ಹೊಸಂಗಡಿ ಬಸ್ ನಿಲ್ದಾಣ ನಿರ್ಲಕ್ಷ್ಯ: ಹೆದ್ದಾರಿಯಲ್ಲೇ ಬಸ್ ನಿಲುಗಡೆ, ಅಪಘಾತ ಭೀತಿ ಹೆಚ್ಚಳ
ಮಂಜೇಶ್ವರ: ಮಂಜೇಶ್ವರ ತಾಲೂಕಿನ ಪ್ರಮುಖ ವ್ಯಾಪಾರ ಕೇಂದ್ರ ಹಾಗೂ ಹೃದಯಭಾಗವಾದ ಹೊಸಂಗಡಿಯಲ್ಲಿ ಸುಸಜ್ಜಿತ ಬಸ್ ನಿಲ್ದಾಣವಿದ್ದರೂ, ಅದರ ಸರಿಯಾದ ಬಳಕೆ ಆಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡೇ ನಿಲ್ದಾಣವಿದ್ದರೂ, ಬಸ್ಸುಗಳು ನಿಲ್ದಾಣದಲ್ಲಿ ನಿಲ್ಲಿಸದೆ ರಸ್ತೆಯಲ್ಲೇ ಪ್ರಯಾಣಿಕರನ್ನು ಹತ್ತಿಸಿ-ಇಳಿಸುತ್ತಿರುವುದು ಸಂಚಾರ ದಟ್ಟಣೆ ಮತ್ತು ಅಪಘಾತಗಳಿಗೆ ಆಹ್ವಾನ ನೀಡುತ್ತಿದೆ. ಕಾಸರಗೋಡು ಮತ್ತು ಮಂಗಳೂರು ನಡುವೆ ಸಂಚರಿಸುವ ಕೆ.ಎಸ್.ಆರ್.ಟಿ.ಸಿ (ಕರ್ನಾಟಕ ಮತ್ತು ಕೇರಳ) ಹಾಗೂ ಖಾಸಗಿ ಬಸ್ಸುಗಳು ನಿಗದಿತ ಬಸ್ ನಿಲ್ದಾಣದಲ್ಲಿ ನಿಲುಗಡೆಗೊಳಿಸುವ ಬದಲು, ಹೆದ್ದಾರಿಯ ತಿರುವುಗಳಲ್ಲೇ…