ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆರಿಂದ ಮಂಜೇಶ್ವರ ಎನ್‌ಡಿಎ ಚುನಾವಣಾ ಕಚೇರಿ ಉದ್ಘಾಟನೆ

ಮಂಜೇಶ್ವರ: ಮಂಜೇಶ್ವರ ಮಂಡಲದ ವಿಧಾನಸಭಾ ಕ್ಷೇತ್ರದ ಚುನಾವಣಾ ಕಚೇರಿಯನ್ನು ಮಂಗಲ್ಪಾಡಿ ಪಂಚಾಯತಿನ ಸೊಂಕಲ್ ನಲ್ಲಿ ಕೇಂದ್ರ ಸಚಿವೆ ಕೇರಳ ರಾಜ್ಯ ವಿಧಾನಸಭಾ ಚುನಾವಣೆಯ ಸಹ ಪ್ರಭಾರಿ, ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎನ್‌ಡಿಎ (NDA) ಚುನಾವಣಾ ಸಮಿತಿ ಕಚೇರಿಯನ್ನು, ವಿಧಾನಸಭಾ ಚುನಾವಣೆಯ ರಾಜ್ಯ ಸಹ-ಪ್ರಭಾರಿಯೂ ಆಗಿರುವ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಉದ್ಘಾಟಿಸಿದರು ಕೇರಳ ಬಿಜೆಪಿ ರಾಜ್ಯ ಮಾಜಿ ರಾಜ್ಯಾಧ್ಯಕ್ಷರಾದ ಶ್ರೀ ಕೆ ಸುರೇಂದ್ರನ್, ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಪ್ರಭಾರಿ…

Read More

ಜೈ ಶ್ರೀರಾಮ್ ಸಮಾಜ ಸೇವಾ ಸಂಸ್ಥೆಯ ದಶಮಾನೋತ್ಸವ: ನಿರ್ಗತಿಕರಿಗೆ ಆಹಾರ ಕಿಟ್, ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಹೊಸಂಗಡಿ: ಜೈ ಶ್ರೀರಾಮ್ ಸಮಾಜ ಸೇವಾ ಸಂಸ್ಥೆಯ ದಶಮಾನೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಹೊಸಂಗಡಿ ಅಯ್ಯಪ್ಪ ಭಜನಾ ಮಂದಿರದಲ್ಲಿ ಸಮಾಜ ಸೇವಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ 100 ನಿರ್ಗತಿಕ ಕುಟುಂಬಗಳಿಗೆ ಆಹಾರದ ಕಿಟ್‌ಗಳನ್ನು ಹಾಗೂ 100 ಬಡ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೆರವು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಮಾಜ ಸೇವೆಯ ಮೂಲಕ ಬಡವರ ಜೀವನದಲ್ಲಿ ಬೆಳಕು ತರಲು ಸಂಸ್ಥೆ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಸಂಘಟನೆಯ ಮುಖಂಡರು ತಿಳಿಸಿದ್ದಾರೆ. ದಶಮಾನೋತ್ಸವದ ಅಂಗವಾಗಿ…

Read More

ತಲಪಾಡಿ ಟೋಲ್ ಗೇಟ್ ಬಳಿ ಸ್ಕೂಟರ್ ಸವಾರನಿಗೆ ಹೃದಯಾಘಾತ

ಮಂಜೇಶ್ವರ: ಸ್ಕೂಟರಿನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ರಸ್ತೆಯಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ರವಿವಾರ ಬೆಳಿಗ್ಗೆ ತಲಪಾಡಿ ಟೋಲ್ ಗೇಟ್ ಸಮೀಪ ನಡೆದಿದೆ. ಕುಂಬಳೆ ಬಂಬ್ರಾಣದ ಚೂರಿತ್ತಡ್ಕ ನಿವಾಸಿ ಆಶ್ರಫ್ ಯಾನೆ ಎಳೇಪ್ಪಾ ಅಶ್ರಫ್ (58) ಸಾವನ್ನಪ್ಪಿದ ದುರ್ದೈವಿ. ​ರವಿವಾರ ಬೆಳಿಗ್ಗೆ ಸುಮಾರು 6 ಗಂಟೆಗೆ ಆಶ್ರಫ್ ಅವರು ಕುಂಬಳೆಯಿಂದ ಮಂಗಳೂರು ಕಡೆಗೆ ಸ್ಕೂಟರಿನಲ್ಲಿ ತೆರಳುತ್ತಿದ್ದರು. ತಲಪಾಡಿ ಟೋಲ್ ಗೇಟ್ ದಾಟಿದ ಕೂಡಲೇ ತೀವ್ರ ಹೃದಯಾಘಾತ ಸಂಭವಿಸಿ ರಸ್ತೆಯಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಸ್ಥಳೀಯರು ಅವರನ್ನು ಮಂಗಳೂರಿನ ಆಸ್ಪತ್ರೆಗೆ…

Read More

ಪೈವಳಿಕೆ ರಕ್ತಸಾಕ್ಷಿ ಮಂಟಪದಿಂದ ಕೆ.ಆರ್. ಜಯಾನಂದ ಪರ್ಯಟನೆಗೆ ಚಾಲನೆ

ಮಂಜೇಶ್ವರ: ಕೇರಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎಲ್‌ಡಿಎಫ್ ಅಭ್ಯರ್ಥಿ ಕೆ.ಆರ್. ಜಯಾನಂದ ಅವರು ಪೈವಳಿಕೆ ರಕ್ತಸಾಕ್ಷಿ ಮಂಟಪದಿಂದ ತಮ್ಮ ಚುನಾವಣಾ ಪ್ರಚಾರ ಪರ್ಯಟನೆಗೆ ಚಾಲನೆ ನೀಡಿದರು. ಪರ್ಯಟನೆ ಆರಂಭಕ್ಕೂ ಮುನ್ನ ರಕ್ತಸಾಕ್ಷಿ ಸ್ಮಾರಕಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು. ಬಳಿಕ ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರ ಸಮ್ಮುಖದಲ್ಲಿ ಪ್ರಚಾರ ಯಾತ್ರೆ ಆರಂಭವಾಯಿತು. ಈ ಸಂದರ್ಭದಲ್ಲಿ ಎಲ್‌ಡಿಎಫ್ ಘಟಕದ ನಾಯಕರು, ವಿವಿಧ ಎಡಪಕ್ಷಗಳ ಕಾರ್ಯಕರ್ತರು ಹಾಗೂ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಈ…

Read More

ಮಾರ್ಚ್ 28ರಂದು ಕಾಸರಗೋಡಿನಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯೋತ್ಸವ ಮತ್ತು ಮಕ್ಕಳ ಕವಿಗೋಷ್ಠಿ

ಕಾಸರಗೋಡು: ಮಕ್ಕಳ ಸಾಹಿತ್ಯವನ್ನು ಪುನಶ್ಚೇತನಗೊಳಿಸಿ ಮಕ್ಕಳಲ್ಲಿ ಅಡಗಿರುವ ಸಾಹಿತ್ಯ ಪ್ರತಿಭೆಯನ್ನು ಬೆಳಗಿಸಲು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕವು ಹಲವು ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ. 2019ರಲ್ಲಿ ಶಿವರಾಮ ಕಾಸರಗೋಡು ಅವರ ಅಧ್ಯಕ್ಷತೆಯಲ್ಲಿ ಸ್ಥಾಪಿತವಾದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕವು ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ, ಮಕ್ಕಳ ಸಾಹಿತ್ಯೋತ್ಸವ, ಮಕ್ಕಳ ಕವಿಗೋಷ್ಠಿ ಸೇರಿದಂತೆ ವಿವಿಧ ಕನ್ನಡಪರ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತ ಬಂದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ…

Read More

ಬಾಕುಡ ಸಮುದಾಯದ ವಿವಿಧ ದೇವಸ್ಥಾನಗಳಲ್ಲಿ ನೇಮೋತ್ಸವ ಮಾರ್ಚ್ 15 ರಿಂದ 28 ರ ವರೆಗೆ

ಮಂಜೇಶ್ವರ: ಬಾಕುಡ ಸಮುದಾಯದ 18 ದೇವಸ್ಥಾನಗಳಲ್ಲಿ ನೇಮೋತ್ಸವ ಹಾಗೂ ನಾಗ ಬೆರ್ಮೆರೆ ಸೇವೆಯು ಮಾರ್ಚ್ 15 ರಿಂದ 28 ರ ವರೆಗೆ ವಿವಿಧ ದೈವಸ್ಥಾನ ಹಾಗೂ ನಾಗ ಬನದಲ್ಲಿ ಜರಗಲಿದೆ. ಇದರ ಭಾಗವಾಗಿ ನೇಮೋತ್ಸವದ ಉದಿಪು ಕ್ಷೇತ್ರ ಎಂದು ಕರೆಯಲ್ಪಡುವ ಕೊಡಿಂಚಿರ್ ಗೆ ಮಾರ್ಚ್ 15 ರಂದು ಬಳ್ಳಾರ್ ಭಂಡಾರ ಮನೆಯಿಂದ ಭಂಡಾರ ಹೊರಡಲಿದೆ.ಈ ಸಂಧರ್ಭದಲ್ಲಿ ಸಮುದಾಯದ 18 ದೈವಸ್ಥಾನಗಳ ದೈವದ ಪಾತ್ರಿಗಳು, ಅಡಳಿತ ಸಮಿತಿಯ ಪ್ರತಿನಿಧಿಗಳು ಮತ್ತು ಬಾಕುಡ ಸಮುದಾಯದ ಕೇಂದ್ರ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದು…

Read More

​ಪೊಲೀಸರ ಮೇಲೆಯೇ ಪೈಶಾಚಿಕ ದಾಳಿ: ಹನಿಟ್ರ್ಯಾಪ್ ಆರೋಪಿಯ ಬಂಧನ ವೇಳೆ ಮಂಜೇಶ್ವರದಲ್ಲಿ ಹೈಡ್ರಾಮಾ!

​ಮಂಜೇಶ್ವರ: ಹೊಸಂಗಡಿಯ ಲಾಡ್ಜ್‌ವೊಂದರಲ್ಲಿ ಪ್ರೇಮಿಗಳನ್ನು ಬೆದರಿಸಿ ನಗ್ನ ವಿಡಿಯೋ ಚಿತ್ರೀಕರಿಸಿದ ‘ಹನಿಟ್ರ್ಯಾಪ್’ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಲು ಹೋದ ಪೊಲೀಸರ ಮೇಲೆ ಅಮಾನವೀಯವಾಗಿ ಕಲ್ಲು ತೂರಾಟ ನಡೆಸಿದ ಘಟನೆ ಮಚ್ಚಂಪಾಡಿಯಲ್ಲಿ ನಡೆದಿದೆ. ಕಾನೂನು ರಕ್ಷಕರ ಮೇಲೆಯೇ ನಡೆದ ಈ ದಾಳಿಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಮಂಜೇಶ್ವರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ​ಕಳೆದ ಜನವರಿ 14ರಂದು ಹೊಸಂಗಡಿಯ ಲಾಡ್ಜ್‌ಗೆ ಅತಿಕ್ರಮಿಸಿ ಪ್ರೇಮಿಗಳನ್ನು ಬೆದರಿಸಿ, ಅವರ ನಗ್ನ ವಿಡಿಯೋ ಮಾಡಿ ಹಣ ವಸೂಲಿ ಮಾಡಿದ್ದ ತಂಡದಲ್ಲಿ ಮಚ್ಚಂಪಾಡಿಯ ಹೈದರ್…

Read More

ಕಾಸರಗೋಡು ಬ್ಲಾಕ್ ಪಂಚಾಯತ್ ಆಡಳಿತ ಸಮಿತಿ ಆಯೋಜಿಸಿದ ಇಫ್ತಾರ್ ಸ್ನೇಹ ಆತಿಥ್ಯ

ಕಾಸರಗೋಡು: ಕಾಸರಗೋಡು ಬ್ಲಾಕ್ ಪಂಚಾಯತ್ ಆಡಳಿತ ಸಮಿತಿ ಪಂಚಾಯತ್ ಆವರಣದಲ್ಲಿ ಆಯೋಜಿಸಿದ್ದ ಇಫ್ತಾರ್ ಸ್ನೇಹ ಆತಿಥ್ಯದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರ ಉಪಸ್ಥಿತಿಯಿಂದ ಗಮನಾರ್ಹವಾಗಿ ನಡೆಯಿತು. ಇಂತಹ ಕೂಟಗಳು ಸಮಾಜದಲ್ಲಿ ಸೌಹಾರ್ದ ಮತ್ತು ಸ್ನೇಹವನ್ನು ಬೆಳೆಸಲು ಇಂದಿನ ಕಾಲದಲ್ಲಿ ಬಹಳ ಮಹತ್ವದ್ದಾಗಿದೆ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಂಎಲ್‌ಎ ಎನ್.ಎ.ನೆಲ್ಲಿಕುನ್ನು ಅವರು ಹೇಳಿದರು.ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ. ಅಬ್ದುಲ್ಲ ಕುಂಞ ಚೆರ್ಕಳ ಅಧ್ಯಕ್ಷತೆ ವಹಿಸಿದರು.ಅಭಿವೃದ್ಧಿ ಕಾರ್ಯಗಳ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕರ್ಳ ಸ್ವಾಗತಿಸಿದರು. ಕಲ್ಲಟ್ರ ಮಹೀನ್ ಹಾಜಿ,…

Read More

​ಹೊಸಂಗಡಿಯ ‘ಸಂಗಮ’ ಕೊಂಡಿ ಕಳಚಿತು: ಜನಪ್ರಿಯ ಹೋಟೆಲ್ ಉದ್ಯಮಿ ಮಾಧವ ಇನ್ನಿಲ್ಲ

​ಮಂಜೇಶ್ವರ: ಹೊಸಂಗಡಿ ಪೇಟೆಯ ಅಸ್ಮಿತೆಯಂತಿದ್ದ, ಹಿರಿಯ ಹೋಟೆಲ್ ಉದ್ಯಮಿ ಮತ್ತು ಸಾಮಾಜಿಕ ಹೋರಾಟಗಾರ ಬಿ. ಎಂ. ಮಾಧವ ಸಂಗಮ್ (74) ಅವರು ನಿನ್ನೆ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನದೊಂದಿಗೆ ಮಂಜೇಶ್ವರದ ಒಂದು ಸುದೀರ್ಘ ಸಾಮಾಜಿಕ ಪರ್ವ ಅಂತ್ಯಗೊಂಡಂತಾಗಿದೆ.ಕೇವಲ ಹೋಟೆಲ್ ಆಗಿರಲಿಲ್ಲ ‘ಸಂಗಮ್’ ಬಿ. ಎಂ. ನಾರಾಯಣ ಅವರಿಂದ ಬಳುವಳಿಯಾಗಿ ಬಂದ ‘ಸಂಗಮ್ ಹೋಟೆಲ್’ ಅನ್ನು ಮಾಧವ ಅವರು ಕೇವಲ ಒಂದು ಉಪಾಹಾರ ಗೃಹವಾಗಿ ಉಳಿಸಲಿಲ್ಲ. ಅದು ನಾಡಿನ ಹಿರಿಯರು, ಕಿರಿಯರು ಒಟ್ಟಾಗಿ ಕುಳಿತು ಚರ್ಚಿಸುವ, ಸಾಮಾಜಿಕ ವಿಷಯಗಳ…

Read More

ಪೈವಳಿಕೆ ಕಮ್ಯೂನಿಸ್ಟ್ ನೇತಾರರ ಕೂಟ ನೇತೃತ್ವದಲ್ಲಿ ಇಫ್ತಾರ್ ಸಂಗಮ

ಪೈವಳಿಕೆ: ಪೈವಳಿಕೆ ಕಮ್ಯೂನಿಸ್ಟ್ ನೇತಾರರ ಕೂಟದ ನೇತೃತ್ವದಲ್ಲಿ ಇಫ್ತಾರ್ ಸಂಗಮವನ್ನು ಆಯೋಜಿಸಲಾಯಿತು. ಪೈವಳಿಕೆಯ ಲಾಲ್‌ಬಾಗ್‌ನಲ್ಲಿ ನಡೆದ ಈ ಇಫ್ತಾರ್ ಕಾರ್ಯಕ್ರಮದಲ್ಲಿ ಹಲವರು ಭಾಗವಹಿಸಿ ಸೌಹಾರ್ದತೆಯ ಸಂದೇಶವನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಮುಖಂಡರು ಮತ್ತು ಸ್ಥಳೀಯರು ಉಪಸ್ಥಿತರಿದ್ದು, ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.ಕೆ.ಆರ್. ಜಯಾನಂದ, ಪುರುಷೋತ್ತಮ ಬಳ್ಳೂರು, ಹಾರಿಸ್ ಪೈವಳಿಕೆ, ಬಶೀರ್ ಬಿ.ಎ., ವಿನಯ್ ಬಾಯರ್, ಸತ್ತಾರ್ ಬಳ್ಳೂರು, ಅಶೋಕ್ ಭಂಡಾರಿ, ಚಂದ್ರ ನಾಯ್ಕ್ ಸೇರಿದಂತೆ ಹಲವರು ಈ ಇಫ್ತಾರ್ ಸಂಗಮದಲ್ಲಿ ಪಾಲ್ಗೊಂಡಿದ್ದರು.

Read More
error: Content is protected !!