ಯುವ ಪ್ರತಿಭೆಗಳಿಗೆ ವೇದಿಕೆ: ಸ್ವರ್ಗದಲ್ಲಿ ಏಕದಿನ ರಂಗ ಕಾರ್ಯಾಗಾರ
ಭೂಮಿಕಾ ಸಂಡೇ ಥಿಯೇಟರ್ಸ್ ಸ್ವರ್ಗ ಹಾಗೂ ಸಹೋದರ ಸಂಸ್ಥೆಗಳಾದ ಎಂ.ಕೆ. ಬಾಲಕೃಷ್ಣ ಗ್ರಂಥಾಲಯ ಮತ್ತು ವಾಚನಾಲಯ ಹಾಗೂ ಮಾತೃಭೂಮಿ ಸ್ವರ್ಗ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದ ಶಾಲೆ ಸ್ವರ್ಗದಲ್ಲಿ ‘ರಂಗದೀಪಿಕಾ 2026’ ಏಕದಿನ ರಂಗ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಅಧ್ಯಾಪಕ, ಸಂಶೋಧಕ ಹಾಗೂ ಯಕ್ಷಗಾನ ಭಾಗವತ ಡಾ. ಸತೀಶ್ ಪುಣಿಚಿತ್ತಾರಾಯರು ಮಾತನಾಡಿ, “ನಾಟಕದ ಪರಂಪರೆ ಮತ್ತೆ ಸ್ವರ್ಗದಲ್ಲಿ ಆರಂಭವಾಗಿರುವುದು ಸಂತಸದ ಸಂಗತಿ, ಇದು ನಿರಂತರವಾಗಿ ಮುಂದುವರಿಯಲಿ” ಎಂದು ಆಶಿಸಿದರು. ಬಾಲಕೃಷ್ಣ…