ಉಪ್ಪಳ ಎಕ್ಸ್‌ಪೋ–26 ಆರಂಭ: ಮನರಂಜನೆ, ಸ್ಪರ್ಧೆಗಳು, ಫ್ಲವರ್ ಶೋಗೆ ಸಜ್ಜು

ಕಾಸರಗೋಡು ಜಿಲ್ಲೆಯ ಉಪ್ಪಳದಲ್ಲಿ ಅವಧಿ ಕಾಲವನ್ನು ಮನರಂಜನೆಯಿಂದ ಕಳೆಯಲು ‘ಉಪ್ಪಳ ಎಕ್ಸ್‌ಪೋ–26’ ನಾಳೆಯಿಂದ ಆರಂಭಗೊಳ್ಳಲಿದೆ. ಈ ಕಾರ್ಯಕ್ರಮವನ್ನು ಏಷಿಯನ್ ಟೂರ್ಸ್ ಆಂಡ್ ಟ್ರಾವೆಲ್ಸ್ ಸಂಸ್ಥೆ ಪ್ರಾಯೋಜಿಸಿದೆ. ಪ್ರತಿದಿನ ಸಂಜೆ 3 ಗಂಟೆಯಿಂದ ರಾತ್ರಿ 10.30ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 8ರಿಂದ 10.30ರವರೆಗೆ ಮಲಯಾಳಂ ಚಿತ್ರರಂಗದ ಖ್ಯಾತ ಕಲಾವಿದರು ಭಾಗವಹಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಕ್ಕಳು ಹಾಗೂ ಹಿರಿಯರಿಗಾಗಿ ವೈವಿಧ್ಯಮಯ ಸ್ಪರ್ಧೆಗಳು ಮತ್ತು ತಕ್ಷಣದ ಬಹುಮಾನ ವಿತರಣೆ ವ್ಯವಸ್ಥೆಯೂ ಇರಲಿದೆ. ಇದರೊಂದಿಗೆ ಫ್ಲವರ್ ಶೋ ಹಾಗೂ ಅಪರೂಪದ…

Read More

5 ವರ್ಷಗಳಿಂದ ಖಾಸಗಿ ಜಾಗದಲ್ಲೇ ಸೇತುವೆ ಸ್ಲಾಬ್‌ಗಳು: ಪಂಚಾಯತ್ ನಿರ್ಲಕ್ಷ್ಯ ಬಯಲು

​ಮಂಜೇಶ್ವರ: ಅಭಿವೃದ್ಧಿ ಕಾಮಗಾರಿಗಳಿಗಾಗಿ ತಂದಿರಿಸಿದ ಸಾಮಗ್ರಿಗಳನ್ನು ಸಕಾಲದಲ್ಲಿ ಬಳಸದಿದ್ದರೆ ಅದು ಸಾರ್ವಜನಿಕರಿಗೆ ಹೇಗೆ ಹೊರೆಯಾಗಬಹುದು ಎಂಬುದಕ್ಕೆ ಮಂಜೇಶ್ವರ ಗ್ರಾಮ ಪಂಚಾಯತ್‌ನ 23ನೇ ವಾರ್ಡ್ ಒಂದು ಜ್ವಲಂತ ಉದಾಹರಣೆಯಾಗಿದೆ. ಇಲ್ಲಿನ ನಿವಾಸಿ ಸನ್ನಿ ಎಂಬುವವರ ಖಾಸಗಿ ಜಾಗದಲ್ಲಿ ಕಾಲು ಸೇತುವೆಗೆ ಬಳಸಬೇಕಾದ ಸ್ಲಾಬ್‌ಗಳನ್ನು ತಂದಿರಿಸಿ ಬರೋಬ್ಬರಿ 5 ವರ್ಷಗಳು ಕಳೆದಿವೆ. ಆದರೆ, ಈವರೆಗೆ ಆ ಸ್ಲಾಬ್‌ಗಳನ್ನು ಅಲ್ಲಿಂದ ತೆರವುಗೊಳಿಸದೆ ಪಂಚಾಯತ್ ಆಡಳಿತವು ವಿನಾಕಾರಣ ವಿಳಂಬ ಧೋರಣೆ ಅನುಸರಿಸುತ್ತಿದೆ.​​ಸುಮಾರು ಐದು ವರ್ಷಗಳ ಹಿಂದೆ ಸ್ಥಳೀಯವಾಗಿ ಕಾಲು ಸೇತುವೆಯೊಂದನ್ನು ನಿರ್ಮಿಸುವ ಉದ್ದೇಶದಿಂದ…

Read More

ಡಾ. ಸಚಿನ್ ಬೇಕಲ್‌ಗೆ “ಭರವಸೆಯ ಭಾರತ ರತ್ನ ಪ್ರಶಸ್ತಿ 2026” ಗೌರವ

ಕಾಸರಗೋಡು : ಆಲ್ ಇಂಡಿಯಾ ಲೆವೆಲ್ನಲ್ಲಿ ರಾಂಕ್ ಗಳಿಸಿ ಮುಂಬೈಯ ಕೆ. ಇ. ಎಮ್. ಆಸ್ಪತ್ರೆಯಲ್ಲಿ ನ್ಯೂರೋಸರ್ಜರಿ ಎಮ್. ಸಿ. ಎಚ್. ಉಪರಿಪಠನಕ್ಕೆ ಆಯ್ಕೆಯಾದ ಕಾಸರಗೋಡು ಅನಂಗೂರು ನಿವಾಸಿಯಾದ, ಡಾ. ಸಚಿನ್ ಬೇಕಲ್ ಇವರೀಗೆ ಕಾಸರಗೋಡು ಕನ್ನಡ ಭವನದ ಸ್ಥಾಪಕ ಸಂಚಾಲಕರಾದ ಡಾ ವಾಮನ್ ರಾವ್ ಬೇಕಲ್ -ಸಂಧ್ಯಾ ರಾಣಿ ದಂಪತಿಗಳು “ಭರವಸೆಯ ಭಾರತ ರತ್ನ ” ಅಭಿನಂದನಾ ಪ್ರಶಸ್ತಿ ನೀಡಿ ಗೌರವಿಸಿದರು. ಧಾರ್ಮಿಕ ರತ್ನ ಡಾ. ಕೆ. ಏನ್. ವೆಂಕಟ್ರಮಣ ಹೊಳ್ಳ ಉದ್ಘಾಟಿಸಿದ ಕನ್ನಡ ಭವನ…

Read More

“ಕೇರಳ ಮತ್ತೆ ಎಡಪಂಥದೊಂದಿಗೆ; ಆಡಳಿತ ಮುಂದುವರಿಕೆ ಖಚಿತ” – ಎಂ. ಸ್ವರಾಜ್ ಹೇಳಿಕೆ

Kumbla: ಕೇರಳ ಮತ್ತೆ ಎಡಪಂಥದೊಂದಿಗೆ ನಿಂತಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಬಹುಮತದೊಂದಿಗೆ ಆಡಳಿತ ಮುಂದುವರಿಯಲಿದೆ ಎಂದು ಎಂ. ಸ್ವರಾಜ್ ಹೇಳಿದ್ದಾರೆ. ಕುಂಬಳೆಯಲ್ಲಿ ನಡೆದ ಭಾಸ್ಕರ್ ಕುಂಬಳೆ ಅವರ ರಕ್ತಸಾಕ್ಷಿ ದಿನಾಚರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ರಾಜಕೀಯ ಪರಿಸ್ಥಿತಿಯನ್ನು ವಿಶ್ಲೇಷಿಸಿದರು. 2021ರ ಚುನಾವಣೆಗೆ ಮುನ್ನವೇ ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿ ಯಾರು ಆಗಬೇಕು ಎಂಬುದನ್ನು ತೀರ್ಮಾನಿಸಿಕೊಂಡಿತ್ತು ಎಂದು ಅವರು ಟೀಕಿಸಿದರು. “ಎರಡೂವರೆ ವರ್ಷ ಉಮ್ಮನ್ ಚಾಂಡಿ ಹಾಗೂ ನಂತರದ ಅವಧಿಯಲ್ಲಿ ರಮೇಶ್ ಚೆನ್ನಿತಾಲ ಮುಖ್ಯಮಂತ್ರಿ ಆಗಬೇಕು ಎಂಬ…

Read More

ಕನ್ನಡ ಭವನ ಪ್ರಕಾಶನ ವಾರ್ಷಿಕೋತ್ಸವದಲ್ಲಿ ಕೃತಿ ಬಿಡುಗಡೆ – ‘ಭರವಸೆಯ ಭಾರತ ರತ್ನ’ ಪ್ರಶಸ್ತಿ ಪ್ರದಾನ

Kasaragod: ಗಡಿನಾಡಿನ ಹೆಮ್ಮೆಯ ಕನ್ನಡ ಸಂಸ್ಥೆಯಾದ ಕನ್ನಡ ಭವನದ ಅಂಗ ಸಂಸ್ಥೆ ಕನ್ನಡ ಭವನ ಪ್ರಕಾಶನದ ಮೂರನೇ ವಾರ್ಷಿಕೋತ್ಸವ ಸಂಭ್ರಮವು ಏಪ್ರಿಲ್ 22ರಂದು ಕನ್ನಡ ಭವನ ಗ್ರಂಥಾಲಯ ವೇದಿಕೆಯಲ್ಲಿ ಅರ್ಥಪೂರ್ಣವಾಗಿ ಜರುಗಿತು. ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾ ರಾಣಿ ಟೀಚರ್ ಅವರ ಸಾರಥ್ಯದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಕನ್ನಡ ಭವನ ನಿರ್ದೇಶಕರಾದ ಡಾ. ವೆಂಕಟ್ರಮಣ ಹೊಳ್ಳ ಉದ್ಘಾಟಿಸಿದರು. ಪತ್ರಕರ್ತ ಹಾಗೂ ರಾಮರಾಜ ಕ್ಷತ್ರಿಯ ಸೇವಾಸಂಘ ಜಿಲ್ಲಾಧ್ಯಕ್ಷ ಪ್ರದೀಪ್ ಬೇಕಲ್ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ…

Read More

ಮಂಜೇಶ್ವರದಲ್ಲಿ ರಾಜಕಾಲುವೆ ಕಸದ ಗುಡ್ಡ – ಸಾಂಕ್ರಾಮಿಕ ರೋಗ ಭೀತಿ, ಸಾರ್ವಜನಿಕರ ಆಕ್ರೋಶ

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿಯ ಮಳೆ ನೀರು ಸುಗಮವಾಗಿ ಹರಿದು ಹೋಗಲೆಂದು ನಿರ್ಮಿಸಲಾದ ಉದ್ಯಾವರ ಮಾಡ ಪರಿಸರದ ವಾಟರ್ ಚಾನಲ್ (ರಾಜಕಾಲುವೆ), ಇದೀಗ ಕಿಡಿಗೇಡಿಗಳ ಅಕ್ಷಮ್ಯ ವರ್ತನೆಯಿಂದಾಗಿ ‘ಸಾಂಕ್ರಾಮಿಕ ರೋಗಗಳ ತವರು’ ಆಗಿ ಮಾರ್ಪಟ್ಟಿದೆ. ಹೆದ್ದಾರಿಯಿಂದ ಹರಿದು ಬರುವ ನೀರು ಕುಂಡುಕೊಳಕೆ ಹಾಗೂ ಅಂಜರೆ ಮಾರ್ಗವಾಗಿ ಸಮುದ್ರವನ್ನು ಸೇರಬೇಕಿತ್ತು. ಆದರೆ, ಪ್ರಸ್ತುತ ಈ ಕಾಲುವೆಯು ಪ್ಲಾಸ್ಟಿಕ್ ಲೋಟ-ಚೀಲಗಳು, ಹಸಿ ಕಸ ಹಾಗೂ ಹಾದಿಹೋಕರು ಎಸೆಯುವ ಕೋಳಿ ತ್ಯಾಜ್ಯದಿಂದ ತುಂಬಿ ತುಳುಕುತ್ತಿದೆ. ಕಾಲುವೆಯಲ್ಲಿ ನೀರು ಹರಿಯುವ ಬದಲು ಕೊಳೆತ ತ್ಯಾಜ್ಯಗಳು…

Read More

ಕೀಳೂರಿನಲ್ಲಿ ಗುಂಡಾಗಿರಿ: ಪ್ರವಾಸಿ ಯುವಕನಿಗೆ ಚಾಕು ಇರಿತ, ಗಂಭೀರ ಗಾಯ

ಕಾಸರಗೋಡು: ಕೀಳೂರು ಪ್ರದೇಶದಲ್ಲಿ ಗುಂಡಾಸಂಘದ ದಾಳಿ ನಡೆದಿದ್ದು, ಪ್ರವಾಸಿ ಯುವಕನಿಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಕೀಳೂರಿನ ಮಹಮ್ಮದ್ ಕುಂಜಿ ಅವರ ಪುತ್ರ ಹಾಗೂ ಗಲ್ಫ್ ದೇಶದಲ್ಲಿ ಉದ್ಯೋಗದಲ್ಲಿರುವ ಮಿಗ್ದಾದ್ (32) ಗಾಯಗೊಂಡ ವ್ಯಕ್ತಿ. ಅವರನ್ನು ಕಾಸರಗೋಡು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಗಾಯಾಳು ಮಿಗ್ದಾದ್ ನೀಡಿದ ಮಾಹಿತಿ ಪ್ರಕಾರ,ಕಾಞ್ಞಂಗಾಡಿನಲ್ಲಿ ಆಟ ವೀಕ್ಷಿಸಿ ತಮ್ಮ ಸಹೋದರ, ಇಬ್ಬರು ಚಿಕ್ಕ ಮಕ್ಕಳು ಮತ್ತು ಸ್ನೇಹಿತರೊಂದಿಗೆ ರಾತ್ರಿ ಸುಮಾರು 11 ಗಂಟೆಗೆ ಕಾರಿನಲ್ಲಿ…

Read More

ಕುಂಬಳೆಯಲ್ಲಿ ಯುವಕನ ಹತ್ಯೆ ಯತ್ನ ಪ್ರಕರಣ: ಆರು ಮಂದಿ ಆರೋಪಿಗಳ ಬಂಧನ

ಕಾಸರಗೋಡು: ಕುಂಬಳೆಯ ಕೃಷ್ಣನಗರ ಸಮೀಪ ಯುವಕನನ್ನು ಹತ್ಯೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಆರು ಮಂದಿ ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ. ಕುಂಬಳೆ ಕುಂಟಾಗಿರಡ್ಕ ಪ್ರದೇಶದ ಮಹಮ್ಮದ್ ಹಾಶಿಂ (ಆಶಿಂ), ಅಬು ಜಾಸಿಂ (ಜಾಸಿ), ರಮೀಸ್ ರೋಷಾಲ್ ಫಿರೋಸ್ (ರಮೀಸ್), ಮಿನ್ಹಾಜ್ ಅಬ್ದುಲ್ಲ (ಮಿನ್ಹಾಜ್), ಫಝಲ್ ರಹ್ಮಾನ್ (ಪಜಿಲು) ಮತ್ತು ಮೊಹಿಯುದ್ದೀನ್ ನಿಹಾಲ್ (ನಿಹಾಲ್) ಇವರು ಕುಂಬಳ ಪೊಲೀಸ್ ಠಾಣೆಯ ಉಪನಿರೀಕ್ಷಕ ಅನಂತಕೃಷ್ಣನ್ ಆರ್ ಮೆನನ್ ಅವರ ಮುಂದೆ ಶರಣಾಗಿದ್ದಾರೆ. ಮಾರ್ಚ್ 30ರಂದು ಮಧ್ಯರಾತ್ರಿ ಸುಮಾರು 12 ಗಂಟೆಗೆ ಕುಂಬಳೆ…

Read More

ಚೆರ್ಕಳದಲ್ಲಿ ಅಗ್ನಿ ಅವಘಡ: ಮನೆ ಮುಂಭಾಗ ಹಾಗೂ ಬೈಕ್‌ಗೆ ಬೆಂಕಿ ಹಚ್ಚಿ ಧ್ವಂಸ, ₹1.3 ಲಕ್ಷ ನಷ್ಟ

ಚೆರ್ಕಳ: ಮನೆ ಮುಂಭಾಗದಲ್ಲಿ ನಿಲ್ಲಿಸಿದ್ದ ಮೋಟಾರ್ ಬೈಕ್ ಹಾಗೂ ಮನೆಯ ಮುಂಭಾಗಕ್ಕೆ ಅಪರಿಚಿತ ವ್ಯಕ್ತಿಗಳು ಬೆಂಕಿ ಹಚ್ಚಿದ ಘಟನೆ ಚೆರ್ಕಳದ ಅಳಕ್ಕ ಪ್ರದೇಶದಲ್ಲಿ ನಡೆದಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಳಕ್ಕ ನಿವಾಸಿ ಅಬ್ದುಲ್ಲ ಅವರ ಪುತ್ರ ಸಿ.ಎ. ಸೈಫುದ್ದೀನ್ ಅವರಿಗೆ ಸೇರಿದ ಪ್ಯಾಶನ್ ಪ್ರೋ ಬೈಕ್‌ನ್ನು ಗುರಿಯಾಗಿಸಿ ಈ ಕೃತ್ಯ ಎಸಗಲಾಗಿದೆ. KL 14 Q 0314 ನೋಂದಣಿ ಸಂಖ್ಯೆಯ ಈ ಬೈಕ್ ಮನೆಯ ಕಾರ್ ಪಾರ್ಕ್ ನಲ್ಲಿ ನಿಲ್ಲಿಸಲಾಗಿತ್ತು. ಪೊಲೀಸರ ಮಾಹಿತಿ ಪ್ರಕಾರ,…

Read More

ಆನೆಕಲ್ಲು ಶಾಲೆಯಲ್ಲಿ ಮೂರು ದಿನಗಳ ವೈವಿಧ್ಯ ಬೇಸಿಗೆ ಶಿಬಿರ ಆರಂಭ

ಆನೆಕಲ್ಲು: ಎಸ್. ಎಸ್. ಕೆ ಕಾಸರಗೋಡು ಹಾಗೂ ಬಿ. ಆರ್. ಸಿ ಮಂಜೇಶ್ವರ ಆಶ್ರಯದಲ್ಲಿ ಮೂರು ದಿನಗಳ ವೈವಿಧ್ಯ ಬೇಸಿಗೆ ಶಿಬಿರವು ಆನೆಕಲ್ಲು ಶಾಲೆಯಲ್ಲಿ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯರಾದ ಹರ್ಷಾದ್ ವರ್ಕಾಡಿ ನೆರವೇರಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಅಶೋಕ್ ಕೊಡ್ಲಮೊಗರು ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ, ಶಾಲಾ ಮುಖ್ಯೋಪಾಧ್ಯಯರಾದ ರವಿಶಂಕರ್ , ಸಿತಾರ ಟೀಚರ್ ಶುಭ ಹಾರೈಸಿದರು. ಬಿ .ಪಿ. ಸಿ ರಾಜ ಗೋಪಾಲನ್ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು….

Read More
error: Content is protected !!