ಮಂಜೇಶ್ವರದ ಪೊಸೋಟು ಸರ್ವೀಸ್ ರಸ್ತೆಯಲ್ಲಿ ತೆರೆದ ಗುಂಡಿ – ತಪ್ಪದ ಅಪಾಯ, ಸಾರ್ವಜನಿಕರ ಆಕ್ರೋಶ
ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿಯ ಪೊಸೋಟು ಸೇತುವೆಗೆ ತಾಗಿಕೊಂಡಿರುವ ಸರ್ವೀಸ್ ರಸ್ತೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಬಲಿಯಾಗುತ್ತಿದ್ದಾರೆ. ನೀರು ಪೋಲಾಗುವುದನ್ನು ತಡೆಯಲು ತಿಂಗಳುಗಳ ಹಿಂದೆ ತೋಡಲಾದ ಗುಂಡಿಯನ್ನು ಇದುವರೆಗೆ ಮುಚ್ಚದ ಕಾರಣ, ಈ ಪ್ರದೇಶವು ಈಗ ಅಪಘಾತಗಳ ತಾಣವಾಗಿ ಮಾರ್ಪಟ್ಟಿದೆ. ಕೆಲವು ತಿಂಗಳುಗಳ ಹಿಂದೆ ಈ ಸರ್ವೀಸ್ ರಸ್ತೆಯ ಅಡಿಯಲ್ಲಿ ಹಾದುಹೋಗುವ ಜಲಮಂಡಳಿಯ ಪೈಪ್‌ಲೈನ್ ಒಡೆದು ನೀರು ಪೋಲಾಗುತ್ತಿತ್ತು. ಇದನ್ನು ದುರಸ್ತಿ ಮಾಡುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿಗೆ ತೀರಾ ಹತ್ತಿರದಲ್ಲೇ ದೊಡ್ಡ ಗುಂಡಿಯೊಂದನ್ನು ತೋಡಲಾಗಿತ್ತು. ಆದರೆ, ದುರಸ್ತಿ ಕಾರ್ಯ…
