್ತಿರುವ ಇವರು 5 ನೇ ತರಗತಿ ಪೂರೈಸಿದ ಬಳಿಕ ತಂದೆಯ ಕೆಲಸವನ್ನು ಮುಂದುವರಿಸಿದ್ದರು. 1951 ರಲ್ಲಿ ಶಾರದಾ ರವರನ್ನು ವಿವಾಹವಾಗಿ ಇಬ್ಬರು ಗಂಡು ಮಕ್ಕಳು ಮತ್ತು ಐವರು ಹೆಣ್ಣುಮಕ್ಕಳಿರುವ ಸಂತೃಪ್ತ ಕುಟುಂಬ ಇವರದ್ದುಹಿರಿಯ ಪುತ್ರ ಹರಿಶ್ಚಂದ್ರ ಆಚಾರ್ಯ ಹೆಸರಾಂತ…

Read More
error: Content is protected !!