ಡಾ. ವಾಮನ್ ರಾವ್ ಬೇಕಲ್ ದಂಪತಿಗೆ “ಕರುನಾಡ ಕನ್ನಡ ಗಡಿನಾಡು ಪೋಷಕ ರತ್ನ ಪ್ರಶಸ್ತಿ-2026”
ಕಾಸರಗೋಡು : ಡಾ ಎಸ್. ಡಿ. ಮುಡೆಣ್ಣವರ, ಸ್ಥಾಪಕ ರಾಜ್ಯಾಧ್ಯಕ್ಷರು ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗ (ರಿ.)ಇವರ ಸಾರತ್ಯದಲ್ಲಿ, 25.5.2026ರಂದು ಹಾವೇರಿಯಲ್ಲಿ “ಡಾ. ಅಂಬೇಡ್ಕರ್ ಸಭಾ ಭವನ ಹಾವೇರಿ ಇಲ್ಲಿ ಕರ್ನಾಟಕ ರಾಜ್ಯ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿ ಯಾಗಿ ನಡೆಯಿತು. ಕರ್ನಾಟಕ ವಿಧಾನ ಪರಿಷತ್ತು ಸಭಾಧ್ಯಕ್ಷರಾದ ಬಸವರಾಜ್ ಹೊರಟ್ಟಿಯವರು ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದರು. ಹಲವು ಶಾಸಕರು, ಸಾಹಿತಿ, ಕನ್ನಡ ಗಣ್ಯಾತಿಗಣ್ಯರು ಭಾಗವಹಿಸಿದ್ದರು. ಹಾವೇರಿ ಕನ್ನಡ ಸಾಹಿತ್ಯ ಪರಿಷತ್ತು, ವಿವಿಧ…
