ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಎ.ಕೆ.ಎಂ. ಅಶ್ರಫ್: ಸಚಿವ ಸ್ಥಾನದ ನಿರೀಕ್ಷೆ ಭಗ್ನ

​ ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಭರ್ಜರಿ ಜಯಗಳಿಸಿರುವ ಎ.ಕೆ.ಎಂ. ಅಶ್ರಫ್, ಈ ಸಲ ಕೂಡಾ ಕೇರಳ ವಿಧಾನಸಭೆಯಲ್ಲಿ ಕನ್ನಡ ಭಾಷೆಯಲ್ಲಿಯೇ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಕಾಸರಗೋಡಿನ ಭಾಷಾ ವೈವಿಧ್ಯತೆಯನ್ನು ಮತ್ತೊಮ್ಮೆ ಎತ್ತಿಹಿಡಿದರು. ಕಳೆದ ಬಾರಿಯಂತೆ ಈ ಬಾರಿಯೂ ಕನ್ನಡದಲ್ಲಿಯೇ ಪ್ರಮಾಣವಚನ ಸ್ವೀಕರಿಸಿದ ಅವರು ಎಲ್ಲರ ಗಮನ ಸೆಳೆದರು. ​ಮತ್ತೊಂದೆಡೆ, ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಯುಡಿಎಫ್ ಗೆಲುವು ಸಾಧಿಸಿರುವುದರಿಂದ, ಹೊಸ ಸಚಿವ ಸಂಪುಟದಲ್ಲಿ ಕಾಸರಗೋಡು ಜಿಲ್ಲೆಗೆ ಸಚಿವ ಸ್ಥಾನ…

Read More

ಅನಧಿಕೃತ ಮರಳು ಸಾಗಾಟ: ಟಿಪ್ಪರ್ ಲಾರಿ ವಶ, ಚಾಲಕ ಬಂಧನ

ಮಂಜೇಶ್ವರ: ಅನಧಿಕೃತ ಮರಳುಗಾರಿಕೆ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಕುಂಬಳೆ ಪೊಲೀಸರು, ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ವಶಪಡಿಸಿಕೊಂಡು ಚಾಲಕನನ್ನು ಬಂಧಿಸಿದ್ದಾರೆ. ಶಿರಿಯ ಹೊಳೆಯ ಪಾಚಾಣಿ ಪ್ರದೇಶದಿಂದ ಅನಧಿಕೃತವಾಗಿ ಮರಳು ಸಾಗಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಕುಂಬಳೆ ಪೊಲೀಸರು ಮಫ್ತಿ ವೇಷದಲ್ಲಿ ಕಾರ್ಯಾಚರಣೆ ನಡೆಸಿ, ಶಿರಿಯ ವಳಯಂನಲ್ಲಿ ಟಿಪ್ಪರ್ ಲಾರಿಯನ್ನು ತಡೆದಿದ್ದಾರೆ. ಈ ವೇಳೆ ವಾಹನ ಚಾಲಕ ಬಂದ್ಯೋಡು ಅಡ್ಕ ನಿವಾಸಿ ಮನೋಜ್ ಕುಮಾರ್ (26) ಎಂಬಾತನನ್ನು ಬಂಧಿಸಲಾಗಿದೆ. ಮರಳು ಸಾಗಾಟಕ್ಕೆ ಪ್ರೇರೇಪಿಸಿದ ಆರೋಪದ…

Read More

ಕನ್ನಡ ಭವನ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್ -ಸಂಧ್ಯಾ ರಾಣಿ ಟೀಚರ್ ಗೆ ” ಕರುನಾಡ ಕನ್ನಡ ಗಡಿನಾಡು ಪೋಷಕ ರತ್ನ “ಪ್ರಶಸ್ತಿ. 2026.

ಕಾಸರಗೋಡು : ಶ್ರೀ ಎಸ್. ಡಿ. ಮುಡೆಣ್ಣನವರ ಸಂಸ್ಥಾಪಕ ರಾಜ್ಯಾಧ್ಯಕ್ಷರು, ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗ (ರಿ.) ಬೆಂಗಳೂರು ಇವರು ದಿನಾಂಕ 25.5.2026 ನೇ ಸೋಮವಾರ ದಂದು ಡಾ. ಬಿ. ಆರ್. ಅಂಬೇಡ್ಕರ್ ಸಭಾಭವನ ಹಾವೇರಿಯಲ್ಲಿ ನಡೆಸುತ್ತಿರುವ ರಾಜ್ಯ ಮಟ್ಟದ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಡಿನಾಡು ಕಾಸರಗೋಡಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸಲು ಹಾಗೂ ಕರ್ನಾಟಕ ದಾದ್ಯಂತ ಸಂಪರ್ಕ ಸಾದಿಸುತ್ತಿರುವ ಮತ್ತು ವಿವಿಧ ವಿನೂತನ ಕನ್ನಡ ಕಾರ್ಯಕ್ರಮ ಗಳೊಂದಿಗೆ ಕನ್ನಡಪರ ಸಂಘಟನೆಗೆ ಹೊಸ ಆಯಾಮ…

Read More

ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಳಶೋತ್ಸವ ಸಂಭ್ರಮ

ಕಾಸರಗೋಡು: ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಹಾಗೂ ಶ್ರೀ ಸುಬ್ರಮಣ್ಯ ದೇವಸ್ಥಾನದ ವಾರ್ಷಿಕ ಪ್ರತಿಷ್ಠಾ ಬ್ರಹ್ಮಕಳಶೋತ್ಸವವು ಸೋಮವಾರ ಭಕ್ತಿಭಾವ ಹಾಗೂ ವೈಭವದೊಂದಿಗೆ ನಡೆಯಿತು. ಉತ್ಸವದ ಅಂಗವಾಗಿ ಚಂಡಿಕಾ ಹೋಮ, ಶುದ್ಧಿ ಕಲಶಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಕ್ಷೇತ್ರ ತಂತ್ರಿಗಳಾದ ಹಾರ್ನಾಡ್ ಕೆ.ಯು. ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನೆರವೇರಿದವು. ಇದೇ ವೇಳೆ ಲಲಿತಾ ಸಹಸ್ರನಾಮ ಪಾರಾಯಣ, ಭಜನೆ, ಶ್ರೀ ಮಹಾತಾಯಿಯ ದರ್ಶನ ಸೇವೆ, ಪ್ರಸಾದ ಹಾಗೂ ಅನ್ನಪ್ರಸಾದ ವಿತರಣೆ ಕಾರ್ಯಕ್ರಮಗಳು ಭಕ್ತರ ಸಮ್ಮುಖದಲ್ಲಿ ಜರುಗಿದವು. ಕಾರ್ಯಕ್ರಮದಲ್ಲಿ ಕಾಸರಗೋಡು ಕೋಟೆ…

Read More

​ಕುಂಜತ್ತೂರು: ನೂತನ ಇಂಟರ್ ಲಾಕ್ ಕಾಲ್ನಡೆ ರಸ್ತೆಯೇ ಈಗ ‘ತ್ಯಾಜ್ಯದ ಹರವು’; ಅಧಿಕಾರಿಗಳ ಎಚ್ಚರಿಕೆಯನ್ನು ಗಾಳಿಗೆ ತೂರಿದ ದುರುಳರು

ಮಂಜೇಶ್ವರ: ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಮಂಜೇಶ್ವರದ ಕುಂಜತ್ತೂರು ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯ ಚಿತ್ರಣವೀಗ ಬದಲಾಗಿದೆ. ಆದರೆ ಈ ಬದಲಾವಣೆ ಇಂಟರ್ ಲಾಕ್ ರಸ್ತೆಯ ಸೌಂದರ್ಯಕ್ಕಲ್ಲ, ಬದಲಾಗಿ ಅಲ್ಲಿ ರಾಶಿ ಬಿದ್ದಿರುವ ದುರ್ನಾತ ಬೀರುತ್ತಿರುವ ತ್ಯಾಜ್ಯಕ್ಕೆ ಎಂಬಂತಾಗಿದೆ. ​ಕುಂಜತ್ತೂರು ರಾಷ್ಟ್ರೀಯ ಹೆದ್ದಾರಿಯ ಪಟಾಕಿ ಅಂಗಡಿ ಸಮೀಪದ ಸರ್ವೀಸ್ ರಸ್ತೆಯ ಪಕ್ಕದಲ್ಲೇ ಸಾರ್ವಜನಿಕರ ಅನುಕೂಲಕ್ಕಾಗಿ ಇತ್ತೀಚೆಗಷ್ಟೇ ಇಂಟರ್ ಲಾಕ್ ಅಳವಡಿಸಿ ಕಾಲ್ನಡೆ ರಸ್ತೆಯನ್ನು ಸುಸಜ್ಜಿತಗೊಳಿಸಲಾಗಿತ್ತು. ಆರಂಭದಲ್ಲಿ ಇಲ್ಲಿ ಕಸ ಹಾಕದಂತೆ ಪಂಚಾಯತ್ ಅಧಿಕಾರಿಗಳು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ, ಇಡೀ…

Read More

ಅನಂತಪುರ ಕೈಗಾರಿಕಾ ಪ್ರದೇಶದ ಮಾಲಿನ್ಯಕ್ಕೆ ತುರ್ತು ಪರಿಹಾರ ಒದಗಿಸಿ: ಎಂ.ಎಲ್. ಅಶ್ವಿನಿ

ಕಾಸರಗೋಡು: ಅನಂತಪುರ ಕೈಗಾರಿಕಾ ಪ್ರದೇಶದಲ್ಲಿ ಉಂಟಾಗಿರುವ ಪರಿಸರ ಮಾಲಿನ್ಯ ಹಾಗೂ ದುರ್ವಾಸನೆ ಸಮಸ್ಯೆಗೆ ತುರ್ತು ಪರಿಹಾರ ಕಂಡುಹಿಡಿಯಬೇಕು ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ M. L. Ashwini ಆಗ್ರಹಿಸಿದರು. ಬಿಜೆಪಿ ಮುಖಂಡರು ಹಾಗೂ ಸ್ಥಳೀಯ ನಿವಾಸಿಗಳೊಂದಿಗೆ ಕೈಗಾರಿಕಾ ಪ್ರದೇಶದ ವಿವಿಧ ಘಟಕಗಳಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, “ಕೈಗಾರಿಕೀಕರಣ ಆರ್ಥಿಕ ಪ್ರಗತಿಗೆ ಅಗತ್ಯವಾದರೂ, ಜನರ ಆರೋಗ್ಯ ಮತ್ತು ಪರಿಸರಕ್ಕೆ ಹಾನಿ ಉಂಟುಮಾಡುವ ಕೈಗಾರಿಕೆಗಳನ್ನು ಕೈಬಿಡಲು ಕೈಗಾರಿಕಾ ಇಲಾಖೆ ಸಿದ್ಧವಾಗಬೇಕು” ಎಂದು ಹೇಳಿದರು. ಜಲಮೂಲಗಳು ಮತ್ತು…

Read More

ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಅಭಿನಂದನಾ ಸಭೆ 24 ರಂದು

ಉಪ್ಪಳ : ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇದರ ವತಿಯಿಂದ ಅಭಿನಂದನಾ ಸಭೆಯು ಶ್ರೀ ಭಾರತ್ ಮಾತಾ ಸೇವಾ ಟ್ರಸ್ಟ್ ಪರಂಬಳ ಕಯ್ಯಾರು ಇದರ ಸಭಾಂಗಣದಲ್ಲಿ ನಡೆಯಲಿದೆ ಸಭೆಯ ಅಧ್ಯಕ್ಷತೆಯನ್ನು ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇದರ ಗೌರವ ಮಾರ್ಗಧರ್ಶಕಿ ಶ್ರೀಮತಿ ರಮ್ಯಾ ಯನ್ ಸೀತಾಂಗೋಳಿ ವಹಿಸಲಿರುವರು. ದಿಕ್ಸೂಚಿ ಭಾಷಣವನ್ನು ಶ್ರೀ ವಿಠಲ ನಾಯಕ್ ಕಲ್ಲಡ್ಕ (ಗೀತಾ ಸಾಹಿತ್ಯ ಸಂಭ್ರಮದ ರೂವಾರಿ ) ಮಾಡಲಿರುವರು. ಮುಖ್ಯ ಅತಿಥಿಗಳಾಗಿ ಶ್ರೀ…

Read More

ಶ್ರೀ ಚೌಕರು ಗುಳಿಗ-ಕೊರಗ ತನಿಯ ಸನ್ನಿದಿಯಲ್ಲಿ ವಾರ್ಷಿಕ ಕೋಲದ ಆಮಂತ್ರಣ ಪತ್ರಿಕೆ ಬಿಡುಗಡೆ

ಶ್ರೀ ಚೌಕರು ಗುಳಿಗ, ಶ್ರೀ ಕೊರಗ ತನಿಯ ಸನ್ನಿದಿ ದೊಡ್ಡ ಹಿತ್ತಿಲು ಮಠ ಮೊಗ್ರಾಲ್ ಪುತ್ತೂರು , ಮೇ 23, 2026ರಂದು ನಡೆಯಲಿರುವ ವಾರ್ಷಿಕ ಕೋಲದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು. ಸನ್ನಿಧಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಚಾಮುಂಡೇಶ್ವರಿ ಭಜನಾ ಮಂದಿರದ ಆಡಳಿತ ಸಮಿತಿ ಅಧ್ಯಕ್ಷರಾದ ಶ್ರೀದರ ನಡುಹಿತ್ಲು ಅವರ ಸಮ್ಮುಖದಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ದೈವದಪಾತ್ರಿ ಶ್ರೀ ರಾಮ ಪಂಜದಗುಡ್ಡೆ, ಮಂದಿರದ ಅರ್ಚಕರಾದ ಶ್ರೀ ಪ್ರಭಾಕರ ದೊಡ್ಡಹಿತ್ಲು, ಶ್ರೀ…

Read More

ಗಡಿನಾಡು ಕನ್ನಡ ಸೇವೆಗೆ ರಾಜ್ಯ ಮಟ್ಟದ ಗೌರವ: ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ದಂಪತಿಗೆ “ಕರುನಾಡ ಕನ್ನಡ ಗಡಿನಾಡು ಪೋಷಕ ರತ್ನ” ಪ್ರಶಸ್ತಿ

ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗ(ರಿ), ಬೆಂಗಳೂರು ವತಿಯಿಂದ ನೀಡಲಾಗುವ ರಾಜ್ಯ ಮಟ್ಟದ “ಕರುನಾಡ ಕನ್ನಡ ಗಡಿನಾಡು ಪೋಷಕ ರತ್ನ” ಪ್ರಶಸ್ತಿಗೆ ಗಡಿನಾಡು ಕಾಸರಗೋಡಿನ ಕನ್ನಡ ಸೇವಾ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಡಾ. ವಾಮನ್ ರಾವ್ ಬೇಕಲ್ ಹಾಗೂ ಶ್ರೀಮತಿ ಸಂಧ್ಯಾರಾಣಿ ಟೀಚರ್ ದಂಪತಿ ಆಯ್ಕೆಯಾಗಿದ್ದಾರೆ. ಮೇ 25ರಂದು ಹಾವೇರಿ ಜಿಲ್ಲೆಯ ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಗಡಿನಾಡು…

Read More

ಗಡಿನಾಡಿನ ಕ್ರೀಡಾ ತಾರೆ: ರಾಷ್ಟ್ರೀಯ ಥ್ರೋಬಾಲ್ ಟ್ರಯಲ್ಸ್‌ಗೆ ಬೆಳ್ಳೂರಿನ ಆಶಿಶ್ ಆಯ್ಕೆ!

​ಕಾಸರಗೋಡು: ಗಡಿನಾಡು ಕಾಸರಗೋಡಿನ ಕ್ರೀಡಾ ಇತಿಹಾಸದ ಸುವರ್ಣ ಪುಟಕ್ಕೆ ಮತ್ತೊಂದು ಹೆಮ್ಮೆಯ ಗರಿ ಸೇರ್ಪಡೆಯಾಗಿದ್ದು, ಗಡಿನಾಡಿನ ನೆಲದ ಪ್ರತಿಭೆಯೊಂದು ರಾಷ್ಟ್ರಮಟ್ಟದಲ್ಲಿ ಮಿಂಚಲು ಸಜ್ಜಾಗಿದೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ಮೇ 21 ರಿಂದ 23 ರವರೆಗೆ ಜರುಗಲಿರುವ 31ನೇ ರಾಷ್ಟ್ರೀಯ ಸಬ್-ಜೂನಿಯರ್ ಥ್ರೋಬಾಲ್ ಚಾಂಪಿಯನ್‌ಶಿಪ್ ಹಾಗೂ 35ನೇ ಫೆಡರೇಶನ್ ಕಪ್ ಸೀನಿಯರ್ ಪಂದ್ಯಾವಳಿಗಾಗಿ, ಕೇರಳ ರಾಜ್ಯ ತಂಡವನ್ನು ಪ್ರತಿನಿಧಿಸುವ ಮುಕ್ತ ಆಯ್ಕೆ ಟ್ರಯಲ್ಸ್‌ಗೆ ಬೆಳ್ಳೂರಿನ ಹೆಮ್ಮೆಯ ಕ್ರೀಡಾಪಟು ಆಶಿಶ್ ಕೆ.ಪಿ. ಭರ್ಜರಿಯಾಗಿ ಆಯ್ಕೆಯಾಗಿದ್ದಾರೆ.​ರಾಷ್ಟ್ರೀಯ ಥ್ರೋಬಾಲ್ ಫೆಡರೇಶನ್‌ನ ತುರ್ತು ಪ್ರಕಟಣೆಯ ಹಿನ್ನೆಲೆಯಲ್ಲಿ,…

Read More
error: Content is protected !!